ಮಂಗಳೂರಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ಪೂಜೆಗೆ ಬಂತು ವಿಶೇಷ ಅತಿಥಿ! ಅಚ್ಚರಿಗೊಂಡ ಭಕ್ತ ಸಮೂಹ!!

ಮಂಗಳೂರಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ ಪೂಜೆ ವೇಳೆಯಲ್ಲಿ ಅಚ್ಚರಿಯೊಂದು ನಡೆದಿದ್ದು, ಭಕ್ತರು ಈ ಅಚ್ಚರಿಕಂಡು ಭಕ್ತಿಯಿಂದ ಕೈಮುಗಿದಿದ್ದಾರೆ. ಹೌದು ಅನಂತ ಪದ್ಮನಾಭ ಸುಬ್ರಹ್ಮಣ್ಯ  ಪೂಜೆ ವೇಳೆ ಸುಬ್ರಹ್ಮಣ್ಯನ ವಾಹನ ಎಂದು ಪರಿಗಣಿಸಲಾಗುವ  ನವಿಲು ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ad

ಹೌದು  ದೇವರ ಪ್ರತಿ ಪೂಜಾ ಕಾರ್ಯದಲ್ಲೂ ನವಿಲು ಭಾಗಿಯಾಗಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಿದೆ. ಮಂಗಳೂರಿನ ನೀರುಮಾರ್ಗ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರೋ ಈ ದೇವಸ್ಥಾನದಲ್ಲಿ, ನಿನ್ನೆ ಧ್ವಜಸ್ತಂಭಕ್ಕೆ ತೈಲವಾಧಿವಾಸ ಪೂಜೆ ಅದ್ಧೂರಿಯಾಗಿ ನೆರವೇರಿತ್ತು. ಈ ವೇಳೆ ನವಿಲು ಪ್ರತ್ಯಕ್ಷವಾಗಿ ಭಕ್ತರೊಂದಿಗೆ ನವಿಲು ಕೂಡಾ ದೇಗುಲಕ್ಕೆ ಪ್ರದಕ್ಷಿಣೆ ಹಾಕಿದೆ.

ಈ ರೀತಿ ನವಿಲು ದೇಗುಲದಲ್ಲಿ ಪ್ರದಕ್ಷಿಣೆ ಮಾಡಿರುವುದು ಭಕ್ತರಲ್ಲಿ ಆಚ್ಚರಿ ಮೂಡಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.