ಚಂದನವನದಲ್ಲಿ ‘ಅಮೂಲ್ಯ-ಜಗದೀಶ್​​’ ಮದುವೆ ಸಡಗರ ಮನೆಮಾಡಿದೆ. ಭಾವಿ ದಂಪತಿ ಎಲ್ಲೆಡೆ ತೆರಳಿ ಮದುವೆಯ ಕರೆಯೋಲೆ ನೀಡಿ ಗಣ್ಯರನ್ನು ಆಮಂತ್ರಿಸುತ್ತಿದ್ದಾರೆ. ಇವತ್ತು ಬಿಟಿವಿ ಕಚೇರಿಗೆ ಆಗಮಿಸಿದ್ದ ನಟಿ ಅಮೂಲ್ಯ ಮತ್ತು ಜಗದೀಶ್​ ಜೋಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಎಂ.ಕುಮಾರ್ ಅವರಿ​​ಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಕಚೇರಿಗೆ ಆಗಮಿಸಿದ ಭಾವಿ ದಂಪತಿಯನ್ನು ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯ್ತು.
=====
ಇದೇ ಮೇ 11 ಮತ್ತು 12 ರಂದು ಅಮೂಲ್ಯ ಮತ್ತು ಜಗದೀಶ್​ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಲಿದ್ದಾರೆ. ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ಮದುವೆ ನೆರವೇರಲಿದೆ. ಇನ್ನು, ಮೇ 16ರಂದು ಬೆಂಗಳೂರಿನಲ್ಲಿ ವಿವಾಹ ಆರತಕ್ಷತೆ ಜರುಗಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here