ಈಗಲೋ ಆಗಲೋ ಬಿದ್ದು ಹೋಗುವ ಕಟ್ಟಡದಲ್ಲಿ ಅಂಗನವಾಡಿ.

ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮದಲ್ಲಿನ ಆರೋಗ್ಯ ಸಹಾಯಕ ಕೇಂದ್ರದಲ್ಲಿ ಇರೋ ಅಂಗನವಾಡಿ ಕೇಂದ್ರದಲ್ಲಿ ಇರೋ 40ಕ್ಕೂ ಹೆಚ್ಚು ಮಕ್ಕಳು ಪ್ರತಿ ದಿನವೂ ಜೀವ ಭಯದಲ್ಲಿಯೇ ಆಟ-ಪಾಠ-ಊಟ ಮಾಡುವಂತಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ದರ್ಗಾವೊಂದರಲ್ಲಿ ಇರೋ ಅಂಗನವಾಡಿ ಕೇಂದ್ರವನ್ನು ಒಂದು ವರ್ಷದ ಹಿಂದೆಯಷ್ಟೇ ಈ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.

ad   

ದರ್ಗಾದಿಂದ ಆರೋಗ್ಯ ಕೇಂದ್ರಕ್ಕೆ ಅಂಗನವಾಡಿ ಕೇಂದ್ರ ಸ್ಥಳಾಂತರಗೊಂಡ ಮಕ್ಕಳ ಪರಿಸ್ಥಿತಿಯು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಈಗಿರೋ ಕಟ್ಟಡ ಈಗಲೋ ಆಗಲೋ ಬೀಳೋ ಸ್ಥಿತಿಯಲ್ಲಿ ಇದ್ದು, ಗೋಡೆಗಳು ಬಿರುಕು ಬಿಟ್ಟಿದ್ದು, ಅಲ್ಲಲ್ಲಿ ಸ್ಟೀಲ್ ಕೂಡ ಅಸ್ಥಿಪಂಜರದಂತೆ ಹೊರಗೆ ಚಾಚಿಕೊಂಡಿದೆ. ಇದರಿಂದ ಮಕ್ಕಳು ಹಾಗೂ ಅಂಗನವಾಡಿ ಕಾರ್ತೆ ಗೋಡೆ ಈಗ ಬೀಳತ್ತೋ…ಆಗ್ ಬೀಳುತ್ತೋ.. ಎನ್ನುತ್ತ ದಿನನಿತ್ಯ ಅಂಗೈಯಲ್ಲಿ ಜೀವ ಹಿಡಿದು ದಿನ ಕಳೆಯುತ್ತಿದ್ದಾರೆ.

ಇನ್ನೂ ಈ ಬಗ್ಗೆ ಸಾಕಷ್ಟು ಭಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸೋದಕ್ಕೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಭಿರಡಿ ಗ್ರಾಮದಲ್ಲಿ ಇರೋ ಈ ಅಂಗನವಾಡಿ ಕೇಂದ್ರದಲ್ಲಿರೋ ಮಕ್ಕಳ ಹಾಗೂ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರ ಪರಿಸ್ಥಿತಿಯು ಯಮನ ನೆರಳಿನಲ್ಲಿ ದಿನ ದೂಡುತ್ತಿದ್ದಾರೆ.