ಸ್ಯಾಂಡಲವುಡ್​​​ಗೆ ಮತ್ತೊಬ್ಬ ಜ್ಯೂನಿಯರ್​ ಸ್ಟಾರ್​​ ಎಂಟ್ರಿ! ಯಾರು ಆ ಲಿಟ್ಲ್​​ ಮಾಸ್ಟರ್​? ನೀವೆ ನೋಡಿ!!

ಸಾಮಾನ್ಯವಾಗಿ ಕಲಾವಿದರ ಮಕ್ಕಳು ಕಲಾವಿದರಾಗುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಆದರೆ ಇತ್ತೀಚಿಗೆ ನಟ-ನಟಿಯರ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ನಟನಾ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವುದು ಇನ್ನೊಂದು ವಿಶೇಷ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ  ಅಧ್ಯಕ್ಷ ಚಿತ್ರ ಖ್ಯಾತಿಯ ನಟ ಶರಣ್ ಪುತ್ರಿ.

ಹೌದು ಇತ್ತೀಚೆಗೆ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಪುತ್ರವಿನೀಶ್ ‘ಯಜಮಾನ’ ಚಿತ್ರದಲ್ಲಿ ಅಪ್ಪನ ಜೊತೆ ನಟಿಸಿ  ಬೆಳ್ಳಿ ಪರದೆಯ ಮೇಲೆ ಮಿಂಚಿದ್ದರು. ಚಮಕ್ ಚಿತ್ರದ ಮೂಲಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ  ಚಾರಿತ್ರ್ಯಾ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಅಲ್ಲದೆ ಪುತ್ರ ವಿಹಾನ್ ಕೂಡ ‘ಗೀತಾ’ ಸಿನಿಮಾದಲ್ಲಿ ಅಪ್ಪನ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರರವರ ಮಗಳು ಐಶ್ವರ್ಯ ಕೂಡ ‘ದೇವಕಿ’ ಚಿತ್ರದಲ್ಲಿ ಅಮ್ಮನ ಜೊತೆಯಾಗಿ ಮುದ್ದಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ನಟ ದುನಿಯ ವಿಜಯ್ ಪುತ್ರ ಕೂಡ ಚಿತ್ರವೊಂದರಲ್ಲಿ ನಟಿಸಿದ್ದು ಮನಸೆಳೆದಿದ್ದಾರೆ.

ಸದ್ಯ ಇದೀಗಾ ಮತ್ತೊಂದು ಲಿಟಿಲ್ ಸ್ಟಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಅಧ್ಯಕ್ಷ ಚಿತ್ರದ ಮೂಲಕ ಖ್ಯಾತಿ ಪಡೆದು ಕಾಮಿಡಿ ಕಿಂಗ್ ಎಂದೆ ಪ್ರಸಿದ್ಧವಾಗಿರುವ ನಟ ಶರಣ್ ಪುತ್ರಿ ಪುಣ್ಯ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ. ಶರಣ್ ಹಾಗೂ ಸಿಂಪಲ್ ಸುನೀ ಕಾಂಬಿನೇಷನ್​ನಲ್ಲಿ ಬರುತ್ತಿರುವ ‘ಅವತಾರ ಪುರುಷ’ ಎನ್ನುವ ಚಿತ್ರದಲ್ಲಿ ಪುಣ್ಯ ಶಾಲಾ ಬಾಲಕಿಯ ರೋಲ್​ನಲ್ಲಿ ಅಪ್ಪನ ಜೊತೆ ಮೊದಲ ಬಾರಿಗೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಅವತಾರ ಪುರುಷ ಚಿತ್ರದಲ್ಲಿ ಶರಣ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಸಾಥ್ ನೀಡಿದ್ದಾರೆ. ಈ ಹಿಂದೆ ರ್ಯಂಬೋ – 2 ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು ಹಾಗೂ ಈ ಚಿತ್ರದ ಹಾಡು ಚುಟು ಚುಟು ಸಿನಿಪ್ರಿಯರ ಮನಗೆದ್ದಿತ್ತು ಸದ್ಯ ಅವತಾರ ಪುರುಷ ಚಿತ್ರ ಕಾಮಿಡಿ ಕಂ ಥ್ರಿಲ್ಲರ್ ಕತೆಯನ್ನು ಒಳಗೊಂಡಿದ್ದು, ಮತ್ತೊಮ್ಮೆ ತೆರೆ ಮೇಲೆ ಈ ಜೋಡಿ ಹೇಗೆ ಮೋಡಿ ಮಾಡುತ್ತದೆ ಎಂದು ಕಾಣಬೇಕಾಗಿದೆ ಹಾಗೂ ಶರಣ್ ಪುತ್ರಿ ಪುಣ್ಯ ಶರಣ್ ಜೊತೆಯಲ್ಲಿ ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.