ವಿದೇಶದಲ್ಲಿ ಅಂಜನಿಪುತ್ರ- ಭರ್ಜರಿ ಹವಾ

ಇನ್ನೇನು ಕೆಲ ದಿನದಲ್ಲೇ ಸ್ಯಾಂಡಲವುಡ್​​​ ನಲ್ಲಿ ಸಾಕಷ್ಟು ಹೊಸಚಿತ್ರಗಳು ತೆರೆಗೆ ಬರಲಿದೆ. ಅದರಲ್ಲಿ ಪುನೀತ್ ರಾಜಕುಮಾರ್​ ಅಭಿನಯದ ಅಂಜನೀಪುತ್ರ ಕೂಡ ಒಂದು. ಕಿರಿಕ್​ ಬ್ಯೂಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಚಿತ್ರ ವಿದೇಶದಲ್ಲಿ ಚಿತ್ರೀಕರಣಗೊಂಡಿದೆ.
ಬಹುತೇಕ ಚಿತ್ರೀಕರಣ ಮುಗಿದಿದ್ದು, ತಿಂಗಳಾಂತ್ಯದಲ್ಲಿ ಚಿತ್ರ ಥಿಯೇಟರ್​ಗೆ ಬರಲಿದೆ. ಈ ಸಿನಿಮಾದ ಹಾಡು ಹಾಗೂ ಟ್ರೇಲರ್​ ಭರ್ಜರಿ ಸದ್ದು ಮಾಡಿದೆ. ಈ ಚಿತ್ರವನ್ನು ಎ.ಹರ್ಷಾ ನಿರ್ದೇಶಿಸಿದ್ದಾರೆ. ಹಲವು ಹಿರಿಯ ನಟರ ತಾರಾಗಣವಿದೆ.

ಸ್ಕಾಟಲ್ಯಾಂಡ್​ನಲ್ಲಿ ಚಿತ್ರದ ಹಾಡೊಂದರ ಚಿತ್ರೀಕರಣ ನಡೆದಿದ್ದು,  ಎಕ್ಸಕ್ಲೂಸಿವ್​ ಮೇಕಿಂಗ್ ದೃಶ್ಯಗಳು ಬಿಟಿವಿನ್ಯೂಸ್​ಗೆ ಲಭ್ಯವಾಗಿದೆ.  ವಿದೇಶದಲ್ಲಿ ನಡೆದ ಈ ಚಿತ್ರದ ಹಾಡಿನ ದೃಶ್ಯದಲ್ಲಿ ಪುನೀತ್​ ರಾಜಕುಮಾರ್ ಹಾಗೂ ರಶ್ಮಿಕಾ ಸಖತ್​ ಸ್ಟೆಪ್​ ಹಾಕಿ ಮನಸೆಳೆದಿದ್ದಾರೆ.  ಕಲರ್ ಫುಲ್​ ಲೊಕೇಶನ್​​ ಹಾಗೂ ಕ್ಯೂಟ್​ ಕಾಸ್ಟ್ಯೂಮ್​ನಲ್ಲಿ ಅಪ್ಪು-ರಶ್ಮಿಕಾ ಮಿಂಚಿದ್ದಾರೆ.