ಪುಟಾಣಿಗಳ ಮೇಲೆ ಕುಸಿದ ಛಾವಡಿ: ಕಳಪೆ ಕಾಮಗಾರಿಯ ಅಂಗನವಾಡಿ

ಕಳಪೆ ಕಾಮಗಾರಿಯಿಂದಾಗಿ ಅಂಗನವಾಡಿ ಚಾವಣಿಯ ಪ್ಲಾಸ್ಟರಿಂಗ್‌ ಕುಸಿದು ಐವರು ಪುಟಾಣಿ ಮಕ್ಕಳು ಗಾಯಗೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ವಿಜಯಲಕ್ಷ್ಮಿ ಎಂಬ ಪುಟಾಣಿ ಬಾಲಕಿಯ ಕಾಲು ಮುರಿದಿದ್ದು  ದೀಪಾ ಹುಲ್ಲೂರ ಎಂಬ ಪುಟಾಣಿಯ ಬಾಲಕಿಯ ತಲೆಗೆ ತೀವ್ರ ಪಟ್ಟಾಗಿದೆ. ಇನ್ನೂ ಐದು ಪುಟಾಣಿಗಳಿಗೆ ಗಂಭೀರ ಗಾಯಗಳಾಗಿವೆ.

ಬಾಲೆಹೊಸೂರಿನ ವಾರ್ಡ್‌ ನಂ.2 ದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಈಘಟನೆ ಸಂಭವಿಸಿದ್ದು, ಈ ಸಂದರ್ಭದಲ್ಲಿ 18 ಚಿಕ್ಕ ಮಕ್ಕಳು ಅಂಗನವಾಡಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

2000ನೇ ಇಸ್ವಿಯಲ್ಲಿ ಈ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದ್ದು ಕಳೆದ 2 ವರ್ಷದ ಹಿಂದೆ ಒಮ್ಮೆ ಇದೇ ಕಟ್ಟಡದ ಇನ್ನೊಂದು ಕಡೆ ಚಾವಣಿಯ ಕೆಳ ಪದರ ಕುಸಿದಿತ್ತು. ಆಗ ಮಕ್ಕಳನ್ನು ಕೊಠಡಿಯ ಇನ್ನೊಂದು ಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಕಳಪೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗ,ನಕ್ಕೆ ತಂದಿದ್ದರೂ ಯಾರೂ ಇದರ ಬಗ್ಗೆ ಗಮನ ಹರಿಸಲಿಲ್ಲ ಎಂದು ದೂರಿದ್ದಾರೆ.