ಯಂಗ್ ಲುಕ್ ನಲ್ಲಿ ಅನಿಲ್ ಕಪೂರ್ : ವೈರಲ್ ಆದ ಮಿಲಾಂಗ್ ಪೋಟೋ

ಹಿರಿಯ ಬಾಲಿವುಡ್ ನಟ ಅನಿಲ್ ಕಪೂರ್ ಇತ್ತೀಚೆಗೆ ,ತಮ್ಮ ಮುಂಬರುವ ಚಿತ್ರದ ಬಗ್ಗೆ twitter ನಲ್ಲಿ ಹೇಳಿಕೊಂಡಿದ್ದಾರೆ.  ಸಹನಟರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಮಲಾಂಗ್ ಚಿತ್ರದ ತಮ್ಮ ಹೊಸ ಲುಕ್ ನ್ನು ರಿವೀಲ್ ಮಾಡಿದ್ದಾರೆ.

ಫೋಟೋದಲ್ಲಿ ದೀಶಾ ಪಟಾನಿ, ಆದಿತ್ಯ ರಾಯ್ ಕಪೂರ್ ಮತ್ತು ಕುನಾಲ್ ಖೆಮು ಮುಂತಾದ ಯುವ ನಟರೊಂದಿಗೆ ನಿಂತಿರುವ ಹೊರತಾಗಿಯೂ, 62 ವರ್ಷ ವಯಸ್ಸಿನ ಕಪೂರ್ ಅವರು ಯುವಕನಾಗುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ ಆಶ್ವರ್ಯವಿಲ್ಲ ಬಿಡಿ.. ಹಾಂಗಿದೆ ಎವರ್ ಹ್ಯಾಂಡಸಮ್ ಅನಿಲ್ ಕಪೂರ್ ಹೊಸ ಲುಕ್..

ನಿರ್ದೇಶಕ ಮೋಹಿತ್ ಸೂರಿ ಅವರ  ಚಿತ್ರ ‘ಮಲಾಂಗ್’  ಈಗಾಗಲೇ ಸೆಟ್ಟೇರಿದ್ದು 2020ರ ವ್ಯಾಲಂಟೈನ್ ಡೇಗೆ ಬಿಡುಗಡೆ ಮಾಡಲಿದ್ದಾರಂತೆ. ಹಾಗಾಗಿ ಈ ಚಿತ್ರಕ್ಕೆ ಸಂಬಂದಿಸಿದಂತೆ ಒಂದು ಗ್ರೂಪ್ ಫೋಟೋವನ್ನು ಟ್ವೀಟ್ ಮಾಡಿ ಯುವಕರ ಜೊತೆ ಆಕ್ಟಿಂಗ್ ಮಾಡುವಾಗ ನನಗೂ ಒಂದಿಷ್ಟು ಹೆಚ್ಚು ಜೋಶ್ ಬರುತ್ತೆ ಎಂದಿದ್ದಾರೆ.  ಇನ್ನು ಟ್ಟ್ವಿಟಗರು ಕೇಳಿರೋ  ದಿನೇ ದಿನೇ ಯಂಗ್ ಆಗಿ ಆಣ್ತಾ ಇರೋದರ ಹಿಂದಿನ ಗುಟ್ಟೇನು ಅನ್ನೋ ಪ್ರಶ್ನೆಗೆ Mr.India ಉತ್ತರಿಸಬೇಕಿದೆ ಅಷ್ಟೇ..