ಲಿಪ್​ ಲಾಕ್​ ಮಾಡಲ್ಲ ಅಂತ ಸಿನಿಮಾ ಬಿಟ್ಟಾಕೆ ಕೊನೆಗೆ ಕೊರಗಿದ್ಯಾಕೆ ?

ನಿಮ್ಗೆ ಮಲ್ಲುಕುಟ್ಟಿ ಪಾರ್ವತಿ ನಾಯರ್​​ ಗೊತ್ತಿರುತ್ತೆ. ಮಲಯಾಳಂ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ಈಕೆ ‘ಸ್ಟೋರಿಕಥೆ’ ಎಂಬ ಸಿನಿಮಾದ ಮೂಲಕ ಈ ಚೆಲುವೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು. ನಂತರ ಕಿಶೋರ್​ ನಟಿಸಿದ್ದ ‘ವಾಸ್ಕೋಡಿಗಾಮ’ ಸಿನಿಮಾದಲ್ಲೂ ಈಕೆ ನಾಯಕಿಯಾಗಿದ್ರು.

ಅಂದಹಾಗೆ ಈಗ ಪಾರ್ವತಿ ನಾಯರ್​ ಬಗ್ಗೆ ಹೇಳೋದಕ್ಕೂ ಒಂದ್​ ಕಾರಣ ಇದೆ. ಅದೇನಂದ್ರೆ ಈಕೆ ಒಬ್ಬ ಹುಡ್ಗನಿಗೆ ಲಿಪ್​ಲಾಕ್​​​ ಮಾಡಲ್ಲ ಅಂದಿದ್ಳಂತೆ. ಆದ್ರೆ ಕಿಸ್​ ಮಾಡಲ್ಲ ಅಂತ ಹೇಳಿದ್ಮೇಲೆ.. ಅಯ್ಯೋ ಕಿಸ್ಸಿಂಗ್​ ಮಾಡೋಕೆ ಒಪ್ಕೋಬೇಕಿತ್ತು ಅಂತ ಪಶ್ಚಾತಾಪ ಪಟ್ಟಿದ್ದಾಳೆ. ಅಷ್ಟೇ ಅಲ್ಲ ಬರೋಬ್ಬರಿ ಒಂದು ತಿಂಗಳು ಇದಕ್ಕಾಗಿ ಕೊರಗಿದ್ದಾಳೆ. ಪಾರ್ವತಿಗೆ ಏನಾಗಿದೆ ಅಂತ ಕನ್​ಪ್ಯೂಸ್​ ಆಗ್ಬೇಡಿ. ಪಾರ್ವತಿ ಪಶ್ಚಾತಾಪದ ಅಸಲಿ ಕಹಾನಿ ಬೇರೆಯೇ ಇದೆ. ಅರ್ಜುನ್​ ರೆಡ್ಡಿ ಮೂವಿ ಬಗ್ಗೆ ಗೊತ್ತಿರುತ್ತೆ ನಿಮ್ಗೆ. ಮೂಳೆ ಡಾಕ್ಟರ್​​​​ ಒಬ್ಬನ ಪ್ರೇಮ ವೈಫಲ್ಯದ ಕಥೆಯ ಚಿತ್ರ. ರಫ್​ & ಎಮೋಶನ್​​ ಸ್ಟೋರಿ ಇರೋ ಚಿತ್ರ. ಕಳೆದ ವರ್ಷ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಸಿದ್ದ ಸಿನಿಮಾ ‘ಅರ್ಜುನ್ ರೆಡ್ಡಿ’.ಈ ಸಿನಿಮಾಕ್ಕೆ ಟಾಲಿವುಡ್​ ಪ್ರೇಕ್ಷಕರು ಅಕ್ಷರಶ: ಫಿದಾ ಆಗಿದ್ರು. ‘ಅರ್ಜುನ್ ರೆಡ್ಡಿ’ ಸಿನಿಮಾ ಅಂದ ತಕ್ಷಣ ಮೊದಲು ಎಲ್ಲರಿಗೂ ನೆನಪಾಗುವುದು ಸಿನಿಮಾದ ಕಿಸ್ಸಿಂಗ್ ದೃಶ್ಯಗಳು.

