ಆಂಧ್ರ ಅಧಿಕಾರಿಗಳು ಬಂದ್ರು ಕರ್ನಾಟಕದ ದೇವಸ್ಥಾನ ಕೆಡವಿದರು! ಸ್ಥಳೀಯರ ಆಕ್ರೋಶ!

 

ad

ಕೋಲಾರದ ಗಡಿಯಲ್ಲಿ ಮೂರು ರಾಜ್ಯಗಳ ನಡುವೆ ದೇಗುಲದ ವಿಚಾರ ಕುರಿತಂತೆ ಇದ್ದ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಬಂಗಾರಪೇಟೆ ತಾಲ್ಲೂಕಿನ ಬತ್ತಲಹಳ್ಳಿಯಲ್ಲಿರೋ ಮಲ್ಲಪ್ಪನ ಬೆಟ್ಟದ ಮಲ್ಲೇಶ್ವರ ಸ್ವಾಮಿ ದೇಗುಲಕ್ಕಾಗಿ ಆಂಧ್ರ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ವಾರ್​ ನಡೆಯುತ್ತಿದೆ.

 

 

ಗೊಂದಲ ನಿವಾರಣೆಗೆ 2017 ಮಾರ್ಚ್​ನಲ್ಲಿ ಜಂಟಿ ಸರ್ವೇ ನಡೆಸಲು ಮೂರು ರಾಜ್ಯಗಳಿಗೆ ಆಹ್ವಾನ ನೀಡಲಾಗಿತ್ತು. ಆದ್ರೆ, ಆಂದ್ರ ಮತ್ತು ತಮಿಳುನಾಡು ರಾಜ್ಯಗಳು ಗೈರಾಗಿದ್ದವು. ಇದೀಗ ಕರ್ನಾಟಕದಲ್ಲಿರೋ ದೇಗುಲವನ್ನು ಆಂಧ್ರದ ಅಧಿಕಾರಿಗಳು ಕೆಡವಿ ನೆಲಸಮ ಮಾಡಿದ್ದಾರೆ.ಅಲ್ದೇ, ಆಂಧ್ರ ಗಡಿಯಲ್ಲಿ ಹೊಸ ದೇವಾಲಯ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಆಂಧ್ರ ಸರ್ಕಾರದ ಕುಮ್ಮಕ್ಕಿನಿಂದಲೇ ದೇಗುಲ ಕೆಡವಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ   ದ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.