ಮಂತ್ರಾಲಯಕ್ಕೆ ಬಂದ ನಟಿ ಹರಿಪ್ರಿಯಾ- ಸೆಲ್ಪಿಗೆ ಮುಗಿಬಿದ್ದ ಭಕ್ತರು!

 

ಚಿತ್ರ ನಟಿ ಹರಿಪ್ರಿಯಾ ಇಂದು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದ್ರು. ಕುಟುಂಬ ಸಮೇತ ನಿನ್ನೆ ರಾತ್ರಿಯೇ ಮಂತ್ರಾಲಯಕ್ಕೆ ಬಂದು, ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿದ್ದ ಹರಿಪ್ರಿಯಾ, ಇಂದು ಬೆಳಿಗ್ಗೆ ರಾಯರ ಸನ್ನಿಧಾನಕ್ಕೆ ಬಂದು ದರ್ಶನ ಪಡೆದ್ರು. ಭಕ್ತಿಯಿಂದ ಐದು ಸುತ್ತು ಬೃದಾವನ ಪ್ರದಕ್ಷಿಣೆ ಹಾಕಿದ್ರು. ದರ್ಶನ‌ಮುಗಿಸಿ ಹರಿಪ್ರಿಯ ಮಠದಿಂದ ಹೊರ ಬರ್ತಿದಂತೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಮಠಕ್ಕೆ ಬರಲು ಆಗಿರಲಿಲ್ಲ.

 

ಈಗ ಕುಟುಂಬ ಸಮೇತ ಬಂದಿದ್ದೇವೆ, ಅಮ್ಮ, ಅಣ್ಣನೊಂದಿಗೆ ಮಠಕ್ಕೆ ಬಂದಿರುವೆ. ರಾಯರ ದರ್ಶನ ಪಡೆಸು ಖುಷಿ ಆಯ್ತು ಅಂದ್ರು ಹರಿಪ್ರಿಯಾ. ಇನ್ನು ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ ಅವರು, ಕುರುಕ್ಷೇತ್ರ, ಬೆಲ್ ಬಾಟಮ್, ಸೂಜಿದಾರ, ಡಾಕ್ಟರ್ ಆಫ್ ಪಾರ್ವತಮ್ಮ ಸೇರಿ ಹಲವು ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ ಅಂದ್ರು. ಇನ್ನು ಎರಡು ತಿಂಗಳಲ್ಲಿ ಬೆಲ್ ಬಾಟಮ್ ಸಿಬಿಮಾ ರಿಲಿಸ್ ಆಗುತ್ತೆ. ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಸದ್ಯಕ್ಕೆ ಸಿನಿಮಾ, ಮದುವೆ ವಿಚಾರವಾಗಿ ಯಾವುದೇ ಮಾತು ಆಡಲ್ಲ ಅಂದ್ರು.