ಸ್ಯಾಂಡಲವುಡ್​​​ನಲ್ಲಿ ಮತ್ತೊಬ್ಬ ನಟನ ಬಾಡಿಗೆ ಕಿರಿಕ್​​​! ಮನೆ ಬಾಡಿಗೆ ಕಟ್ಟದೇ ಮಾಲೀಕನಿಗೆ ಧಮಕಿ ಹಾಕಿದ ಡೆಡ್ಲಿಸೋಮ ಖ್ಯಾತಿಯ ಆದಿತ್ಯ!!

ಸ್ಯಾಂಡಲ್​​​ವುಡ್​ನಲ್ಲಿ ಮತ್ತೊಬ್ಬ ನಟ ಬಾಡಿಗೆಗಾಗಿ ಕಿರಿಕ್​ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ಡೆಡ್ಲಿ ಸೋಮಾ ಖ್ಯಾತಿಯ ನಟ ಆದಿತ್ಯಾ ಬಾಡಿಗೆ ನೀಡದೇ ಮನೆ ಮಾಲೀಕರಿಗೆ ಅವಾಜ್ ಹಾಕಿ ರೌಡಿಸಂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ad

ಬೆಂಗಳೂರಿನ ಸದಾಶಿವನಗರದಲ್ಲಿರುವ ಬಾಡಿಗೆ ಮನೆಗೆ ಕಳೆದ ಏಳು ತಿಂಗಳಿನಿಂದ ಆದಿತ್ಯ ಬಾಡಿಗೆ ನೀಡಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ನಟ ಆದಿತ್ಯ ಮನೆ ಮಾಲೀಕರಿಗೆ ದೂರವಾಣಿ ಕರೆ ಮಾಡಿ ಬಾಯಿಗೆ ಬಂದಂತೆ ಬೈಯ್ದು ಅವಾಜ್ ಹಾಕಿ ಬೆದರಿಸಿದ್ದಾನೆ ಎನ್ನಲಾಗಿದೆ.
ಸದಾಶಿವನಗರದ ಪ್ರಸನ್ನ ಎಂಬುವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ನಟ ಆದಿತ್ಯ, ತನ್ನ ತಂದೆ ಬಾಬುರಾಜೇಂದ್ರಸಿಂಗ್ ಬಾಬು, ತಾಯಿ ಹಾಗೂ ತಂಗಿಯೊಂದಿಗೆ ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ ಎನ್ನಲಾಗಿದೆ. ಆದರೆ ಕಳೆದ 7 ತಿಂಗಳಿನಿಂದ ಆದಿತ್ಯ ಮನೆ ಬಾಡಿಗೆ ಕಟ್ಟಿಲ್ಲವಂತೆ.

ಇದರಿಂದ ಬೇಸತ್ತ ಮನೆ ಮಾಲೀಕ ಪ್ರಸನ್ನ, ಈಗಾಗಲೇ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಮನೆ ಖಾಲಿ ಮಾಡಿಸಿಕೊಡುವಂತೆ ಮಾಲೀಕ ಪ್ರಸನ್ನ ಸದಾಶಿವನಗರ ಪೊಲೀಸರ ಮೊರೆ ಹೋಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮನೆಯನ್ನು 40 ಸಾವಿರ ಬಾಡಿಗೆಗೆ ನೀಡಲಾಗಿದ್ದು, ಪ್ರಸ್ತುತ ಈ ದರವನ್ನು 48 ಸಾವಿರಕ್ಕೆ ಏರಿಸಲಾಗಿದೆ. ಆದರೆ ಕಳೆದ ಏಳು ತಿಂಗಳಿನಿಂದ ಬಾಡಿಗೆ ಹಣ ಬಾಕಿ ಇದ್ದು, ಸಧ್ಯ ಆದಿತ್ಯ ಮನೆ ಮಾಲೀಕರಿಗೆ 2 ಲಕ್ಷದ 88 ಸಾವಿರ ರೂಪಾಯಿ ಬಾಕಿ ಹಣ ನೀಡಬೇಕಾಗಿದೆ.

ಆ ಮೂಲಕ ಮತ್ತೊಬ್ಬ ಸ್ಯಾಂಡಲವುಡ್​ ನಟ ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿಕೊಂಡಂತಾಗಿದೆ. ಈ ಹಿಂದೆ ನಟ ಯಶ್​ ಕೂಡ ಬಾಡಿಗೆ ಮನೆ ಮಾಲೀಕರಿಗೆ ಬಾಡಿಗೆ ನೀಡದೇ ಹಾಗೂ ಮನೆ ಬಿಟ್ಟು ಕೊಡದೇ ಸತಾಯಿಸಿ ಸುದ್ದಿಯಾಗಿದ್ದರು.