ಅಪಘಾನಿಸ್ತಾನ ಯುವಕ, ಅರ್ಜಂಟೈನಾ ಯುವತಿ!! ನಮ್ಮ ರಾಜ್ಯದಲ್ಲೇ ನಡೆದ ಅಪೂರೂಪದಲ್ಲಿ ಅಪರೂಪದ ಪ್ರೇಮ್ ಕಹಾನಿ.!! ಏನೇನಾಯ್ತು?

ಅರ್ಜೆಂಟಿನಾ ದೇಶದ ಯವತಿ ಹಾಗೂ ಅಫ್ಘಾನಿಸ್ತಾನ ದೇಶದ ಯುವತಿಯ ಲವ್ ಆಂಡ್ ಮ್ಯಾರೇಜ್ ಕಲಬುರಗಿ ನಗರದಲ್ಲಿ ಬ್ರೇಕಪ್ ಆದಂತಹ ಅಪರೂಪದ ಘಟನೆ ನಡೆದಿದೆ.. ಅರ್ಜೆಂಟಿನಾದ ಯವತಿ ಡೇನಿಯಲ್ ಹಾಗೂ ಅಫ್ಘಾನಿಸ್ತಾನ ದೇಶದ ಯುವಕ ಅಹ್ಮದ್ ಜರೀಫ್ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದೆ.. ಹೀಗೆ ಪರಿಚಯವಾದ ನಂತರ ಪರಸ್ಪರ ಇಬ್ಬರು ಸ್ನೇಹ ಬೆಳೆಸಿದ್ದು, ಸ್ನೇಹವೂ ಪ್ರೀತಿಗೆ ತಿರುಗಿದೆ.. ಹಲವು ದಿನಗಳ ಕಾಲ ಚಾಟಿಂಗ್ ಮತ್ತು ವಿಡಿಯೋ ಕಾಲಿಂಗ್ ಮಾಡುವ ಮೂಲಕ ಪ್ರೀತಿ ಮಾಡಿದ್ದಾರೆ.  ನಂತರ ಒಪ್ಪಿಗೆ ಮೇರೆಗೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದು, ಮುಂದಿನ ಜೀವನಕ್ಕಾಗಿ ಭಾರತ ದೇಶವನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ad


ನಂತರ ಇಬ್ಬರು ತಮ್ಮ ತಮ್ಮ ದೇಶಗಳಲ್ಲಿ ಭಾರತಕ್ಕೆ ಹೋಗುವ ವೀಸಾ ಮಾಡಿಸಿಕೊಂಡು ದೆಹಲಿಗೆ ಬಂದು ಭೇಟಿಯಾಗಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದಾರೆ.. ಮದುವೆಯಾದ ನಂತರ ಭಾರತದ ವಿವಿಧೆಡೆ ಸುತ್ತಾಡಿ ಕರ್ನಾಟಕಕ್ಕೆ ಬಂದು ಐದು ದಿನಗಳ ಹಿಂದೆ ಕಲಬುರಗಿ ನಗರಕ್ಕೆ ಬಂದು ಹಾಗರಗಾ ರಸ್ತೆಯ ಮೆಕ್ಕಾ ಕಾಲೋನಿಯಲ್ಲಿ ಮನೆ ಮಾಡಿಕೊಂಡು ವಾಸ ಮಾಡಿದ್ದಾರೆ. ಯುವಕ ಅಹ್ಮದ್ ಜರೀಫ್ ಕುರಾನ್ ಕುರಿತು ಮಕ್ಕಳಿಗೆ ಟ್ಯೂಷನ್ ಹೇಳುವ ಕಲೆಸದಲ್ಲಿ ತೊಡಗಿಸಿಕೊಂಡಿದ್ದಾನೆ. ಆದರೆ ಹೀಗೆ ಇಬ್ಬರು ಅನ್ಯೊನ್ಯವಾಗಿ ಜೀವನ ನಡೆಸುತ್ತಿರುವಾಗಲೇ, ಅಹ್ಮದ್ ಜರೀಫ್ ತನ್ನ ಪತ್ನಿ ಡೇನಿಯಲ್ ಮೇಲೆ ಧಾರ್ಮಿಕ ಆಚರಣೆ ಆಚರಿಸುವ ಕುರಿತು ಒತ್ತಡ ಹೇರಲು ಶುರು ಮಾಡಿದ್ದಾನೆ..

 

ನನ್ನ ಜೊತೆ ನೀನು ನಮಾಜ್ ಪಠಣ ಮಾಡಬೇಕು, ಕುರಾನ್ ಓದಬೇಕು ಅಂತಾ ದಿನನಿತ್ಯ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ನಾನ್ಯಾಕೆ ನಮಾಜ್ ಮಾಡಲಿ, ನನ್ನ ತಾಯಿ ಮುಸ್ಲಿಂ ಇದಾಳೆ, ಆದರೆ ನಾನು ಮುಸ್ಲಿಂ ಅಲ್ಲ ಅಂತಾ ಆಕೆ ಒಪ್ಪಿಗೆ ಸೂಚಿಸದ ಹಿನ್ನಲೆಯಲ್ಲಿ ಮತ್ತಷ್ಟು ಕಿರುಕುಳ ಕೊಡಲು ಶುರು ಮಾಡಿದ, ಆಕೆ ಮುಂಬೈನಲ್ಲಿರುವ ಅರ್ಜೆಂಟಿನಾದ ರಾಯಭಾರಿ ಕಚೇರಿಗೆ ದೂರು ನೀಡಿದ್ದಾಳೆ. ತಕ್ಷಣವೇ ಅಲ್ಲಿನ ಅಧಿಕಾರಿ ಕಲಬುರಗಿ ನಗರದ ಎಸ್ಪಿ ಕಚೇರಿಗೆ ಬಂದು ವಿಚಾರಿಸಿ, ಆಕೆಯನ್ನ ಕಚೇರಿಗೆ ಕರೆಯಿಸಿಕೊಂಡು ಕೌನ್ಸಿಲಿಂಗ್ ನಡೆಸಿ, ನಂತರ ಮನವೊಲಿಸಿ ಯುವತಿ ಡೇನಿಯಲ್​ಳನ್ನ ಅರ್ಜೆಂಟಿನಾ ದೇಶಕ್ಕೆ ಸೇಫ್ ಆಗಿ ವಾಪಾಸ್ ಕಳುಹಿಸಿಕೊಟ್ಟಿದ್ದಾರೆ.. ಸಧ್ಯ ಪ್ರಕರಣ ಸುಖಾಂತ್ಯಗೊಂಡಿದ್ದು, ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..