ಅಮೇರಿಕಾದಲ್ಲಿ ಇನ್ಮುಂದೆ ಮೇ ೧೨ ವಿಜಯ್ ಪ್ರಕಾಶ್ ಡೇ! ಕನ್ನಡದ ಮೇರು ಗಾಯಕನಿಗೆ ಸಿಕ್ಕಿತು ವಿಶ್ವಮಟ್ಟದ ಗೌರವ!!

ಸ್ಯಾಂಡಲ್ ವುಡ್ ನ ಅದ್ಭುತ ಪ್ರತಿಭೆ ಗಾಯಕ ವಿಜಯ್ ಪ್ರಕಾಶ್​ ಇದೀಗಾ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಸಹ ಮಿಂಚುತ್ತಿದ್ದಾರೆ.

ad

ಹೌದು ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್​ ಹೆಸರಿನಲ್ಲಿ ಅಮೇರಿಕಾದ ನಾರ್ತ್​​ ಕರೋಲಿನಾ ಮೇ 12ನ್ನು ವಿಜಯ್ ಪ್ರಕಾಶ್ ಡೇ ಅಂತಾ ಆಚರಿಸಲಾಗುತ್ತಿದೆ. ಇದು ಕನ್ನಡಿಗರಿಗೊಬ್ಬರಿಗೆ ಸಿಕ್ಕ ಬಹುದೊಡ್ಡ ಸನ್ಮಾನ.

ಮೇ 12ರಂದು ವಿಜಯ್ ಪ್ರಕಾಶ್​ ನಾರ್ತ್​​ ಕರೋಲಿನಾದಲ್ಲಿ ಮ್ಯೂಸಿಕ್ ಶೋ ನಡೆಸಿದ್ದರು. ಈ ಶೋ ಅಮೇರಿಕಾದಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿತ್ತು. ಜೊತೆಗೆ ಈ ಸಮಾರಂಭಕ್ಕೆ ಮೇಯರ್​ ಆಓರ್ ದಿ ಸಿಟಿ ಆಫ್​ ಕಾಂಕರ್ಡ್​ರವರು ಭಾಗವಹಿಸಿದ್ದರು.
ವಿಜಯ್ ಪ್ರದರ್ಶನ ನೀಡಿದ ಪರಿ ಕಂಡು ಖುಷಿಯಾದ ಅಮೇರಿಕಾ ಜನತೆ ಈ ಮೂಲಕ ಅವರಿಗೆ ಅಚ್ಚಳಿಯದೆ ಉಳಿದಿರೋ ಗಿಫ್ಟ್​​ವೊಂದನ್ನು ನೀಡಿದ್ದಾರೆ. ಅದೇ ಮೇ 12ನ್ನು ವಿಜಯ್ ಪ್ರಕಾಶ್ ಡೇ ಅಂತಾ ಆಚರಿಸಲು ಮೇಯರ್ ಅಧಿಕೃತ ಘೋಷಣೆ ಮಾಡಿದ್ದಾರೆ.