ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಮದುವೆ !! ಹುಡುಗಿ ಹುಡುಕುತಿದ್ದಾರೆ ಮಾಜಿ ಶಾಸಕ !!

 

ad 

ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯಗೆ ಮತ್ತೊಂದು ಮದುವೆ ಮಾಡಿಸಲು ಮಾಜಿ ಶಾಸಕ ಚಿಮ್ಮನಕಟ್ಟಿ ನಿರ್ಧರಿಸಿದ್ದಾರೆ.ಹೌದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ಮದುವೆ ಮಾಡೋ ಅಲೋಚನೆಯ ಬಗ್ಗೆ ಖುದ್ದು ಮಾಜಿ ಶಾಸಕ ಚಿಮ್ಮನಕಟ್ಟಿ ಬಹಿರಂಗವಾಗಿ ಹೇಳಿದ್ದಾರೆ.

ಇಂದು ಬದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಭಾಗಿಯಾಗಿದ್ದರು. ಸಿದ್ದರಾಮಯ್ಯ ವೇದಿಕೆಯಲ್ಲಿ ಇರುತ್ತಲೇ ಮಾಜಿ ಶಾಸಕ ಚಿಮ್ಮನಕಟ್ಟಿ ಭಾಷಣ ಮಾಡುತ್ತಿದ್ದರು. ಭಾಷಣದ ಮಧ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಚುರುಕುತನ, ಉತ್ಸಾಹದ ಬಗ್ಗೆ ಮಾತನಾಡುತ್ತಿದ್ದರು. “ಸಿದ್ದರಾಮಯ್ಯಗೆ 80 ವರ್ಷವಾಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಅವರ ಉತ್ಸಾಹ, ಹುರುಪು ನೋಡಿದ್ರೆ ಅವರಿಗೆ 21 ರ ಹರೆಯವೇನೋ ಅನ್ನಿಸ್ತಿದೆ. ಸಿದ್ದರಾಮಯ್ಯರವರಿಗೆ ಇನ್ನೊಂದು ಮದುವೆ ಮಾಡಿಸಬೇಕು ಎಂದು ನನಗನ್ನಿಸ್ತಿದೆ” ಎಂದು ಹಾಸ್ಯ ಚಟಾಕಿ ಹಾರಿಸಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಾವಿರಾರು ಜನ ಚಿಮ್ಮನಕಟ್ಟಿಯವರ ಹಾಸ್ಯಕ್ಕೆ ನಕ್ಕ ಪ್ರಸಂಗ ನಡೆಯಿತು.