ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರಂತೆ ವಿಶ್ವಸುಂದರಿ ಐಶ್ವರ್ಯ ರೈ !! ದಚ್ಚುಗೆ ಜೋಡಿಯಾಗ್ತಾರಾ ಐಶ್!! ನೀಲಿ ಕಂಗಳ ಚೆಲುವೆಯ ಸಿನಿಮಾ ಯಾವುದು ಗೊತ್ತಾ ?

ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಮುಂದಿನ ಚಿತ್ರ ರಾಬರ್ಟ್​ ಚಿತ್ರಕ್ಕೆ ಬಾಲಿವುಡ್ ನಟಿ ಐಶ್ವರ್ಯ ರೈ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.

ಇಗಾಗಲೇ ಹಿಂದಿ, ತಮಿಳು,ತೆಲುಗು,ಮಾಲಯಳಂ ಸೇರಿ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರು ಐಶ್ವರ್ಯ ರೈ ಮದುವೆಯ ನಂತರ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದು, ಮಗು ಆದ ನಂತರ ಬಾಲಿವುಡ್ ನ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದ ಮೂಲಕ ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದರು. ಇದುವರೆಗೂ ಸ್ಯಾಂಡಲ್ ವುಡ್ ಸಿನಿರಂಗದಲ್ಲಿ ನಟಿಸಿರದ ಐಶ್ ರನ್ನು ಈ ಹಿಂದೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈರನ್ನು ಕನ್ನಡಕ್ಕೆ ಕರೆತರಲು ನಟ ರವಿಚಂದ್ರನ್​, ಉಪೇಂದ್ರ ಪ್ರಯತ್ನಿಸಿದ್ದರು. ಆದರೆ ಅದ್ಯಾವುದೂ ಕೈಗೂಡಿರಲಿಲ್ಲ.
ಸದ್ಯ ಅಂತಹದೆ ಒಂದು ಪ್ರಯತ್ನದಲ್ಲಿರುವ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ರ ಮುಂದಿನ ಚಿತ್ರವಾದ ‘ರಾಬರ್ಟ್ ಅಂಡ್​ ಟೀಂ’ರವರು ಇಂಥದ್ದೊಂದು ಸಾಹಸಕ್ಕೆ ಮುಂದಾಗಿದೆ. ಕೊಲ್ಕತ್ತಾದಲ್ಲಿ ‘ರಾಬರ್ಟ್’ ಕಥೆ ಸಾಗುವುದರಿಂದ, ಉತ್ತರ ಭಾರತದ ನಟಿಯಾಗಿಯೇ ಅಗತ್ಯವಿರುವುದರಿಂದ ಇಷ್ಟರಲ್ಲೇ ಚಿತ್ರ ತಂಡ ಐಶ್ವರ್ಯರನ್ನು ಭೇಟಿಯಾಗಿ, ಕಥೆಯನ್ನೂ ಹೇಳಲಿದೆ.

 

ಇನ್ನೂ ಐಶ್ವರ್ಯ ರೈ ಮೂಲತಃ ಕರ್ನಾಟಕದ ಮಂಗಳೂರಿನ ಮೂಲದವರಾಗಿರುವು ಎಲ್ಲಾರಿಗೂ ತಿಳಿದಿರುವ ವಿಷಯವೇ, ಇವರು ವಿಶ್ವ ಸುಂದರಿ ಆಗಿ, ನಂತರ ನಟಿಯಾಗಿ ಐಶ್ವರ್ಯ ರೈ ಜಗತ್​ ಪ್ರಸಿದ್ಧಿಯಾದರು. ಕಳೆದ ಎರಡೂವರೆ ದಶಕಗಳಿಂದಲೂ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಲು ಐಶ್ವರ್ಯ ರೈ ಗೆ ಇದೂವರೆಗೂ ಆಗಿರಲಿಲ್ಲ. ಈ ಹಿಂದೆ ಕೆಲವು ಮಾಧ್ಯಮಗಳ ಜೊತೆ ಐಶ್ವರ್ಯ ಸ್ವತಃ ಕನ್ನಡದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಸದ್ಯ ಈಗಾಗಲೇ ಕನ್ನಡ ಇಂಡಸ್ಟ್ರಿಯು ಪರ ಭಾಷಾ ಇಂಡಸ್ಟ್ರಿಗಳಿಗೆ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ಅಬ್ಬರಿಸುತ್ತಿದೆ. ಇಂಡಿಯಾ ಗಮನ ಸೆಳೆಯುತ್ತಿರುವ, ಸ್ಯಾಂಡಲ್​ವುಡ್​ ಕ್ವಾಲಿಟಿ ಏನು ಎನ್ನುವುದು ಈಗಾಗಲೇ ಬಾಲಿವುಡ್​ ಮಂದಿಗೆಅರಿವಾಗುತ್ತಿದೆ.
ಇದಕ್ಕೂ ಮುನ್ನ‘ಸೌತ್ ಇಂಡಿಯನ್’​ ನಟಿ ರಕೂಲ್​ ಪ್ರೀತ್​ ಸಿಂಗ್​ ರಾಬರ್ಟ್​ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೆಸರು ಕೇಳಿ ಬಂದಿತ್ತು. ಆದರೆ ನಟಿ ರಕೂಲ್​ ಪ್ರೀತ್​ ಸಿಂಗ್​ ಡೇಟ್ಸ್​ ಹೊಂದಾಣಿಕೆ ಆಗದ್ದರಿಂದ ರಕೂಲ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ​. ಉಳಿದಂತೆ ‘ರಾಬರ್ಟ್​’ ಬಿಗ್​ ಬಜೆಟ್​ ಸಿನಿಮಾವಾಗಿದ್ದು, ಮುಂದಿನ ವಾರದಿಂದ ಶೂಟಿಂಗ್​ ಆರಂಭವಾಗಲಿದೆ. ಈಗಾಗಲೇ ದುಬಾರಿ ಸೆಟ್​ ಕೂಡ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಾಣವಾಗುತ್ತಿದೆ.

ಒಟ್ಟಾರೆಯಾಗಿ ನೀಲಿಕಂಗಳ ಚೆಲುವೆ ಐಶ್ವರ್ಯ ರೈ ಮೊದಲ ಬಾರಿ ಕನ್ನಡದಲ್ಲಿ ನಟಿಸಿದ್ದೆ ಆದರೆ ಇದು ಕನ್ನಡ ಸಿನಿರಂಗದಲ್ಲಿಯೆ ಇದೊಂದು ಇತಿಹಾಸ ಆಗಲಿದೆ. ಹಾಗೂ ನಟ ಚಾಲೆಂಜಿಗ್ ಸ್ಟಾರ್ ದರ್ಶನ್​ ಸಿನಿಮಾ ಇದಾದರಿಂದ ಐಶ್ವರ್ಯ ಒಪ್ಪಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ.