ಗಿರೀಶ್ ಕಾರ್ನಾಡ್ ನಿಧನಕ್ಕೆ ಸ್ಯಾಂಡಲವುಡ್​ ಕಂಬನಿ! ದರ್ಶನ್,ಕಮಲಹಾಸನ್ ಸೇರಿ ಹಲವರ ಸಂತಾಪ!

ಜ್ಞಾನಪೀಠ ಪುರಸ್ಕೃತ ಸಾಹಿತಿ, ನಟ, ನಾಟಕಗಾರ, ನಿರ್ದೇಶಕ ಗಿರೀಶ್ ಕಾರ್ನಾಡ್ ಇಂದು ಬೆಳಗ್ಗೆ(ಜೂನ್ 10) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡ್ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರ್ನಾಡ್ ನಿಧನಕ್ಕೆ ಅನೇಕ ಗಣ್ಯರು ಚಿತ್ರರಂಗ, ರಾಜಕೀಯ, ಸಾಹಿತ್ಯ ಲೋಕದ ಗಣ್ಯರು ಕಂಬನಿ ಮಿಡಿದಿದ್ದಾರೆ ಸ್ಯಾಂಡಲ್ ವುಡ್​ನ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ.

ಗಿರೀಶ್ ಕಾರ್ನಾಡ್ ಬಗ್ಗೆ ನಟ ದರ್ಶನ್​​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.

ಬಹುಭಾಷಾ ನಟ ಕಮಲ್ ಹಾಸನ್  ಕೂಡ ಕಾರ್ನಾಡ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಮೊದಲಗುರು ಎಂದು ಭಾವಿಸಿದ್ದ ಗಿರೀಶ್ ಕಾರ್ನಾಡ್ ರನ್ನು ಕಳೆದುಕೊಂಡ ನೋವನ್ನು ಟ್ವಿಟ್ಟರ್ ಖಾತೆಯಲ್ಲಿ ನಟಿ ಸಂಯುಕ್ತ ಹೊರನಾಡು ಹಂಚಿಕೊಂಡಿದ್ದಾರೆ.

 

 

 

ಗಿರೀಶ್ ಕಾರ್ನಾಡ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಪ್ರತಿಭಾವಂತ ಹಾಸ್ಯ ಮತ್ತು ತೀಕ್ಷ್ಣ ಬೌದ್ಧಿಕತೆಯನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ನಟಿ ಶ್ರುತಿ ಹಾಸನ್ ಸಂತಾಪ ಸೂಚಿಸಿದ್ದಾರೆ.

 

 

ಹಲವು ಕ್ಷೇತ್ರದಲ್ಲಿ ಪ್ರಾವಿಣ್ಯ ಹೊಂದಿದ್ದ ಗಿರೀಶ್ ನಿಜವಾಗಲೂ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಹೆಮ್ಮೆಯ ವ್ಯಕ್ತಿತ್ವ ಗಿರೀಶ್‌ ಅವರದ್ದು, ಹಲವು ಕ್ಷೇತ್ರದಲ್ಲಿ ಪ್ರಾವಿಣ್ಯತೆ ಇತ್ತು, ಸಾಹಿತ್ಯ, ತುಘಲಕ್ ರಂಗ, ಭೂಮಿ, ಸಾಹಿತ್ಯ, ರಾಜಕೀಯದ ಬಗ್ಗೆ ಎಷ್ಟು ಹಿಡಿತವಿದೆ ಎನ್ನುವುದು ತುಘಲಕ್ ನಾಟಕದ ಮೂಲಕ ತಿಳಿಯುತ್ತದೆ.ಸನಾತನ ಧರ್ಮ, ಸಂಸ್ಕೃತಿ, ವೈಚಾರಿಕೆ ಬ್ಯಾಲೆನ್ಸ್ ಮಾಡುತ್ತಿದ್ದರು. ಶ್ರೀಧರ್, ಹಿರಿಯ ನಟ

 

 

ಕನ್ನಡವನ್ನು, ಕನ್ನಡಿಗರನ್ನು ಕರ್ನಾಟಕವನ್ನು ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ. ನೀವು ಮುನ್ನಡೆಸಿದ ಸಮೃದ್ಧಗೊಳಿಸುವ, ಸಬಲೀಕರಣದ, ಸ್ಫೂರ್ತಿದಾಯಕ ಬದುಕಿಗಾಗಿ ಧನ್ಯವಾದಗಳು. ನಿಮ್ಮೊಂದಿಗೆ ಜೀವಿಸಿದ ಪ್ರತಿ ಕ್ಷಣವೂ ಜೀವಂತ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

 

 

ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನ ಪೀಠ ಪ್ರಶಸ್ತಿ, ಪುರಸ್ಕೃತರು, ಚಿಂತಕರು, ನಿರ್ದೇಶಕರು, ಹಿರಿಯ ಸಾಹಿತಿ ಹಾಗೂ ನಟರಾದ ಗಿರೀಶ್ ಕಾರ್ನಾಡ್ ರವರ ಕೊಡುಗೆ ಅಪಾರ….‌‌ ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಎಂದು ನಟ ಉಪೇಂದ್ರ ಭಾವಪೂರ್ಣ ಶ್ರಧ್ದಾಂಜಲಿಗಳನ್ನು ತಿಳಿಸಿದ್ದಾರೆ

 

 

ನಟ, ನಾಟಕಕಾರ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಗಿರೀಶ ಕಾರ್ನಾಡ್ ಅವರ ಅಗಲಿಕೆ ಕನ್ನಡ ನಾಡಿನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ರಂಗಭೂಮಿ ಮತ್ತು ಚಲನಚಿತ್ರ ರಂಗಗಳಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ ಅವರ ಕೊಡುಗೆ ಅಪಾರ. ಅವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ. ಎಂದು ನಟ ಸೃಜನ್ ಲೋಕೋಶ್ ಸಂತಾಪ ಸೂಚಿಸಿದ್ದಾರೆ