ಈ ನಾರಿಯ ಸಾಧನೆಗೆ ನೀವು ಶಹಬ್ಬಾಸ್ ಹೇಳಲೇ ಬೇಕು… ಹಾಗಾದರೆ ಈ ತಾಯಿಯ ಮಹತ್ಸಾಧನೆ ಏನು? ನೀವೇ ಓದಿ

ಕಾರವಾರ: ವೈದ್ಯರಾದವರು ಅದು ಎಷ್ಟೇ ತರಬೇತಿ ಪಡೆದಕೊಂಡಿದ್ರು ಕೆಲವೊಂದು ಸಲ ಕಾಯಿಲೆಗೆ ಸರಿಯಾದ ಚಿಕಿತ್ಸೆ ನೀಡುವಲ್ಲಿ ವಿಫಲರಾಗಿ ರೋಗಿ ಜೀವನ ಪರ್ಯಂತ ಆ ರೋಗಿ ಕಾಯಿಲೆಯಿಂದ ಬಳಲುತ್ತಿರುವ, ಸಾವನ್ನಪ್ಪಿರುವ ಸಾಕಷ್ಟು ಪ್ರಕರಣಗಳು ನಮ್ಮ ಕಣ್ಣಮುಂದೆ ಬಂದು ಹೋಗತ್ತಾನೆ ಇರತ್ತೆ. ಆದ್ರೆ ಯಾವುದೇ ವೈದ್ಯಕೀಯ ತರಬೇತಿ ಪಡೆಯದೆ ಇರೋ ಅಕ್ಷರದ ಪರಿವೇ ಇಲ್ಲದ ಮಹಿಳೆಯೊಬ್ಬಳು ಸಾಯುವ ಸ್ಥಿತಿಯಲ್ಲಿರುವ ಸಾವಿರಾರು ಜನರಿಗೆ ನಾಟಿ ಔಷಧಿ ನೀಡುವ ಮೂಲಕ ಜೀವ ರಕ್ಷಣೆ ಮಾಡಿದ್ದಾರೆ. ಈ ಮೂಲಕ ವೈದ್ಯಲೋಕವೆ ಅಚ್ಚರಿ ಪಡುವಂತಾಗಿದೆ. ಇದುವರೆಗೂ ತೆರೆಮರೆಯಲ್ಲಿಯೇ ಇದ್ದ ಆ ಮಹಿಳೆಯನ್ನ ಪರಿಚಯಿಸುವ ಕೆಲಸಕ್ಕೆ ಬಿಟಿವಿ ಮುಂದಾಗಿದೆ. ಆ ಮಹಿಳೆ ಯಾರು ಅನ್ನೊ ಕುತೂಹಲ ಇದೇಯಲ್ವಾ ಹಾಗಾದ್ರೆ ಈ ಸ್ಟೋರಿ ಓದಿ.

ad


ಹಾವು, ನಾಯಿ, ನಾಗರ ಹಾವು, ರಕ್ತಬುಕರಿ, ವ್ಯಕ್ತಿಗಳ ಗಾಯದ ಮೇಲೆ ಕೊಳವೆ ಇಟ್ಟಕೊಂಡು ತನ್ನ ಬಾಯಿಯಿಂದ ಉಸಿರನ್ನ ತೆಗೆದುಕೊಂಡು.ಅವರ ದೇಹದೊಳಗೆ ಸೇರಿರುವ ವಿಷವನ್ನ ತೆಗೆದು ಇನ್ನೊಬ್ಬರ ಉಸಿರು ಉಳಿಸುತ್ತಿರುವ ಆ ಮಹಿಳೆ ಬೇರೆಯಾರೂ ಅಲ್ಲ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಗ್ರಾಮದ ಹಡವು ಎಂಬ ಪುಟ್ಟಹಳ್ಳಿಯಲ್ಲಿರುವ 68 ವರ್ಷದ ದೇವಿ ಗೌಡ. ಹೌದು ಈಕೆ ಯಾವುದೇ ವೈದ್ಯಕೀಯ ತರಬೇತಿ ಪಡೆದುಕೊಂಡವರಲ್ಲ. ಕಾಡಿನಲ್ಲಿ ಸಿಗುವ ವಿವಿಧ ಜಾತಿಯ ಬೇರುಗಳನ್ನು ತೆಗೆದುಕೊಂಡು ಬಂದು ಅದರಿಂದ ಔಷಧಿ ತಯಾರಿಸಿ ಹಾವು, ನಾಯಿ, ಕಡಿದವರಿಗೆ ಹಚ್ಚಿ ಗುಣಮುಖರನ್ನಾಗಿಸುತ್ತಿದ್ದಾರೆ. ಮಕ್ಕಳಿಗೆ ನರ ವ್ಯಾಧಿ, ಸಂತಾನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಗಿಡಮೂಲಿಕೆ ಔಷಧಿಯನ್ನ ನೀಡೋ ಮೂಲಕ ಅವರ ಕೊರಗನ್ನ ದೂರಮಾಡುತ್ತಾ ಬಂದಿದ್ದಾರೆ. ಈ ನಾಟಿ ಔಷಧಿಯನ್ನ ದೇವಿ ಗೌಡರಿಗೆ ಅವರ ಅಜ್ಜಮುತ್ತಜ್ಜ ಕಾಲದಿಂದ ಬಂದಿರುವ ಬಳುವಳಿ ಆಗಿದೆ. ಅದನ್ನೆ ಈಗ ದೇವಿ ಗೌಡ ಮುಂದುವರೆಸಿಕೊಂಡು ಹೋಗತ್ತಾ ಇದ್ದಾರೆ. ನಾಗರಹಾವು ಕಚ್ಚಿದ ಕೆಲವೇ ಗಂಟೆಗಳಲ್ಲಿ ಬಂದರೆ ಕುಡಿಯಲು ಔಷಧ ಕೊಟ್ಟು . ವಿಷ ಪೂರ್ತಿ ರಕ್ತದ ಮೂಲಕ ಹೊರ ಹೋಗಿದೆ ಎಂದು ಖಾತ್ರಿ ಪಡಿಸಿಕೊಂಡ ಮೇಲೆ ಕಾಡಿನಿಂದ ತಂದಿರುವ ಬೇರನ್ನ ತೆಯ್ದು ಗಾಯಕ್ಕೆ ಲೇಪಿಸುತ್ತಾರೆ. ಇಷ್ಟನ್ನ ಮಾಡಿದ್ರೆ ಗುಣಮುಖರಾಗುತ್ತಾರೆ ಅಂತಾರೆ ಇವರು.