ವಿಜಯ್ ದೇವರಕೊಂಡ ಜೊತೆ ಶಾಲಿನಿ ಪಾಂಡೆ ಬೋಲ್ಡ್​​ ಕಿಸ್ಸಿಂಗ್​ ಸೀನ್​​ಗಳಲ್ಲಿ ಕಾಣಿಸಿಕೊಂಡಿದ್ಲು. ಅರ್ಜುನ್​ ರೆಡ್ಡಿ ಸಿನಿಮಾದಿಂದ್ಲೇ ಆಕೆಗೆ ಸಾಕಷ್ಟು ಆಫರ್​ ಸಿಕ್ಕಿತ್ತು. ಈಗ ಶಾಲಿನಿ ಸಖತ್​ ಬ್ಯುಸಿ ಹೀರೋಯಿನ್​​. ಅಸಲಿಗೆ ‘ಅರ್ಜುನ್ ರೆಡ್ಡಿ’ ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲ ಆಫರ್ ಬಂದಿದ್ದು ಪಾರ್ವತಿ ನಾಯರ್​​​ಗೆ. ಆದರೆ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಲಿಪ್ ಲಾಕ್ ಸೀನ್​​ಗಳಿರೋದರಿಂದ ಮತ್ತು ಅದಕ್ಕೆ ಫ್ಯಾಮಿಲಿ ಮೆಂಬರ್ಸ್​ ಪರ್ಮಿಶನ್​​ ಕೊಡಲ್ಲ ಅನ್ನುವ ಕಾರಣಕ್ಕೆ ಪಾರ್ವತಿ ಆ ಸಿನಿಮಾವನ್ನು ಕೈ ಬಿಟ್ಟಿದ್ರು. ‘ಅರ್ಜುನ್ ರೆಡ್ಡಿ’ ಸಿನಿಮಾ ರಿಲೀಸ್ ಆದ್ಮೇಲೆ ಪಾರ್ವತಿ ಆ ಸಿನಿಮಾವನ್ನು ನೋಡಿದ್ದಾರೆ. ಆಮೇಲೆ ಆಕೆಗೆ ಆ ಸಿನಿಮಾ ಇಷ್ಟವಾಗಿದೆ. ಅಂಥ ಒಳ್ಳೆಯ ಸಿನಿಮಾವನ್ನು ಮಿಸ್​​ ಮಾಡ್ಕೊಂಡಿದ್ದಕ್ಕೆ ಪಾರ್ವತಿ ಒಂದು ತಿಂಗಳು ನೋವಿನಲ್ಲಿ ಇದ್ದರಂತೆ.

ಸಿನಿಮಾ ನೋಡಿದಾಗ ತುಂಬ ಡಿಫರೆಂಟ್ ಆಗಿತ್ತು. ”ಕಥೆ ಕೇಳಿದಾಗ ಇದು ನರ್ಮಲ್ ಕಥೆ ಆಗಿತ್ತು. ಇದರಲ್ಲಿ ಏನು ಸ್ಪೆಷಲ್ ಇಲ್ಲ ಅನಿಸಿತು. ಆದರೆ ಹೋಗಿ ಸಿನಿಮಾ ನೋಡಿದ ಮೇಲೆ ತುಂಬ ಡಿಫರೆಂಟ್ ಆಗಿತ್ತು. ನನಗೆ ಸಿನಿಮಾ ತುಂಬ ಇಷ್ಟ ಆಯ್ತು. ಡೈರೆಕ್ಟರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರೀತಿ ಕೆಲವು ಸಿನಿಮಾ ನನಗೆ ಮಿಸ್ ಆಗಿದೆ ಅಂತ ಪಾರ್ವತಿ ಸಖತ್​ ಬೇಜಾರ್​ ಮಾಡ್ಕೊಂಡಿದ್ದಾಳೆ. ಒಟ್ನಲ್ಲಿ ಪಾರ್ವತಿದ್ದೂ ಬ್ಯಾಡ್​ ಲಕ್​​.