ಕಾಲೇಜು ಕುಮಾರ್ ಗೆ ಸಂಯುಕ್ತ ಕಿರಿಕ್- ನಿರ್ಮಾಪಕರ ಗಂಭೀರ ಆರೋಪ

ಸ್ಯಾಂಡಲವುಡ್​ನಲ್ಲಿ ಒಂದು ಚಿತ್ರ ಬಿಡುಗಡೆಯಾಗೋಕೆ ಮೊದಲೇ ಸಾವಿ ವಿವಾದಗಳು ಹುಟ್ಟಿಕೊಳ್ಳೋದು ಸಾಮಾನ್ಯ ಸಂಗತಿ. ಇದೀಗ ಈ ಸಾಲಿಗೆ ಇತ್ತೀಚಿನ ಚಿತ್ರ ಕಾಲೇಜು ಕುಮಾರ್​​ ಕೂಡ ಸೇರ್ಪಡೆಯಾಗಿದೆ. ಹೌದು ಚಿತ್ರದ ನಟಿ ಸಂಯುಕ್ತಾ ವಿರುದ್ಧ ಚಿತ್ರ ನಿರ್ಮಾಪಕ ಪದ್ಮನಾಭ್​​ ಕಿಡಿ ಕಾರಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಯಾವುದೇ ರೀತಿಯಲ್ಲೂ ಸಹಕಾರ ನೀಡಿಲ್ಲ ಎಂದಿದ್ದಾರೆ.
ಕಾಲೇಜು ಕುಮಾರ್ ಚಿತ್ರ ಬಿಡುಗಡೆಯಾದಾಗಿನಿಂದ ನಟಿ ಸಂಯುಕ್ತಾ ಚಿತ್ರದ ಪ್ರಮೋಶನ್​ಗೆ ಬರ್ತಿಲ್ಲ. ನಿರ್ದೇಶಕರು, ನಿರ್ಮಾಪಕರಿಗೆ ಗೌರವ ಕೊಡ್ತಿಲ್ಲ. ಹೀಗಾಗಿ ಫಿಲಂ ಚೆಂಬರ್​ಗೆ ದೂರು ಕೊಡಲು ನಿರ್ಧರಿಸಿದ್ದೇನೆ ಎಂದು ನಿರ್ಮಾಪಕ ಪದ್ಮನಾಭ ಆರೋಪಿಸಿದ್ದಾರೆ.

ಆದರೇ ಈ ಆರೋಪದ ಪ್ರತಿಕ್ರಿಯಿಸಿರುವ  ಚಿತ್ರನಟಿ ಸಂಯುಕ್ತಾ ನಾನು ಚಿತ್ರಕ್ಕಾಗಲಿ ಅಥವಾ ನಿರ್ದೇಶಕ,ನಿರ್ಮಾಪಕರಿಗಾಗಲಿ ಯಾವುದೇ ತೊಂದರೆ ಕೊಟ್ಟಿಲ್ಲ. ಅನಾರೋಗ್ಯದಲ್ಲಿದ್ದಾಗಲೂ ಚಿತ್ರದ ಪ್ರಚಾರಕ್ಕೆ ತೆರಳಿದ್ದೇನೆ. ಆದರೂ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಈ ರೀತಿ ಆರೋಪ ಮಾಡಲಾಗ್ತಿದೆ. ಚಿತ್ರರಂಗದಲ್ಲಿ ಕೆಲವರು ನನ್ನ  ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಒಟ್ಟಿನಲ್ಲಿ ಕಾಲೇಜುಕುಮಾರ್​​ ಚಿತ್ರರಸಿಕರ ಮನಗೆಲ್ಲುತ್ತಿರುವ ಬೆನ್ನಲ್ಲೇ ಚಿತ್ರತಂಡದ ವಿವಾದ ಬೀದಿಗೆ ಬಿದ್ದಿದ್ದು, ಸಾಕಷ್ಟು ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ.

Watch Here: https://youtu.be/5-Nej1rYymU