ನಿರ್ಮಾಪಕಿಯಾಗುವ ಕನಸು ನನಸಾಗಿಸಿಕೊಂಡ ನಟಿ! ಸಿದ್ಧವಾಗಲಿರೋ ಮೊದಲ ಚಿತ್ರ ಯಾವುದು ಗೊತ್ತಾ?!

ಸ್ಯಾಂಡಲ್ ವುಡ್ ಸಿನಿ ರಂಗಕ್ಕೆ ಮತ್ತೊಬ್ಬ ನಟಿ ನಿರ್ಮಾಪಕಿಯಾಗಿ ಎಂಟ್ರಿ ಕೊಡಲಿದ್ದಾರೆ. ಸದ್ಯ ಕನ್ನಡದಲ್ಲಿ ಪಾರುಲ್ ಯಾದವ್, ನಟಿ ರಚಿತಾ ರಾಮ್ ಮತ್ತು ಶ್ರುತಿ ಹರಿಹರನ್ ಕಿರುಚಿತ್ರ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.

ad

ಕೇವಲ ನಟಿಯರಲ್ಲದೇ ನಟರ ಪತ್ನಿಯರಾದ ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತ ಪ್ರೇಮ್, ನಟ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪ, ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಹಲವು ನಟರ ಪತ್ನಿಯರು ಸಹ ಈಗಾಗಲೇ ಸ್ವಂತ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸಿದ್ದಾರೆ. ಸದ್ಯ ಈ ಗುಂಪಿಗೆ ಮತ್ತೊಬ್ಬ ನಟನ ಪತ್ನಿ ಹೊಸ ಸೇರ್ಪಡೆಯಾಗಿದ್ದಾರೆ.

 

ಹೌದು ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನ ರಾಜ್ ಈಗ ನಾಯಕಿಯಿಂದ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವುದು ಮೇಘನರಾಜ್ ರ ಬಹುದೊಡ್ಡ ಕನಸಾಗಿತ್ತು, ಸದ್ಯ ಅವರ ಕನಸನ್ನು ನನಸು ಮಾಡಿಕೊಳ್ಳುವ ಸಮಯ ಈಗ ಒದಗಿಬಂದಿದೆ. ‘ಮೇಘನಾ ಸಿನಿಮಾಸ್’ ಎನ್ನುವ ಹೊಸ ಪ್ರೊಡಕ್ಷನ್ ಸಂಸ್ಥೆ ಪ್ರಾರಂಭಿಸಿರುವ ಮೇಘನಾ ಈಗ ಮೊದಲ ಸಿನಿಮಾ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮೇಘನ ರಾಜ್ ಚಿಕ್ಕ ವಯಸ್ಸಿನಿಂದ ಅರ್ಜುನ್ ಸರ್ಜಾ ಸಿನಿಮಾ ಸೇರಿದಂತೆ ಅನೇಕ ಮಕ್ಕಳ ಸಿನಿಮಾ ನೋಡಿ ಬೆಳೆದವರಂತೆ. ಹಾಗೇ ತಾವು ಸಹ ಚಿತ್ರರಂಗದಲ್ಲಿ ಮೊದಲ ಬಾರಿಗೆ ‘ಕರಡಿಪುರ’ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ಹೀಗಾಗಿ ಸಿನಿಮಾ ನಿರ್ಮಾಣ ಮಾಡಿದರೆ ಮೊದಲು ಮಕ್ಕಳ ಸಿನಿಮಾವನ್ನೆ ಮಾಡಬೇಕು ಎನ್ನುವುದು ಮೇಘನರ ಮೊದಲ ಆಸೆ. ಹಾಗಾಗಿ ತನ್ನ ಬ್ಯಾನರ್ ಅಡಿಯಲ್ಲಿಯೇ ‘ಪುಟಾಣಿ ಪಂಟರ್ಸ್’ ಎನ್ನುವ ಮಕ್ಕಳ ಸಿನಿಮಾಗೆ ಮೇಘನಾ ಬಂಡವಾಳ ಹೂಡಲು ಮುಂದಾಗಿದ್ದಾರೆ.

ಸದ್ಯ ‘ಪುಟಾನಿ ಪಂಟರ್ಸ್’ ಮಕ್ಕಳ ಸಿನಿಮಾಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ನಟ ಮತ್ತು ಮಜಾ ಟಾಕೀಸ್ ಮೂಲಕ ಖ್ಯಾತಿಗಿಸಿರುವ ಪವನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಪವನ್ ರವರು ನಿರ್ದೇಶಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿರುವ ಮೊದಲ ಚಿತ್ರವಾಗಿದೆ. ಚಿತ್ರದಲ್ಲಿ ಪ್ರಮಿಳಾ ಜೋಷಾಯ್, ಸುಂದರ್ ರಾಜ್, ‘ಸ್ಪರ್ಶ’ ರೇಖಾ, ರಮೇಶ್ ಪಂಡಿತ್ ಸೇರಿದಂತೆ ಅನೇಕ ಫೋಷಕ ನಟರು ಇರಲಿದ್ದಾರಂತೆ. ವಿಶೇಷ ಅಂದ್ರೆ ಮೂವರು ಸ್ಲಮ್ ಮಕ್ಕಳು ಕೂಡ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ನಟಿ ಮೇಘನ ರಾಜ್ ಇಲ್ಲಿಯವರೆಗೂ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಾಯಕಿಯಾಗಿ ಮಿಂಚುತ್ತಿರುವ ಮೇಘನಾ ಬಹುಪಾರಾಕ್ ಹಾಗೂ ‘ಜಿಂದಾ’ ಚಿತ್ರದ ಹಾಡನ್ನು ಹಾಡುವ ಮೂಲಕ ಗಾಯಕಿಯೂ ಆಗಿದ್ದಾರೆ. ಇತ್ತೀಚಿಗಷ್ಟೆ ಪತಿ ಚಿರಂಜೀವಿ ಸರ್ಜಾ ಅಭಿನಯದ ‘ಸಿಂಗ’ ಚಿತ್ರಕ್ಕೂ ದ್ವನಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ನಟ ತಿಲಕ್ ಗೆ ನಾಯಕಿಯಾಗಿ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅಭಿಮಾನಿಗಳ ಮುಂದೆ ಪುನಃ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಮೇಘನಾ ಸಖತ್ ಸ್ಟೈಲಿಶ್ ಐಟಿ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಕಾಮಿಡಿ ಕಥಾಹಂದರವನ್ನು ಹೊಂದಿದ್ದು ಸಿನಿಮಾದ ಚಿತ್ರೀಕರಣ ಇದೆ ತಿಂಗಳ 26ರಿಂದ ಪ್ರಾರಂಭವಾಗಲಿದೆ.