ಷಾ ತಂತ್ರಕ್ಕೆ ಸೋಲುವ ಕೈ ಸಚಿವರ‌್ಯಾರು ಗೊತ್ತಾ ? ಸಿಎಂ ಮತ್ತು ಕೈ ಮುಖಂಡರಿಗಿದು “ಶಾ”ಕಿಂಗ್ ನ್ಯೂಸ್ !!

ಸಿಎಂ ಸಿದ್ದರಾಮಯ್ಯ, ಕೆಲ ಸಚಿವರು ಸೇರಿದಂತೆ ಕಾಂಗ್ರೆಸ್​ನ ಪ್ರಮುಖ 22 ಮುಖಂಡರನ್ನು ಸೋಲಿಸಲು ಬಿಜೆಪಿ ಚಾಣಕ್ಯ ಅಮಿತ್ ಷಾ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೇರಿ ಕೆಲ ಸಚಿವರು, ಮುಖಂಡರ ಕ್ಷೇತ್ರಗಳನ್ನು ಗುರುತಿಸಿದ್ದು, ಈ ಕ್ಷೇತ್ರಗಳ ಬಗ್ಗೆ ವಿಶೇಷ ನಿಗಾವಹಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಂಡ ಈಗಾಗಲೇ ರಾಜ್ಯದಲ್ಲಿ ಪ್ರವಾಸ ಮಾಡಿದ್ದು, ಕಾಂಗ್ರೆಸ್ ಮುಖಂಡರನ್ನು ಕಟ್ಟಿ ಹಾಕಲು ಕಾರ್ಯತಂತ್ರವನ್ನು ರೂಪಿಸಿದೆ. ಅಮಿತ್ ಷಾ ಅವರೇ ನೇರವಾಗಿ ಈ ಕ್ಷೇತ್ರಗಳ ಉಸ್ತುವಾರಿ ಮಾಡಲಿದ್ದು, ಯಾವ ಯಾವ ಜಾತಿಗಳನ್ನು ಒಗ್ಗೂಡಿಸಬೇಕು, ಮತದಾರರನ್ನು ಹೇಗೆ ತಲುಪಬೇಕು, ಸಂಘ ಪರಿವಾರದ ಕಾರ್ಯಕರ್ತರು ಚುನಾವಣೆ ಮುಗಿಯುವ ತನಕ ಹೇಗೆ ಕೆಲಸ ಮಾಡಬೇಕು ಎಂಬ ಯೋಜನೆ ರೂಪಿಸಲಾಗಿದೆ.

ಯಾವೆಲ್ಲಾ ಕ್ಷೇತ್ರಗಳನ್ನು ಅಮಿತ್ ಷಾ ಟಾರ್ಗೆಟ್ ಮಾಡಿದ್ದಾರೆ ಎಂದು ಮಾಹಿತಿ ತೆಗೆದುಕೊಂಡಾಗ ಕಾಂಗ್ರೆಸ್ಸಿಗರಿಗೆ ಶಾಕಿಂಗ್ ಆಗುವ ಮಾಹಿತಿ ಲಭಿಸಿದೆ.  ಸಿದ್ದರಾಮಯ್ಯ-ವರುಣ, ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ – ಟಿ. ನರಸೀಪುರ, ರಾಮಲಿಂಗಾರೆಡ್ಡಿ-ಬಿಟಿಎಂ ಲೇಔಟ್, ಡಾ.ಜಿ.ಪರಮೇಶ್ವರ್-ಕೊರಟಗೆರೆ, ಸತೀಶ್ ಜಾರಕಿಹೊಳಿ-ಯಮಕನ ಮರಡಿ, ಕೆ.ಜೆ. ಜಾರ್ಜ್-ಸರ್ವಜ್ಞ ನಗರ, ವಿನಯ ಕುಲಕರ್ಣಿ -ಧಾರವಾಡ, ಶರಣಪ್ರಕಾಶ್ ಪಾಟೀಲ್- ಸೇಡಂ, ಎಂ ಕೃಷ್ಣಪ್ಪ – ವಿಜಯನಗರ, ಬಸವರಾಜ ರಾಯರೆಡ್ಡಿ-ಯಲಬುರ್ಗ, ಎಂ.ಬಿ. ಪಾಟೀಲ್- ಬಬಲೇಶ್ವರ, ಪ್ರಿಯಕೃಷ್ಣ – ಗೋವಿಂದರಾಜ ನಗರ, ಸಂತೋಷ್ ಲಾಡ್ -ಕಲಘಟಗಿ, ಬಿಜೆಪಿಗೆ ರಾಜೀನಾಮೆ ನೀಡಿದ ಆನಂದ ಸಿಂಗ್-ಹೊಸಪೇಟೆ, ಶಾಸಕ ನಾಗೇಂದ್ರ -ಕೂಡ್ಲಿಗಿ ಕ್ಷೇತ್ರಗಳನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ಇವಿಷ್ಠು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಲೇ ಬೇಕು ಎಂದು ಅಮಿತ್ ಷಾ ನಿರ್ಧರಿಸಿದ್ದಾರೆ.