ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ​ ಅರೆಸ್ಟ್​ ವಾರೆಂಟ್ ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ವಿರುದ್ಧ ಚಿಕ್ಕಮಗಳೂರಿನ ಜೆಎಂಎಫ್​ ನ್ಯಾಯಾಲಯ ಬುಧವಾರ ಬಂಧನ ವಾರೆಂಟ್​ ಜಾರಿ ಮಾಡಿದೆ.
ಕಳೆದ ಒಂದು ವರ್ಷದ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ವಿರುದ್ದ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಎಸ್ಟೇಟ್ ಮಾಲೀಕ ನೀಡಿದ್ದ ದೂರು ಈಗ ಸದ್ದು ಮಾಡುತ್ತಿದೆ.ದೀಪಕ್ ಮಯೂರ ಎಂಬ ವ್ಯಕ್ತಿ ಸುದೀಪ್ ಮೇಲೆ ದೂರು ದಾಖಲು ಮಾಡಿದ್ದು ನಿಮಗೆಲ್ಲಾ ನೆನಪಿರಬಹುದು.

ad

ಇದೀಗ ಆ ದೂರೇ ಸುದೀಪ್ ಗೆ ಅರೆಸ್ಟ್​ ವಾರೆಂಟ್ ಜಾರಿಯಾಗುವಂತೆ ಮಾಡಿದ್ದು ಕನ್ನಡ ಚಿತ್ರರಂಗದ ಹೆಬ್ಬುಲಿಗೆ ಸಂಕಷ್ಟ ತಂದೊಡ್ಡಿದೆ.ಚಿಕ್ಕಮಗಳೂರು JMFC ಕೋರ್ಟ್​ ನ್ಯಾಯಾಲಯ ಬುಧವಾರ ಬಂಧನ ವಾರೆಂಟ್ ​ ಜಾರಿ ಮಾಡಿದೆ.

ವಾರಸ್ದಾರ ಧಾರಾವಾಹಿ​ ಚಿತ್ರೀಕರಣಕ್ಕಾಗಿ ಬಳಸಲಾಗಿದ್ದ  .ಕಾಫಿ ತೋಟ ಬಾಡಿಗೆಯನ್ನು ಪಾವತಿಸಿಲ್ಲ ಹಾಗೂ ತೋಟವನ್ನು ಹಾಳು ಮಾಡಿದ್ದರೆ.ಎಂಬ ಆರೋಪದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಗೆ​ ಕೋರ್ಟ್ ಹಲವು ಬಾರಿ ಸಮನ್ಸ್ ನೀಡಿತ್ತು.ಆದರೆ ಇದುವರೆಗೂ ಕೋರ್ಟ್​ಗೆ ಹಾಜರಾಗದ ಕಾರಣ ಬಂಧನ ವಾರೆಂಟ್ ಜಾರಿ ಮಾಡಿದೆ.