ಶಾರೂಕ್​ ಪುತ್ರಿಯ ಬಿಂದಾಸ್ ಲೈಫ್​! ಸುಹಾನಾ ಪಾರ್ಟಿ ಪೋಟೋಗಳು ಔಟ್​!!

ಬಾಲಿವುಡ್ ನ ಖ್ಯಾತ ನಟ ಶಾರೂಕ್ ಪುತ್ರಿ ಸುಹಾನ ಮೋಹಕಚೆಲುವೆಯಾಗಿದ್ದರೂ ಅದ್ಯಾಕೋ ಚಿತ್ರರಂಗದತ್ತ ಮುಖ ಮಾಡಿಲ್ಲ. ಆದರೆ ಬಾಲಿವುಡ್​ ಬಾದುಶಾ ಪುತ್ರಿಯಾಗಿರೋ ಸುಹಾನ ತಮ್ಮ ಬದುಕನ್ನು ಎಂಜಾಯ್ ಮಾಡೋದರಲ್ಲೂ ಕೂಡ ಹಿಂದೆ ಬಿದ್ದಿಲ್ಲ.  ಅವರ ಪಾರ್ಟಿ ಹಾಗೂ ಟ್ರಿಪ್​ನ ಸಾಕಷ್ಟು ಪೋಟೋಗಳು ವೈರಲ್​ ಆಗಿದ್ದು, ಸಾಮಾಜಿಜ ಜಾಲತಾಣದಮಂದಿ ಹುಬ್ಬೇರಿಸುವಂತೆ ಮಾಡಿದೆ.

ಬಾಲಿವುಡ್ ಸಿನಿ ಸ್ಟಾರ್ ಗಳು ಅಂದರೆ ಹೇಗೆ ಫೇಮಸ್ ಆಗುತ್ತಾರೋ ಹಾಗೆಯೇ ಅವರು ಮಕ್ಕಳು ಸಹ ಏನೇ ಮಾಡಿದರೂ ಬಹು ಬೇಗ ಫೇಮಸ್ ಆಗಿಬಿಡುತ್ತಾರೆ. ಬಾಲಿವುಡ್ ಸಿನಿ ತಾರೆಯರೆಂದರೆ ಹೀಗೆ ಅಲ್ಲವೆ.. ಅವರು ಕುಂತರೂ,ನಿಂತರು, ನಕ್ಕರು ಸುದ್ದಿಯಾಗಿಬಿಡುತ್ತಾರೆ. ಅದೇ ಪರಿ ಈಗ ನಟ ಶಾರುಕ್ ಖಾನ್ ಪುತ್ರಿ ಸುಹಾನ ಖಾನ್ ಸುದ್ದಿಯಾಗಿದ್ದಾರೆ.

ಸದ್ಯ ಯುಕೆಯ ಲಂಡನ್ ಸಿಟಿಯ Ardingly ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಟ ಶಾರೂಕ್ ಖಾನ್ ಪುತ್ರಿ ಸುಹಾನ ಖಾನ್ ರಜೆ ಇರುವುದರಿಂದ ಭಾರತಕ್ಕೆ ಬಂದಿದ್ದಾರೆ. ಬಾಲಿವುಡ್ ನ ಪ್ರವೇಶಿಸುವುದಕ್ಕೆ ಬೇಕಾದ ಎಲ್ಲಾ ತರಬೇತಿಗಳನ್ನು ಈಗಾಗಲೇ ಪಡೆಯುತ್ತಿರುವ ಸುಹಾನ, ಮುಂಬೈನಲ್ಲಿ ತಮ್ಮ ಸ್ನೇಹಿತರೊಂದಿಗೆ ತಮ್ಮ ವಯಸ್ಕರದ ಅವಧಿಯಲ್ಲಿ ಮಾಡಬೇಕಾದ ಎಂಜಾಯ್ ಮೆಂಟ್ ಗಳನ್ನು ಸಹ ಮಿಸ್ ಮಾಡಿಕೊಳ್ಳದೇ ಬಿಂದಾಸ್ ಲೈಫ್ ನನ್ನು ಲೀಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ತಾಯಿ ಗೌರಿ ಖಾನ್ ರೊಂದಿಗೂ ಸಹ ಡಿನ್ನರ್ ಗೆ ಹೋಗಿದ್ದರು. ಹೀಗೆ ಕುಟುಂಬದೊಂದಿಗೂ ಸಹ ಕಾಲ ಕಳೆಯುತ್ತಿದ್ದಾರೆ.

ಭಾನುವಾರ ನಡೆದ ಪಾರ್ಟಿಯೊಂದರಲ್ಲಿ ಸುಹಾನ ಖಾನ್ ತನ್ನ ಬಾಲ್ಯದ ಗೆಳತಿ ಅನನ್ಯ ಪಾಂಡೆಯ ಜೊತೆ ಭಾಗಿಯಾಗಿದ್ದರು. ಈ ಪಾರ್ಟಿಯ ಕೆಲವು ಫೋಟೊಗಳನ್ನು ಸಾಮಾಜಿಕ ಜಾಲತಾಣ ಇಸ್ಟಾ ಗ್ರಾಂನಲ್ಲಿ ಹರಿಬಿಟ್ಟದ್ದು ಇದೀಗಾ ಈ ಫೋಟೋಗಳಿಗೆ ಸುಹಾನರ ಸೋಷಿಯಲ್ ಮೀಡಿಯ ಅಭಿಮಾನಿಗಳಿಂದ ಲೈಕ್ಸ್ , ಕಮೆಂಟ್ ಗಳು ಬರುತ್ತಿದೆ. ಇದಕ್ಕೆ ಸುಹಾನ ಕೂಡ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

ಕಳೆದ ವರ್ಷ ವೊಗ್ ಎಂಬ ಮ್ಯಾಗಜೀನ್ ಗೆ  ಕೂಡ ಸುಹಾನ ಖಾನ್ ಫೋಸ್ ನೀಡಿದ್ದರು, ಭಾನುವಾರ ಪಾರ್ಟಿಯಿಂದ ತೆರಳುತ್ತಿರುವಾಗ ತನ್ನ ಕಾರ್ ನ ಹಿಂಭಾಗದಲ್ಲಿ ಕುಳಿತಿರುವ ಗೆಳತಿಯರ ಜೊತೆ ಹಾಸ್ಯ ಮಾಡುವ ಮೂಲಕ ನಗುವುದನ್ನು ತಡೆಯಲು ಆಗದಂತಹ ಜೋಕ್ ಮಾಡಿದ್ದಾರೆ.ಒಟ್ಟಾರೆಯಾಗಿ ಹೇಳಬೇಕೆಂದರೆ ಸುಹಾನ ಖಾನ್ ರವರು  ಪಾರ್ಟಿ, ಶೋಪಿಂಗ್, ಟ್ರೀಪ್ ಎಂದೆಲ್ಲಾ ಬಿಂದಾಸ್ ಆಗಿ ಸ್ನೇಹಿತರೊಂದಿಗೆ ಲೈಫ್ ಲೀಡ್ ಮಾಡುತ್ತಿದ್ದಾರೆ.