ಇತ್ತೀಚಿಗಷ್ಟೆ ಜಗದೀಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್​​ನ ಬಬ್ಲಿ ಕ್ವೀನ್ ಅಮೂಲ್ಯಗೆ ಹುಟ್ಟು ಹಬ್ಬದ ಸಂಭ್ರಮ. 2001 ರಲ್ಲಿ ಪರ್ವ ಸಿನಿಮಾದ ಮೂಲಕ ಬಾಲ ನಟಿಯಾಗಿ ಬಣ್ಣ ಹಚ್ಚಿದ ಅಮೂಲ್ಯ 2007 ರಲ್ಲಿ ಚೆಲುವಿನ ಚಿತ್ತಾರದ ಐಶು ಪಾತ್ರದಲ್ಲಿ ನಾಯಕಿಯಾಗಿ ತಮ್ಮ ವಿಶಿಷ್ಟ ಬಗೆಯ ನಟನೆ ಮತ್ತು ಡೈಲಾಗ್ ಮೂಲಕ ಹದಿಹರೆಯವರ ನಿದ್ದೆಗೆಡಿಸಿದ್ದರು. ಮುಂದೆ ನಾನು ನನ್ನ ಕನಸು, ಶ್ರಾವಣಿ ಸುಬ್ರಮಣಿ, ಗಜಕೇಸರಿ ಸಿನಿಮಾ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ ಮುದ್ದು ಮೊಗದ ಚೆಲುವೆ ಕೆಲ ತಿಂಗಳ ಹಿಂದೆ ಜಗದೀಶ್ ಅವರನ್ನ ವರಿಸಿದ್ರು. ಇನ್ನು ಅಮೂಲ್ಯ ಮದ್ವೆ ಬಳಿಕ ತಮ್ಮ ಮೊದಲ ಹುಟ್ಟುಹುಬ್ಬವನ್ನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲಿದ್ದಾರೆ.
=========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here