ನಟಿ ಪ್ರಿಯಾಂಕ ಚುನಾವಣೆ ಸ್ಪರ್ಧೆ ಎಲ್ಲಿಂದ ?

ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವನ್ನು ರಿಯಲ್ ಸ್ಟಾರ್ ಉಪೇಂದ್ರ ಘೋಷಿಸುತ್ತಿದ್ದಂತೆ ಅಭ್ಯರ್ಥಿಗಳೂ ಸಿದ್ದವಾಗಿದ್ದಾರೆ.

ಪಕ್ಷದ ಸ್ಥಾಪಕ ಉಪೇಂದ್ರರ ಪತ್ನಿ ನಟಿ ಪ್ರಿಯಾಂಕ ಉಪೇಂದ್ರರ ಚುನಾವಣಾ ಸ್ಪರ್ಧೆಯ ಅಖಾಡ ಕೂಡಾ ಸಿದ್ದವಾಗಿದೆ.
ಪಕ್ಷದ ಖಜಾಂಚಿಯೂ ಆಗಿರುವ ಪ್ರೀಯಾಂಕ ಗೆಲುವಿಗೆ ಪೂರಕವಾಗಿರುವ ರಾಜರಾಜೇಶ್ವರಿ ನಗರದಲ್ಲಿ ಪಕ್ಷ ಟಿಕೆಟ್ ನೀಡಲು ನಿರ್ಧರಿಸಿದೆ.

ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದ ಮಹಿಳಾ ವಿಭಾಗವನ್ನು ಬಲಪಡಿಸಲು ಪ್ಲ್ಯಾನ್ ಮಾಡಿರುವ ನಟಿ ಪ್ರಿಯಾಂಕ ಉಪೇಂದ್ರ ಅದಕ್ಕಾಗಿ ಕಾರ್ಯೋನ್ಮುಖರಾಗಿದ್ದಾರೆ. ಚಿತ್ರರಂಗದ ಮಹಿಳಾಮಣಿಯರ ಜೊತೆ ಉತ್ತಮ ಒಡನಾಟ ಹೊಂದಿರುವ ನಟಿ ಪ್ರಿಯಾಂಕ ಉಪೇಂದ್ರರ ಸಕ್ಸಸ್ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದ ಮೇಲೆ ಪರಿಣಾಮ ಬೀರಲಿದೆ.

 

 

ಉಪ್ಪಿ ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಸ್ಪರ್ಧೆಗೆ ಸಜ್ಜಾದ ಪ್ರಿಯಾಂಕ

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಚಿಂತನೆ
ಕೆಪಿಜೆಪಿ ಪಕ್ಷದ ಖಜಾಂಚಿಯಾಗಿರುವ ಪ್ರಿಯಾಂಕ ಉಪೇಂದ್ರ
ಪಕ್ಷದ ಮಹಿಳಾ ವಿಭಾಗ ಬಲಪಡಿಸಲು ಪ್ರಿಯಾಂಕ್​​ ಪ್ಲಾನ್​​​