ಹೊನ್ನಾವರದ ಮೃತ ಪರೇಶ್ ಮೇಸ್ತ ಮನೆಗೆ ಭೇಡಿ ನೀಡಲಿದ್ದಾರೆ ಅಮಿತ್ ಶಾ!!! ಯಾವಾಗ? ಇನ್ನೆಲ್ಲೆಲ್ಲಿ ಹೋಗ್ತಾರೆ?

Bengaluru: BJP National Preisdent Amit Shah speaks at a press conference during his three day visit to Bengaluru on Monday. PTI Photo by Shailendra Bhojak (PTI8_14_2017_000091A)

ಫೆ 20ಕ್ಕೆ ಕುಮಟದಲ್ಲಿ ಅಮಿತ್ ಶಾ ಕಾರ್ಯಕ್ರಮ
ಮೃತ ಪರೇಶ ಮನೆಗೆ ಭೇಟಿ ನೀಡಲಿರೋ ಶಾ

ರಾಜ್ಯವಿಧಾನ ಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿಗೆ ಮುಂದಾಗಿದೆ. ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷದ ಸ್ಟಾರ್ ಪ್ರಚಾರಕನ್ನ ಕರೆತಂದು ಪಕ್ಷದ ಪರ ಪ್ರಚಾರ ನಡೆಸಲಿದೆ. ಇದಕ್ಕೆ ಮುನ್ನುಡಿಯಾಗಿ ಇದೆ ತಿಂಗಳು 20ರಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಿಲ್ಲೆಯ ಹೊನ್ನಾವರ,ಕುಮಟಾ, ಶಿರಸಿಯಲ್ಲಿ ಪ್ರವಾಸ ನಡೆಸಲಿದ್ದಾರೆ. ಫೆ 20ರಂದು ದಕ್ಷಿಣ ಕನ್ನಡದಿಂದ ಜಿಲ್ಲೆಗೆ ಪ್ರವೇಶಿಸಿಲಿರುವ ಶಾ ಹೊನ್ನಾವರದಲ್ಲಿ ಡಿ 8ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪರೇಶ ಮೇಸ್ತಾ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಲಿದ್ದಾರೆ,

ಬಳಿಕ ಮಧ್ಯಾಹ್ನ 3ಗಂಟೆಗೆ ಕುಮಟದ ಮಣಕಿ ಮೈದಾನದಲ್ಲಿ ಜಿಲ್ಲೆಯ ಕರಾವಳಿ ತಾಲೂಕಾದ ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳ ಕ್ಷೇತ್ರವನ್ನು ಸೇರಿಸಿ ಕುಮಟದ ಮಣಕಿ ಮೈದಾನದಲ್ಲಿ ನಡೆಯುವ ಬಿಜೆಪಿಯ ನವಶಕ್ತ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ, ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯ್ಯೂರಪ್ಪ, ಈಶ್ವರಪ್ಪ, ಜಗದೀಶ ಶೆಟ್ಟರ್ ಶೋಭಾ ಕರದ್ಲಾಂಜೆ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ಪಕ್ಷದ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜೆ ನಾಯ್ಕ ಬಿಟಿವಿಗೆ ಮಾಹಿತಿ ನೀಡಿದ್ದಾರೆ,