ಸೋಷಿಯಲ್​ ಮೀಡಿಯಾ ಸ್ಟಾರ್​ ಆದ ಅಜ್ಜಿಗೆ ಸಿಕ್ತು ಎಲ್ಲ ಮ್ಯಾಚ್​ ಫ್ರೀಯಾಗಿ ನೋಡುವ ಅವಕಾಶ! ಇಂಥ ಗಿಫ್ಟ್​ ಕೊಟ್ಟಿದ್ದ್ಯಾರು ಗೊತ್ತಾ?!

ಕ್ರಿಕೆಟ್​ ಅಂದ್ರೇನೇ ಹಾಗೇ ಎಂತಹವರನ್ನೂ ಹುಚ್ಚೆದ್ದು ಕುಣಿಸುತ್ತದೆ ಕ್ರಿಕೆಟ್. ನಿನ್ನೆ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 28ರನ್​ಗಳ ಅಂತರದಿಂದ ಗೆದ್ದ ಭಾರತ, ಸೆಮಿಸ್​ ಪ್ರವೇಶಿಸಿದೆ. ನಿನ್ನೆ ನಡೆದ ಭಾರತ-ಬಾಂಗ್ಲಾದೇಶ ಮ್ಯಾಚ್​ ನೋಡೋಕೆ 87 ವರ್ಷದ ಅಜ್ಜಿ ಚಾರುಲತಾ ಪಾಟೀಲ್ ಆಗಮಿಸಿದ್ರು. ಬಾಂಗ್ಲಾದೇಶದ ವಿರುದ್ಧ ಇಂಡಿಯಾ ವಿನ್​ ಆಗ್ತಿದ್ದಂತೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

ad

ಟೀಂ ಇಂಡಿಯಾ ಮೇಲಿನ ಇವರ ಅಭಿಮಾನವನ್ನ ಕಂಡ ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಮ್ಯಾಚ್ ಮುಗಿದ ಬಳಿಕ ಅಜ್ಜಿಯನ್ನ ಭೇಟಿಯಾಗಿ ಆಶೀರ್ವಾದ ಪಡೆದ್ರು. ಸಧ್ಯಾ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಹಾಗಿ ಸಖತ್ ಹವಾ ಕ್ರಿಯೆಟ್​ ಮಾಡಿರುವ ಈ ಅಜ್ಜಿಗೆ ಭಾರತದ ಖ್ಯಾತ ಉದ್ಯಮಿ, ಮಹಿಂದ್ರಾ ಗ್ರೂಪ್​ನ ಮುಖ್ಯಸ್ಥ ಆನಂದ್​ ಮಹಿಂದ್ರಾ ಕೂಡ ಫಿದಾ ಆಗಿದ್ದಾರೆ ಅಲ್ಲದೆ ಭಾರತದ ಉಳಿದ ಪಂದ್ಯಗಳನ್ನು ವೀಕ್ಷಿಸಲು ನಾನು ಅವರಿಗೆ ಟಿಕೆಟ್​ ಕೊಡಿಸುವೆ ಎಂದು ತಿಳಿಸಿದ್ದಾರೆ.

ವಿಶ್ವಕಪ್ ಅಂದ್ರೆ ಕೇಳ್ಬೇಕಾ..? ಅದ್ರಲ್ಲೂ ಈ ಬಾರಿ ಆಡಿದ ಬಹುತೇಕ ಪಂದ್ಯಗಳನ್ನ ಗೆದ್ದುಕೊಂಡಿರೋ ಭಾರತ,ವಿಶ್ವಕಪ್​ ತನ್ನದಾಗಿಸಿಕೊಳ್ಳುವತ್ತಾ ಮುನ್ನುಗ್ಗುತ್ತಿದೆ. ಹೀಗಾಗಿ ನಿನ್ನೆಯ ಪಂದ್ಯ ವೀಕ್ಷಿಸಲು 87 ವರ್ಷದ ಚಾರುಲತಾ ಪಂದ್ಯ ವೀಕ್ಷಿಸಲು ಬಂದಿದ್ದು 18 ರ ಅದಿಹರೆಯದ ಯುವಕರಂತೆ ಉತ್ಸುಕತೆ ಇಂದ ಪೀಪಿ ಊದಿ ಭಾರತಕ್ಕೆ ಚಿಯರ್ ಅಪ್​ ಮಾಡುತ್ತಾ ಕುಣಿದು ಕುಪ್ಪಳಿಸಿದ್ದಾರೆ.
ಇವರ ಈ ವಿಡಿಯೋ, ಪೊಟೋಗಳ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಹಾಗುತ್ತಿದ್ದಂತೆ. ಆನಂದ್​ ಮಹಿಂದ್ರಾ ನಾನು ಕ್ರಿಕೆಟ್​ ನೋಡುತ್ತಿರಲಿಲ್ಲ. ಆದ್ರೆ, ಈ ಮಹಿಳೆಯನ್ನು ನೋಡುವ ಸಲುವಾಗಿ ನಾನು ಟಿವಿ ಸ್ವಿಚ್​ ಆನ್ ಮಾಡಲಿದ್ದೇನೆ ಎಂದರು. ಜೊತೆಗೆ, ಭಾರತಕ್ಕೆ ಹೃದಯತುಂಬಿ ಸಪೋರ್ಟ್ ಮಾಡುತ್ತಿರುವ ಇವರು ನನ್ನ ಕಣ್ಣಿಗೆ ಮ್ಯಾಚ್​ ವಿನ್ನರ್​ ರೀತಿ ಕಾಣುತ್ತಿದ್ದಾರೆ ಅಂತಾ ಟ್ವೀಟ್​ ಮಾಡಿದ್ದಾರೆ .

ಆನಂದ್​ ಮಹಿಂದ್ರಾರ ಈ ಟ್ವೀಟ್ ಕಂಡ ವ್ಯಕ್ತಿಯೊಬ್ಬ ರೀಟ್ವೀಟ್​ ಮಾಡಿ, ಸರ್​. ನೀವು ಅವರಿಗ್ಯಾಕೆ ಪಂದ್ಯಗಳನ್ನು ವೀಕ್ಷಿಸಲು ಸ್ಪಾನ್ಸರ್​ ಮಾಡಬಾರದು ಅಂತಾ ಪ್ರಶ್ನಸಿದ್ರು. ಅವರ ಪ್ರಶ್ನೆಗೆ ಕೂಡಲೇ ಪ್ರತಿಕ್ರಿಯಿಸಿದ ಆನಂದ್​ ಮಹೀಂದ್ರಾ, ಆ ವೃದ್ಧೆ ಯಾರು ಅಂತಾ ನನಗೆ ಮಾಹಿತಿ ನೀಡಿ. ಐ ಪ್ರಾಮಿಸ್​, ಭಾರತದ ಉಳಿದ ಪಂದ್ಯಗಳನ್ನು ವೀಕ್ಷಿಸಲು ನಾನು ಅವರಿಗೆ ಟಿಕೆಟ್​ ಕೊಡಿಸುವೆ ಎಂದು ತಿಳಿಸುವು ಮೂಲಕ ವೃದ್ಧೇ ಚಾರುಲತಾರ ಕ್ರಿಕೆಟ್ ಪ್ರೇಮಕ್ಕೆ ಪ್ರೋತ್ಸಾಹ ನೀಡಿದ್ದಾರೆ .