ಹುಬ್ಬಳ್ಳಿಯ ಶ್ರೀ ಸದ್ಗುರು ಶ್ರೀ‌ ಸಿದ್ಧಾರೂಢ ಮಠಕ್ಕೆ ಚಾಣಕ್ಯ ಭೇಟಿ‌…ಗದ್ದುಗೆ ದರ್ಶನ ಪಡೆದು ಸನ್ಮಾನ ಸ್ವೀಕಾರ ಮಾಡಿದ ಚಾಣಕ್ಯ..

ಬಿಜೆಪಿಯ ಚಾಣಕ್ಯ ಅಮಿತ್ ಶಾ‌ ಉತ್ತರ ಕರ್ನಾಟಕದ ಪ್ರಖ್ಯಾತ ಮಠವಾದ ಹುಬ್ಬಳ್ಳಿಯ ಶ್ರೀ ಸದ್ಗುರು ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ್ರು. ಶ್ರೀ ಮಠಕ್ಕೆ ಅಮಿತಾ ಶಾ ಆಗಮಿಸುತ್ತಿದ್ದಂತೆ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ಮೂಲಕ ಅದ್ದುರಿಯಾಗಿ ಸ್ವಾಗತ ಮಾಡಿಕೊಂಡರು..

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿ ಸಿದ್ಧಾರೂಢರ ಗದ್ದುಗೆಗೆ ಮಹಾಮಂಗಳಾರತಿ ಪೂಜೆ ನೆರವೇರಿಸಿದ್ರು.ಈ ವೇಳೆ ಅಮಿತ್ ಶಾ ಹಾಗೂ ಬಿ‌ಎಸ್ ಯಡಿಯೂರಪ್ಪ ಅವರಿಗೆ ಶ್ರೀ ಮಠದ ಟ್ರಸ್ಟ್ ಕಮಿಟಿವತಿಯಿಂದ ಸನ್ಮಾನ ಮಾಡಲಾಯಿತು.

ಚಾಣಕ್ಯ ಅಮಿತ್ ಶಾ ಅವರನ್ನು ನೋಡಲು ಜನಸಾಗರ ಹರಿದು ಬಂದಿದ್ದು, ಜನರತ್ತ ಕೈ ಮಾಡಿದ್ರು. ಅಮಿತ್ ಶಾ
ಅವರಿಗೆ ಮಾಜಿ ಸಿಎಂ ಗಳಾದ ಬಿ ಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಲ್ಹಾದ ಜೋಶಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ರು…

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..