ಇನ್ನೂ ಹಾವು, ನಾಯಿ ಕಡಿದಿರುವ ಬಗ್ಗೆ ಆಸ್ಪತ್ರೆಗೆ ಹೋಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡವರು ನಂತರದಲ್ಲಿ ದೇವಿ ಗೌಡ ಅವರ ಕೈಯಿಂದ ನಾಟಿ ಮದ್ದನ್ನ ಪಡೆದುಕೊಂಡು ಹೋಗುತ್ತಾರೆ. ವೈದ್ಯರ ಚಿಕಿತ್ಸೆ ನಂತರದಲ್ಲಿಯೂ ನಾಟಿ ಔಷಧಿ ಬೇಕಂತೆ. ಡಾಕ್ಟರ್ ಅಜ್ಜಿ ಯಾವತ್ತು ತನ್ನ ಬಳಿ ಚಿಕಿತ್ಸೆಗೆ ಬಂದವರಿಂದ ಎನ್ನನ್ನೂ ನಿರೀಕ್ಷೆ ಮಾಡೋದಿಲ್ಲ. ದೇವರ ಹೆಸರಲ್ಲಿ ಒಂದು ಕಾಯಿಯನ್ನ ಇಟ್ಟು ಕೊಟ್ಟ ಹಣಕ್ಕೆ ಖುಷಿಯಿಂದ ತನ್ನ ಕೆಲಸವನ್ನ ಮಾಡುತ್ತಾರೆ. ಈ ಅಜ್ಜಿಯನ್ನ ಅರಿಸಿಕೊಂಡು ಜಿಲ್ಲೆಯ ನಾನಾ ಕಡೆಯಿಂದ ಜನ ಬರತ್ತಾ ಇರುತ್ತಾರೆ. ಪ್ರತಿ ದಿನ ಇವರ ಮನೆಯಲ್ಲಿ ಒಂದೆರಡು ಜನ ಇರತ್ತಾರೆ. ದೇವಿ ಗೌಡ ಅವರು ಕಳೆದ ಮುವತ್ತು ವರ್ಷದಿಂದ ನಾಟಿ ಚೌಷಧಿ ನೀಡುತ್ತಾ ಬರುತ್ತಿದ್ದಾರೆ, ಆದ್ರೆ ಇದುವರೆಗೂ ಯಾವ ಸಂಘ ಸಂಸ್ಥೆಯಾಗಲಿ ಸರಕಾರವಾಗಲಿ ಅವನ್ನ ಗುರುತಿಸುವ ಕಾರ್ಯ ಮಾಡಿಲ್ಲ. ಇದೀಗೂ ಆ ಅಜ್ಜಿ ತೆರೆಮರೆಯಲ್ಲಿಯೇ ಕಾರ್ಯವನ್ನ ಮುಂದುವರೆಸಿಕೊಂಡು ಬರತ್ತಾ ಇರುವ ನಾಟಿ ವೈದ್ಯೆ ದೇವಿ ಗೌಡ ಅವರನ್ನ ಗುರುತಿಸುವ ಕೆಲಸವಾಗಬೇಕು ಅನ್ನೋದು ಅನೇಕರ ಅಭಿಪ್ರಾಯ.

ಒಟ್ಟಾರೆಯಾಗಿ ವೈದ್ಯಲೋಕಕ್ಕೆ ಸವಾಲಾಗಿರೋ ನಾಟಿ ವೈದ್ಯೆ ದೇವಿ ಗೌಡ ಅವರ ಕಾರ್ಯನಿಜಕ್ಕೂ ಶ್ಲಾಘನೀಯ. ಇನ್ನಾದ್ರೂ ಸರಕಾರ ತೆರಮರೆಯಲ್ಲಿರುವ ಇವರನ್ನ ಗುರುತಿಸಿ ಸಾವು ಬದುಕಿನ ನಡುವೆ ಇರುವವರನ್ನ ರಕ್ಷಿಸುತ್ತಿರುವ ದೇವಿ ಅವರ ನೆರವಿಗೆ ಮುಂದಾಗಬೇಕಾಗಿದೆ.

ವರದಿ : ಉದಯ ಬರ್ಗಿ ಬಿಟಿವಿ ನ್ಯೂಸ್ ಕಾರವಾರ