ಅಂಜನಾದ್ರಿ ದೇವಾಲಯ ಅರ್ಚಕರ ಸರಸ ಸಲ್ಲಾಪ ಬಹಿರಂಗ

ವಿಶ್ವ ಪ್ರಸಿದ್ಧ ಅಂಜನಾದ್ರಿ ಪರ್ವತ ದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಮಹಿಳೆಯೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸ್ವಾಮೀಜಿ ಬೆತ್ತಲೆಯಾಗಿರುವ ಪೋಟೋವೊಂದು ಬಹಿರಂಗವಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕೊಪ್ಪಳ ಜಿಲ್ಲೆಯ ಅಂಜಾನಾದ್ರಿ ಪರ್ವತ ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಲ್ಲಿಗೆ ದೇಶ-ವಿದೇಶದಿಂದ ಸಾವಿರಾರು ಭಕ್ತರು ಪ್ರತಿನಿತ್ಯ ಆಗಮಿಸುತ್ತಾರೆ. ಇಲ್ಲಿನ ಪ್ರಧಾನ ಅರ್ಚಕರಾಗಿರುವ ವಿದ್ಯಾದಾಸ್ ಬಾಬಾ ದೇವಾಲಯಕ್ಕೆ ಬರುವ ಭಕ್ತರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಬಾಬಾ ಭಕ್ತೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ಕೇಳಿ ಬಂದ ಹಿನ್ನೆಲೆಯಲ್ಲಿ ಅರ್ಚಕರ ವಿರುದ್ಧ ಕ್ರಮಕ್ಕೆ ದೇವಾಲಯದ ಆಡಳಿತ ಮಂಡಳಿ ಮುಂಧಾಗಿದೆ. ಈ ಹಿಂದೆ ಕೂಡಾ ಬಾಬಾ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಇದೀಗ ಅಂಜನಾದ್ರಿ ಪರ್ವತ ಚಾರಿಟೇಬಲ್ ರಿಲಿಜೀಯಿಸ್ ಟ್ರಸ್ಟ್​​ರವರು ಸಭೆ ಸೇರಿ ಅರ್ಚಕ ನಡಾವಳಿ ಖಂಡಿಸಿ,ಅವರನ್ನ ಕೆಳಗಿಳಿಸಿ ಬ್ರಾಹ್ಮಣ ಪಂಡಿತರೊಬ್ಬರನ್ನ ಅರ್ಚಕರನ್ನಾಗಿ ನೇಮಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಿದ್ದಾರೆ.