ದೊಡ್ಡ ಗೌಡರ ಅಖಾಡದಲ್ಲಿ ನಟಿ ಅಮೂಲ್ಯ ಚೆಲುವಿನ ಚಿತ್ತಾರ !! ಗಜ”ಕೇಸರಿ”ಯಿಂದ ಹೊರ ಬಂದ ಐಸು !!

ಮನೆ ಮನೆ ಹುಡುಗಿ ಹುಡುಗಿ ಕೇಸರಿ ಪಾಳಯದಿಂದ ಹೊರ ಬಂದು ದೊಡ್ಡ ಗೌಡರ ಅಖಾಡ ಸೇರಿದ್ದಾಳೆ. ಚೆಲುವಿನ ಚಿತ್ತಾರ ಖ್ಯಾತಿಯ ಅಮೂಲ್ಯ ಇಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ನಟಿ ಅಮೂಲ್ಯ ಮಾವ ರಾಮಚಂದ್ರ ಬಿಜೆಪಿಯಲ್ಲಿ ಹಿರಿಯ ಮುಖಂಡರು. ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಆತ್ಮೀಯರಾಗಿರುವ ನಟಿ ಅಮೂಲ್ಯ ಕೂಡಾ ಮಾವನ ಜೊತೆ ಜೊತೆಯಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಅಮೂಲ್ಯ ಜೊತೆ ಅವರ ಪತಿ ಜಗದೀಶ್ ಕೂಡಾ ಬಿಜೆಪಿ ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡು ದುಡಿದಿದ್ದರು. ಆದರೆ ಇವೆಲ್ಲಕ್ಕೂ ಬಿಜೆಪಿ ಎಳ್ಳುನೀರು ಬಿಟ್ಟಿದೆ.

ಇಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಕಾರ್ಪೋರೇಟರ್ ರಾಮಚಂದ್ರ ಬಿಜೆಪಿ ಸೇರಿದ್ದು, ಅವರ ಜೊತೆ ಪುತ್ರ ಜಗದೀಶ್ ಮತ್ತು ನಟಿ ಅಮೂಲ್ಯ ಅಪಾರ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಜೆಡಿಎಸ್ ಸೇರಿದರು.

 

ನಟಿ ಅಮೂಲ್ಯರನ್ನು ಜೆಡಿಎಸ್ ಗೆ ಪ್ರೀತಿಯಿಂದ ಸ್ವಾಗತಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ರಾಜರಾಜೇಶ್ವರಿ ನಗರದಲ್ಲಿ ರಾಮಚಂದ್ರರೇ ಜೆಡಿಎಸ್ ಅಭ್ಯರ್ಥಿ ಎಂದು ಘೊಷಿಸಿದರು.

ಸೇರ್ಪಡೆ ಬಳಿಲ ಬಿಟಿವಿ ಜೊತೆ ಮಾತನಾಡಿದ ಅಮೂಲ್ಯ, ನನಗೆ ರಾಜಕಾರಣ ಹೊಸತು. ಮಾವ, ಪತಿ, ಅತ್ತೆ, ಸಹೋದರರೇ ನನ್ನ ಮಾರ್ಗದರ್ಶಕರು. ಅವರು ಹೇಳಿದಂತೆ ಮುಂದೆ ರಾಜಕಾರಣ ಮಾಡುತ್ತೇನೆ” ಎಂದರು.

“ಒಂದಂತೂ ಗೊತ್ತು. ಈ ರಾಜ್ಯಕ್ಕೆ ಮತ್ತು ನಮ್ಮ ಸಂಸ್ಕೃತಿಗೊಂದು ಘನತೆ ತಂದುಕೊಟ್ಟವರು ದೇವೇಗೌಡರು. ನಮ್ಮಮ್ಮ ಯಾವಾಗಲೂ ಹೇಳುತ್ತಿದ್ದರು. ರಾಗಿ ಮುದ್ದೆ ತಿಂದ್ವಿ ಅಂತ ಹೇಳೋಕೆ ಜನ ಹಿಂಜರಿಯುತ್ತಿದ್ದ ಕೀಳರಿಮೆಯ ದಿನಗಳಿದ್ದವು. ಈಗ ದೇವೇಗೌಡ ಅಪ್ಪಾಜಿಯಿಂದಾಗಿ ರಾಗಿ ಮುದ್ದೆ ಪ್ರತಿಷ್ಟೆಯ ಆಹಾರವಾಗಿದೆ. ಇದೊಂದು ಸಣ್ಣ ಉದಾಹರಣೆ. ನಾಡಿನ ಜಲ ನೆಲದ ವಿಚಾರದಲ್ಲೂ ನಾವು ತಲೆಎತ್ತುವಂತೆ ಮಾಡಿದ್ದು ದೇವೇಗೌಡರ ರಾಜಕೀಯ ಎಂದು ಅಮೂಲ್ಯ ಹೇಳಿದ್ರು.