ಮತ್ತೊಮ್ಮೆ ಹನಿಮೂನ್​​ಗೆ ಹೊರಟ ಐಶ್ವರ್ಯ ರೈಬಚ್ಚನ್​! ತಾರಾಜೋಡಿಗೆ ಪುತ್ರಿಯೇ ಪೋಟೋಗ್ರಾಫರ್​!!

ಬಾಲಿವುಡ್ ನ ಸ್ಟಾರ್ ಕಪಲ್ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ವಿವಾಹ ಬಂಧಕ್ಕೆ ಈಗ 12 ರ ಸಂಭ್ರಮ.   2007 ಏಪ್ರಿಲ್ 20ರಂದು ಪ್ರೇಮ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಕ್ಯೂಟ್ ಜೋಡಿ  ತಮ್ಮ 12ನೇ ವಿವಾಹ ವಾರ್ಷಿಕೋತ್ಸವವನ್ನು ತುಂಬಾ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ad

ಈ ಸಂತೋಷವನ್ನು ಸಂಭ್ರಮಿಸಲು ​ಮಗಳು ಆರಾಧ್ಯಾ ಜತೆ ದ್ವೀಪ ರಾಷ್ಟ್ರ ಮಾಲೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ ಜೂನಿಯರ್​ ಬಚ್ಚನ್​ ದಂಪತಿ. ಅಲ್ಲಿ ಖಾಸಗಿ ಬೀಚ್​ ರೆಸಾರ್ಟ್​ನಲ್ಲಿ ನೀಲಿ ಬಣ್ಣದ ನೀರಿನ ಮಧ್ಯೆ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

 

 

ಈ ವೇಳೆ ಅಭಿಷೇಕ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯ ರೈ ಅವರ ಫೋಟೋ ಹಾಕಿ ಅದಕ್ಕೆ, “ಹನಿ ಹಾಗೂ ಮೂನ್” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಭಿಷೇಕ್ ತಮ್ಮ ಪತ್ನಿ ಐಶ್ವರ್ಯ ಅವರನ್ನು ಹನಿಗೆ ಹೋಲಿಸಿದ್ದಾರೆ. ಪತ್ನಿ ಫೋಟೋ ಜೊತೆಗೆ ಚಂದ್ರನ ಫೋಟೋ ಕೂಡ ಕ್ಲಿಕ್ಕಿಸಿ ಹನಿ ಆ್ಯಂಡ್​ ಮೂನ್​ ಎಂಬ ಶೀರ್ಷಿಕೆ ಜತೆಗೆ​ ಈ ಚಿತ್ರ ಪೋಸ್ಟ್​ ಮಾಡಿದ್ದಾರೆ.

 

 

ಇನ್ನೂ ಐಶ್ವರ್ಯ ರೈ ಸಹ ತಮ್ಮ ವಿವಾಹ ವಾರ್ಷಿಕೋತ್ಸವದ ದಿನ ತನ್ನ ಪತಿ ಅಭಿಷೇಕ್ ಜೊತೆ ಇರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಐಶ್ವರ್ಯ “ನಾವಿಬ್ಬರು ಒಟ್ಟಿಗೆ ಇರುವುದನ್ನು ನಮ್ಮ ಮಗಳು ಸೆರೆ ಹಿಡಿದಿದ್ದಾಳೆ. “ಲವ್ ಯೂ ಆರಾಧ್ಯ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