ಆರಂಭವಾಗಿದೆ ಉಕ್ಕಿನ ಹಕ್ಕಿಗಳ ಹಾರಾಟ”- ಏರ್ ಶೋ ಇಂಡಿಯಾಕ್ಕೆ ಅದ್ದೂರಿ ಚಾಲನೆ

Aero India 2019 Show

ಬೆಂಗಳೂರಿನ ಏರೋ ಇಂಡಿಯಾ-2019ಕ್ಕೆ ಏರ್​ ಶೋಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಚಾಲನೆ ನೀಡಿದ್ದಾರೆ. ಉಕ್ಕಿನ ಹಕ್ಕಿಳ ಬಾನಂಗಳದ ಕಲರವ ಆರಂಭವಾಗಿದೆ. ತಾಲೀಮು ನಡೆಸುವ ವೇಳೆ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಗೌರವಾರ್ಥ ಮೌನಾಚರಣೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.

Aero India 2019 Show

ಈ ಬಾರಿಯ ಆಕರ್ಷಣೆಯಾದ ತ್ರಿವರ್ಣದಲ್ಲಿ ಮೂಡಿಬಂದಿರುವ ‘ಎ‘ ಚಿನ್ಹೆ ಲಾಂಛನ ಎಲ್ಲರ ಗಮನ ಸೆಳೆದಿದೆ. ಲಘು ಯುದ್ಧ ವಿಮಾನ ಮಾದರಿಯ ತೇಜಸ್ ಹಾರಾಡಲಿದ್ದಾನೆ. ಭೀಮ, ರುದ್ರ, ಸಾರಸ್ ತಮ್ಮ ಆಕರ್ಷಕ ಹಾರಾಟದ ಮೂಲಕ ಬಾನಿನಲ್ಲಿ ಚಿತ್ತಾರ ಬರೆದಿವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ರಕ್ಷಣಾ ಇಲಾಖೆ ರಾಜ್ಯ ಸಚಿವ ಡಾ.ಸುಭಾಷ್​ ಭಾಮ್ರೆ, ಕೇಂದ್ರ ಸಚಿವ ಸುರೇಶ್ ಪ್ರಭು ಸೇರಿ ಹಲವು ಗಣ್ಯರು ಭಾಗಿಯಾಗಿದ್ದು ದೇಶ ವಿದೇಶಗಳ ಗಣ್ಯರು ಉಪಸ್ಥಿತರಿದ್ದರು.
ರಫೆಲ್, ಮಿಗ್, ತೇಜಸ್, ಸುಖೋಯ್, ಸಾರಂಗ್ ಸೇರಿದಂತೆ ದೇಶ-ವಿದೇಶದ 50ಕ್ಕೂ ಹೆಚ್ಚು ಯುದ್ಧ ವಿಮಾನಗಳು ಬಾನಂಗಳದಲ್ಲಿ ಹಾರಾಡಲಿವೆ.

ಏರ್​ ಶೋನಲ್ಲಿ ಸೂರ್ಯಕಿರಣ ಯುದ್ಧವಿಮಾನ ಹಾರಾಟ ಪ್ರದರ್ಶನ ಮಾಡುತ್ತಿಲ್ಲ. ತಾಲೀಮು ನಡೆಸುವ ವೇಳೆ ನಡೆದ ಅವಘಡ ಹಿನ್ನೆಲೆಯಲ್ಲಿ ಸೂರ್ಯಕಿರಣ ಹಾರಾಟವನ್ನು ರದ್ದು ಮಾಡಲಾಗಿದೆ
ಏರೋ ಇಂಡಿಯಾ ಶೋ ನಡೆಯುವ ಯಲಹಂಕ ವಾಯುನೆಲೆ ಸುತ್ತಮುತ್ತ ಭಾರಿ ಬಂದೋಬಸ್ತ್ ಮಾಡಲಾಗಿದೆ. ಮೂರು ಸುತ್ತಿನ ರಕ್ಷಣಾ ಕೊಟೆಯನ್ನು ನಿರ್ಮಾಣ ಮಾಡಲಾಗಿದೆ. ವಾಯುನೆಲೆ ಸುತ್ತ 15 ವೀಕ್ಷಣಾ ಗೋಪುರ ಸ್ಥಾಪನೆ ಮಾಡಲಾಗಿದೆ. ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ ವಾಯುನೆಲೆ ಸುತ್ತ ಗಸ್ತು ತಿರುಗುತ್ತಿದ್ದಾರೆ. ಗರುಡಾ ಪಡೆಯ 30 ಶಾರ್ಪ್ ಶೂಟರ್​ಗಳನ್ನೂ ನಿಯೋಜನೆ ಮಾಡಲಾಗಿದೆ.


ಐಎಎಫ್​​​​ ಱಡಾರ್​​​ಗಳ ಮೂಲಕ ವಾಯು ನೆಲೆಯ ಆಕಾಶವನ್ನು ಕಣ್ಗಾವಲು ಮಾಡಲಾಗ್ತಿದೆ. 7 ಡಿಸಿಪಿ, 20 ಎಸಿಪಿ 90 ಇನ್ಸ್​ಪೆಕ್ಟರ್​​​, 161 ಸಬ್ ಇನ್ಸ್​ಪೆಕ್ಟರ್​​​​, 1900 ಕಾನ್ಸ್​ಟೇಬಲ್​​​ಗಳು, 11 ಕೆಎಸ್​ಆರ್​​ಪಿಯ 5 ತುಕಡಿ, ಕ್ಷಿಪ್ರ ಕಾರ್ಯಾಚರಣೆ ಪಡೆಯ 2 ತುಕಡಿ ಹಾಗೂ ಡಿಸ್ವಾಟ್​ನ 2 ತುಕಡಿ ಬಂದೋಬಸ್ತ್​​ ಮಾಡಲಿವೆ.
ಅಲ್ಲದೇ ಸಂಚಾರ ವ್ಯವಸ್ಥೆ ನಿರ್ವಹಣೆಗೆ 1400ಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.