ಸಚಿವ ಅನಂತಕುಮಾರ್ ಹೆಗಡೆ ನಾಲಿಗೆ ಹಾಗೂ ಸಚಿವ ಸ್ಥಾನ ಎರಡು ಎಕ್ಕಡ- ಹುಬ್ಬಳ್ಳಿಯಲ್ಲಿ ಬಸವರಾಜದೇವರು ಸ್ವಾಮೀಜಿ ಟೀಕೆ

ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಡುವೆ ಕಳೆದ ಕೆಲ ತಿಂಗಳಿನಿಂದ ವಾರ್ ನಡೆಯುತ್ತಲೇ ಇದೆ. ಇದೀಗ ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ವಾಗ್ದಾಳಿಗೆ ಹುಬ್ಬಳ್ಳಿಯ ಬಸವರಾಜ್ ದೇವರುಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರದ್ದು ನಾಲಿಗೆಯೋ ಇಲ್ಲ ಎಕ್ಕಡವೋ ಎಂದು ಪ್ರಶ್ನಿಸಿದ್ದಾರೆ.


ಕೇವಲ ಅನಂತಕುಮಾರ್ ನಾಲಿಗೆ ಮಾತ್ರ ಅಲ್ಲ ಅವರ ಸಚಿವ ಸ್ಥಾನವೂ ಎಕ್ಕಡ. ಅಷ್ಟೇ ಅಲ್ಲ ಅನಂತಕುಮಾರ್​​ನ್ನು ಕೇಂದ್ರ ಮಂತ್ರಿ ಮಾಡಿದವರೂ ಕೂಡ ಎಕ್ಕಡ ಎಂದು ಬಸವರಾಜು ದೇವರು ವಾಗ್ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯ ಮನಸೂರಿನ ಶ್ರೀರೇವಣಸಿದ್ಧೇಶ್ವರ ಮಠದ ಶ್ರೀಬಸವರಾಜು ದೇವರು ಮಾತನಾಡಿದ್ದು, ಕೇಂದ್ರ ಸಚಿವ ಹೆಗಡೆ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ನಾನು ‌ಕೆಟ್ಟ ಶಬ್ಧಗಳನ್ನ ಬಳಸಬಾರದು. ಆದ್ರೇ, ಬಿಜೆಪಿಯವರ ನಾಲಿಗೆ‌ ಸರಿಯಿಲ್ಲ. ಅನಂತಕುಮಾರ‌ ಹೆಗಡೆ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ ನಾಲಿಗೆ ನೀಚ‌ ನಾಲಿಗೆ. ಕರ್ನಾಟಕ ಶಾಂತಿಯಿಂದ ಇರೋದು ಈ ನಾಯಕರಿಗೆ ಇಷ್ಟವಿದ್ದಂತಿಲ್ಲ. ಕರ್ನಾಟಕ ಬಸವಣ್ಣ, ಸಂತ ಶಿಶುನಾಳ ಶರೀಫರು, ಡಾ. ಅಂಬೇಡ್ಕರ್ ತತ್ವ ಪಾಲಿಸುವ ನಾಡು.


ಕೋಮು ಭಾವನೆ ಕೆರಳಿ‌ ಶಾಂತಿ ಕದಡಿದ್ರೇ, ಅಧಿಕಾರಕ್ಕೆ ಬರುತ್ತೇವೆ ಅಂತ ಬಿಜೆಪಿ ನಾಯಕರು ತಿಳಿದುಕೊಂಡಿದ್ದಾರೆ.
ಕೋಮುವಾದ ಒಂದು ಮಾರಕ ರೋಗವಿದ್ದಂತೆ. ಹೆಚ್ಚು ಹರಡಿದ್ರೇ ಅಪಾಯ. ಶೋಭಾ, ಅನಂತಕುಮಾರ ಹೆಗ್ಡೆ, ಪ್ರತಾಪ ಸಿಂಹಗೆ ಅಕ್ಕ‌-ತಂಗಿಯರು, ಬಂಧುಬಳಗೆ ಇದೆಯೋ ಇಲ್ವೋ ಎಂದು ಪ್ರಶ್ನಿಸಿದ ಬಸವರಾಜ ದೇವರು
ಅಸಂವಿಧಾನಿಕ ಪದ ಬಳಸದಂತೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಬಿಜೆಪಿ ನಾಯಕರುಗಳು ಕರ್ನಾಟಕಕ್ಕೆ ಕಪ್ಪು ಚುಕ್ಕೆಗಳು. ಈ ರೀತಿ ಮಾತನಾಡೋದು ನಿಲ್ಲಿಸದಿದ್ರೇ, ನೀವು ಎಲ್ಲಿ ಹೋಗ್ತೀರೋ ಅಲ್ಲಿ ದಾಳಿ ಮಾಡಬೇಕಾಗುತ್ತೆ ಎಂದರು. ಒಟ್ಟಿನಲ್ಲಿ ರಾಜ್ಯದಲ್ಲಿ ಪರಸ್ಪರ ವಾಗ್ದಾಳಿ ಸರಣಿ ಮುಂದುವರೆದಿದೆ.