ಕಿರಿಕ್​ ನಟಿಯ ಮತ್ತೊಂದು ಅವಾಂತರ ​​- ಸಹಸ್ಪರ್ಧಿ ಸಮೀರ್ ಕಪಾಳಮೋಕ್ಷ ಮಾಡಿ ಬಿಗ್​ ಬಾಸ್​ನಿಂದ ಹೊರಬಿದ್ದ ಸಂಯುಕ್ತಾ ಹೆಗಡೆ

ಕನ್ನಡದ ಬಹುಚರ್ಚಿತ ರಿಯಾಲಿಟಿ ಶೋ ಬಿಗ್​ಬಾಸ್​​ ಮತ್ತೊಮ್ಮೆ ಸುದ್ದಿಯಲ್ಲಿದೆ. ಸ್ಯಾಂಡಲವುಡ್​​​​ ಕಿರಿಕ್​ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಸಹಸ್ಪರ್ಧಿ ಸಮೀರ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದು, ಬಿಗ್​ ಬಾಸ್​​ ಶೋನಿಂದ ಹೊರಬಿದ್ದಿದ್ದಾರೆ. ವೈಲ್ಡ್​​ ಕಾರ್ಡ್​​ ಎಂಟ್ರಿ ಮೂಲಕ ಬಿಗ್​ಬಾಸ್​ ಮನೆ ಪ್ರವೇಶಿಸಿದ್ದ ಸಂಯುಕ್ತಾ ಹೆಗಡೆ ಟಾಸ್ಕ್​ವೊಂದರ ಗಲಾಟೆ ವೇಳೆ ಸಮೀರ್ ಕಪಾಳ ಹಾಗೂ ತಲೆಗೆ ಬಾರಿಸಿ ಸುದ್ದಿಯಾಗಿದ್ದಾಳೆ.

adಮಂಗಳವಾರದ ಟಾಸ್ಕ್​ ವೇಳೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರ ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಸ್ಪರ್ಧಿಗಳ ಬಳಿ ಇರುವ ಗೋಪುರದ ದಾರವನ್ನು ಪುರುಷ ಸ್ಪರ್ಧಿಗಳು ಕತ್ತರಿಸಬೇಕಿತ್ತು. ಈ ವೇಳೆ ಸಮೀರ್ ಆಚಾರ್ಯ ನನ್ನನ್ನು ತಪ್ಪಾಗಿ ಮುಟ್ಟಿದ್ದು ಎಂದು ಆರೋಪಿಸಿ ಸಂಯುಕ್ತ ಹಲ್ಲೆ ಮಾಡಿದ್ದಾಳೆ. ಸಂಯುಕ್ತ ಹೆಗಡೆ ಹಲ್ಲೆ ಮಾಡಿದ್ದರಿಂದ ಬಿಗ್​ಬಾಸ್​​ನ ಈ ಟಾಸ್ಕ್​ನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಸಮೀರ್ ಆಚಾರ್ಯ ಹಾಗೂ ಸಂಯುಕ್ತಾ ಹೆಗಡೆಯನ್ನು ಕನಫೇಶನ್​ ರೂಂಗೆ ಕರೆದ ಬಿಗ್​ಬಾಸ್​​ ಇಬ್ಬರ ಹೇಳಿಕೆಯನ್ನು ಪಡೆದಿದ್ದಾರೆ. ಅಲ್ಲದೇ ಬಿಗ್​ಬಾಸ್​ ನಿಯಮದಂತೆ ಸಂಯಕ್ತಾರನ್ನು ಬಿಗ್ಬಾಸ್​​ ಮನೆಯಿಂದ ಹೊರಹಾಕಲಾಗಿದೆ.

 

 

 ಇನ್ನು ಸಂಯುಕ್ತ ಈ ವರ್ತನೆಗೆ ಸಮೀರ್​ ಪತ್ನಿ ಶ್ರಾವಣಿ, ಆಕೆಯ ಕುಟುಂಬಸ್ಥರು ಸೇರಿದಂತೆ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮಾಡಿದ ಒಂದೇ ಚಿತ್ರದಲ್ಲಿ ಸಾಕಷ್ಟು ಕಾಂಟ್ರಾವರ್ಸಿ ಮಾಡಿಕೊಂಡಿರುವ ಸಂಯುಕ್ತಾ ಹೆಗಡೆ ಬಿಗ್​ಬಾಸ್​ನಲ್ಲಿ ವರ್ತಿಸಿದ ರೀತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂಟಿ ಮನೆಯಲ್ಲಿ ಇದೇ ಮೊದಲ ಬಾರಿಗಲ್ಲ. ಈ ಹಿಂದೆ ಕೂಡ ಸಾಕಷ್ಟು ಭಾರಿ ಈ ರೀತಿಯ ಘಟನೆಗಳು ನಡೆದಿದ್ದು, ಮೂರನೇ ಆವೃತ್ತಿಯಲ್ಲಿ ಹುಚ್ಚಾ ವೆಂಕಟ್​ ಸಹ ಸ್ಪರ್ಧಿ ರವಿ ಮುರೂರು ಮೇಲೆ ಹಲ್ಲೆ ಮಾಡಿದ್ರು. ನಾಲ್ಕನೇ ಆವೃತ್ತಿಯಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದ ವೆಂಕಟ್​ ಒಳ್ಳೆ ಹುಡುಗ ಪ್ರಥಮ್​​ ಮೇಲೂ ಕೈಮಾಡಿ ವಿವಾದ ಮಾಡ್ಕೊಂಡಿದ್ರು.