ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ರೋಮ್ಯಾಂಟಿಕ್ ಸಾಂಗ್ ರೀವೀಲ್ !! ಲಿಲ್ಲಿ ಮತ್ತು ಬಾಬಿಯ ಪ್ರೇಮ ಪ್ರಸಂಗವಿದು !!

ಟಾಲಿವುಡ್ ನ ಹ್ಯಾಂಡ್ಸಮ್ ಹೀರೊ ವಿಜಯ್ ದೇವರಕೊಂಡ ಹಾಗೂ ಕರ್ನಾಟಕದ ಕ್ರಶ್ ಎಂದೇ ಖ್ಯಾತಿ ಹೊಂದಿರುವ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೇಡ್’ ಚಿತ್ರದ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿದೆ.

ad

 

ಈ ಹಿಂದೆ ಗೀತಾ ಗೋವಿಂದಂ ಚಿತ್ರದ ಮೂಲಕ ಮೋಡಿ ಮಾಡಿದ್ದ ಇವರಿಬ್ಬರ ಜೋಡಿ ಟಾಲಿವುಡ್ ಸಿನಿ ಪ್ರಿಯರ ಮನಗೆದ್ದು ಚಿತ್ರ ಬಾರಿ ಯಶಸ್ಸನ್ನು ಕಂಡಿತ್ತು. ಇದೀಗ ಈ ಕ್ಯೂಟ್ ಪೇರ್ ಕಾಂಬಿನೇಷನ್ ನ ‘ಡಿಯರ್ ಕಾಮ್ರೇಡ್’ ಚಿತ್ರ ಮೂಡಿಬರುತ್ತಿದ್ದು, ಚಿತ್ರದ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ನನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

‘ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು’ ಅನ್ನೋ ಲಿರಿಕ್ಸ್​ನಿಂದ ಶುರುವಾಗುವ ಈ ಹಾಡಿನ ಲಿರಿಕ್ಸ್ ನನ್ನು ಧನಂಜಯ್ ರಂಜನ್​ ಬರೆದಿದ್ದು, ಸಿದ್​ ಶ್ರೀರಾಮ್ ಹಾಗೂ ಐಶ್ವರ್ಯ ರವಿಚಂದ್ರನ್ ಹಾಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಭರತ್ ಕಾಮಾ ನಿರ್ದೇಶಿಸಿದ್ದಾರೆ. ಇದೊಂದು ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.

ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ಬಾಬಿ ಎಂಬ ಪಾತ್ರದಾರಿಯಾಗಿ ನಟಿಸುತ್ತಿದ್ದು, ರಶ್ಮಿಕ ಮಂದಣ್ಣ ಲಿಲ್ಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟೀಸರ್​​ನಲ್ಲಿಯೆ ಕುತೂಹಲ ಕೆರಳಿಸಿರುವ ಈ ಚಿತ್ರವು ಜುಲೈ ತಿಂಗಳ 26 ರಂದು ವರ್ಲ್ಡ್​​​​ ವೈಡ್​ ರಿಲೀಸ್ ಆಗಲಿದೆ.