ಅನಂತಕುಮಾರ ಹೆಗಡೆ ಕಾರು ಅಪಘಾತ- ಹೆಗಡೆ ಅಪಾಯದಿಂದ ಪಾರು!

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಎಸ್ಕಾರ್ಟ್​ ವಾಹನಕ್ಕೆ ಡಿಕ್ಕಿ ಹೊಡೆದ ಅಪಘಾತಕ್ಕಿಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಶಿರಸಿಯಿಂದ ಹೊನ್ನಾವರಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.


ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಯಾಣಾ ಕ್ರಾಸ್​ ಬಳಿ ಸಾಗುತ್ತಿದ್ದ ವೇಳೆ ಮುಂದೇ ಸಾಗುತ್ತಿದ್ದ ಕಾರೊಂದು ಧೀಡಿರ್​ ಬ್ರೇಕ್​ ಹಾಕಿ ನಿಂತಿದೆ. ಇದರಿಂದ ನಿಯಂತ್ರಣ ತಪ್ಪಿದ ಕೇಂದ್ರ ಸಚಿವರ ಕಾರು ಎಸ್ಕಾರ್ಟ್​ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಅನಂತಕುಮಾರ್ ಹೆಗಡೆ ಕಾರು ಸ್ವಲ್ಪ ಜಖಂ ಆಗಿದೆ. ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.