ಏರೋ ಇಂಡಿಯಾದಲ್ಲಿ 2019ರಲ್ಲಿ ಮತ್ತೆ ಅಗ್ನಿ ಅವಘಡ – 200ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮ!

Air show 2019

ಬೆಂಗಳೋರಿನ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ಪ್ರದರ್ಶನದ ವೇಳೆ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ 310ಕ್ಕೂ  ಹೆಚ್ಚು ಕಾರುಗಳು ಅಗ್ನಿಗಾಹುತಿಯಾಗಿವೆ. ಗೇಟ್ ನಂಬರ್ 5ರ ಬಳಿ ವಾಹನ ನಿಲುಗಡೆ ಮಾಡಿದ್ದ ಜಾಗದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು ಸ್ಥಳಗ್ಗೆ 10 ಅಗ್ನಿಶಾಮಕ ವಾಹನಗಳು ಆಗಮಿಸಿತ್ತು.

ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಈ ಮಧ್ಯೆ ಸಾವಿರಾರು ವಾಹನಗಳನ್ನು ನಿಲುಗಡೆ ಮಾಡಿದ ಜಗದಲ್ಲಿ ಬೆಂಕಿ ಕಾಣಿಸಿಕೊಂಡಿತು, ಆದರೆ ಮೊದಲು ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ತಿಳಿದಿರಲಿಲ್ಲ ಆದರೆ ಅಲ್ಲಿಯೇ ಇದ್ದ ಕಿಡಿಗೇಡಿಗಳು ಹುಲ್ಲಿಗೆ ಬೆಂಕಿ ಹಚ್ಚಿದ್ದ ಕಾರಣ ಹೊಗೆ ಆವರಿಸಿಕೊಂಡಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವು ನಿಮಿಷಗಳ ಕಾಲ ಆತಂಕ ಸೃಷ್ಟಿಮಾಡಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಳಗ್ಗೆಯ ಒಂದು ಹಂತದ ವೈಮಾನಿಕ ಪ್ರದರ್ಶನಕ್ಕೆ ತೆರೆ ಬಿದ್ದಿದೆ, ಮಧ್ಯಾಹ್ನದ ಪ್ರದರ್ಶನ 2 ಗಂಟೆಯ ಬಳಿಕ ಆರಂಭವಾಗಲಿದೆ ಅಂತ ಹೇಳಲಾಗ್ತಿದೆ. ಸಾವಿರಗಟ್ಟಲೆ ವಾಹನಗಳ ನಿಲ್ಲಿಸಿದ್ದ ಜಾಗದಲ್ಲಿ ದಟ್ಟ ಹೊಗೆ, ಬೆಂಕಿ ಆವರಿಸಿಕೊಂಡಿತ್ತು. ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ.

ಕಾರು ಮಾಲೀಕರಿಂದ ಮಾಹಿತಿ ಕಲೆ ಹಾಕಲಾಗಿದ್ದು , ನಾಲ್ಕು ಹೆಲ್ಪ್ ಡೆಸ್ಕ್‌ಗಳನ್ನ ತೆರೆಯಲಾಗಿದೆ.ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತನಿಖೆ ಮಾಡಲಾಗುತ್ತಿದೆ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದು ಯಲಹಂಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಸಿಕೊಳ್ಳಲಾಗಿದೆ. ಏರ್ ಶೋ ಪಾರ್ಕಿಂಗ್ ಸ್ಥಳಕ್ಕೆ ನಗರದ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಭೇಟಿ ನೀಡಿ ಹೇಳಿಕೆ ನೀಡಿದ್ದಾರೆ ಹಾಗೂ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ಸುನಿಲ್ ಕುಮಾರ್  ಅವರು ಮಾಹಿತಿ ನೀಡಿದ್ದಾರೆ.