ಶ್ರೀದೇವಿ ಸ್ವರ್ಗ ಪ್ರವೇಶ ! ಬಿಳಿ ಹೂಗಳ ಮೂಲಕ ಅಂತಿಮ ಪಯಣ!

Actress Sridevi's Funeral Functions Details

ಬಣ್ಣದ ಲೋಕದ ಅತಿಲೋಕ ಸುಂದರಿ, ಭಾರತ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿಯ ಅಂತ್ಯಕ್ರಿಯೆ ನೆರವೇರಿದೆ.

ಇದೀಗ ಶ್ರೀದೇವಿಯ ಅಂತಿಮಯಾತ್ರೆ ವಿಲೆ ಪಾರ್ಲೆಯ ಪವನ್​​ ಹನ್ಸ್​ದಲ್ಲಿನ ಸಮಾಜಸೇವಾ ರುದ್ರಭೂಮಿಗೆ ತಲುಪಿದೆ. ಅಯ್ಯಂಗಾರಿ ಸಂಪ್ರದಾಯದಂತೆ ಶ್ರೀದೇವಿ ಅಂತ್ಯಕ್ರಿಯೆ ನೆರವೇರಿದೆ. ಇನ್ನು ಶ್ರೀದೇವಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ವಾಹನವನ್ನ ಬಿಳಿ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಅಂತಿಮ ಯಾತ್ರೆ ವಾಹನದಲ್ಲಿ ಪತಿ ಬೋನಿ ಕಪೂರ್, ಮಗಳು ಜಾಹ್ನವಿ, ಮಲಮಗ ಅರ್ಜುನ್ ಕಪೂರ್, ಮೈದುನ ಸಂಜಯ್ ಕಪೂರ್ ಇದ್ದಾರೆ.

ಶ್ರೀದೇವಿ ಪಾರ್ಥಿವ ಶರೀರಕ್ಕೆ ಕೆಂಪು ಬಣ್ಣದ ಕಾಂಚೀವರಂ ಸೀರೆ, ಮೋಹನ ಮಾಲೆ, ಮಂಗಳಸೂತ್ರ, ಹಣೆಗೆ ಕುಂಕುಮ, ಮಲ್ಲಿಗೆ ಹೂವು ಮುಡಿಸಲಾಗಿದೆ. ಹಾಗೇನೆ ಸರ್ಕಾರಿ ಗೌರವಪೂರ್ವಕವಾಗಿ ತ್ರಿವರ್ಣ ಧ್ವಜ ಹೊದಿಸಲಾಗಿದೆ. ಮುಂಬೈನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ್ದು, ಯಾತ್ರೆಯಲ್ಲಿ ಶ್ರೀದೇವಿ ಅಪಾರ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಇದೀಗ ಪಾರ್ಥಿವ ಶರೀರ ರುದ್ರಭೂಮಿಗೆ ತಲುಪಿದ್ದು ಶ್ರೀದೇವಿ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶವಾಗಲಿದೆ. ತಮಿಳುನಾಡಿನಿಂದ ಬಂದ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.

Avail Great Discounts on Amazon Today click here