ದಡ್ಡನಾಗಿದ್ದಕ್ಕೆ ಮುಖ್ಯಮಂತ್ರಿಯಾದೆ !! ಸಿಎಂ ಆಗಿ ಎಷ್ಟು ದಿನ ಇರ್ತೀನೊ ಗೊತ್ತಿಲ್ಲ ಅಂದ್ರು ಎಚ್ ಡಿ ಕುಮಾರಸ್ವಾಮಿ !!

 

ನನಗೆ ಓದು ತಲೆಗೆ ಹತ್ತುತ್ತಿರಲಿಲ್ಲ. ಸರಿಯಾಗಿ ಓದಿದ್ದರೆ ನಾನು ಸರಕಾರಿ ಉದ್ಯೋಗಿ ಆಗಿರುತ್ತಿದ್ದೆ. ಆದರೆ ನಾನು ಓದದೇ ಮುಖ್ಯಮಂತ್ರಿಯಾದೆ. ಓದಿಗೆ ಆಸಕ್ತಿ ವಹಿಸದೇ ಇದ್ದಿದ್ದು ಒಳ್ಳೆಯದೇ ಆಯ್ತೇನೋ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಓದಿದ ನ್ಯಾಶನಲ್ ಕಾಲೇಜಿನ ಕಾರ್ಯಕ್ರಮದಲ್ಲಿ ಹೀಗಂತ ಎಚ್ ಡಿಕೆ ಮಾತನಾಡಿದ್ದಾರೆ.ಇಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಎಚ್ ಡಿ ಕುಮಾರಸ್ವಾಮಿ, ಕಾಲೇಜಿನ ಹಳೆಯ ದಿನಗಳನ್ನು ನೆನಪಿಸಿಕೊಂಡರು.”ಜಯನಗರ ನ್ಯಾಷನಲ್ ಕಾಲೇಜ್ ನ ವಿದ್ಯಾರ್ಥಿ ಅನ್ನೋಕೆ ಹೆಮ್ಮೆ ಆಗುತ್ತೆ. ಆಗೆಲ್ಲಾ ಓದಲೇಬೇಕು ಅನ್ನೋದು ನಮಗೆ ಇರಲಿಲ್ಲ. ಓದೋದ್ರಲ್ಲಿ ನಾನು ತುಂಬಾ ವೀಕ್ ಆಗಿದ್ದೆ. ಎಲ್ಲಿ ಪ್ರಶ್ನೆ ಕೇಳಿಬಿಡ್ತರೋ ಅಂತಾ ಹಿಂದಿನ ಬೆಂಜ್ ನಲ್ಲಿ ಕುಳಿತುಕೊಳ್ತಿದ್ದೆ. ನಮ್ಮ ತಂದೆ ಹೇಳ್ತಿದ್ರು, ನೀನು ಉದ್ಧಾರ ಆಗೋಲ್ಲ ಹೋಗು ಅಂತಿದ್ರು” ಎಂದು ಎಚ್ಡಿಕೆ ಹೇಳಿದ್ದಾರೆ.

 

“ನಾನು ಎಷ್ಟು ದಿನ ಸಿಎಂ ಆಗಿರ್ತಿನೋ ನನಗೆ ಇಲ್ವೋ. ಆದ್ರೆ ಈ ಸಮ್ಮಿಶ್ರ ಸರ್ಕಾರ ಹೇಗೆ ನಡೆಸಬೇಕು ಅನ್ನೋದು ನನಗೆ ಚನ್ನಾಗಿ ಗೊತ್ತಿದೆ. ವಿನಾಕಾರಣ ದುಡ್ಡು ಖರ್ಚು ಮಾಡೋದನ್ನು ನಾನು ಕಡಿಮೆ ಮಾಡ್ತೀನಿ. ಯಾವುದೇ ಕಾರ್ಯಕ್ರಮಕ್ಕೂ, ವಿಶೇಷ ವಿಮಾನ ಬಳಸಲ್ಲ. ಯಾವುದೇ ಮಂತ್ರಿಯ ಮನೆಯ ರಿಪೇರಿ 5 ಲಕ್ಷಕ್ಕಿಂತ ಕಡಿಮೆ ಹಣ ನೀಡುವಂತೆ ಸೂಚಿಸಿದ್ದೇನೆ. ಯಾವುದೇ ಹೊಸ ಕಾರು ಖರೀದಿಗೂ ಬ್ರೇಕ್ ಹಾಕಿದ್ದೀನಿ. ಸ್ವತಃ ನಾನು ಸ್ವಂತ ಕಾರಿನಲ್ಲಿ ಓಡಾಡ್ತಿದ್ದೀನಿ. ಶಾಸಕರ ಭವನದಲ್ಲಿ 20 ಹೊಸ ಕಾರುಗಳು ನಿಂತಿವೆ, ಅನ್ನೋ ಮಾಹಿತಿ ಬಂತು, ಅದು ಕಳೆದ ಸರ್ಕಾದಲ್ಲಿ ಅಲಾಟ್ ಮಾಡಿರುವ ಕಾರುಗಳು. 65 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೆ 6 ಸಾವಿರ ಹಣ ಕೊಡ್ತೀನಿ ಅಂತಾ ಹೇಳಿದ್ದೀನಿ ಕೊಟ್ಟೆ ಕೊಡ್ತೀನಿ .ನನ್ನ ಎಲ್ಲಾ ಆಶ್ವಾಸನೆಗಳನ್ನು ಜಾರಿಗೆ ತಂದೇ ತರ್ತಿನಿ. ಯಾರಿಗೂ ಆತಂಕ ಬೇಡ” ಎಂದರು.”ಬಡವರ, ಸಾಮಾನ್ಯ ವರ್ಗದ ಜನರ ಕಷ್ಟ ಗೊತ್ತಿದೆ. ರಸ್ತೆ ಬದಿ ವ್ಯಾಪಾರಿಗಳಿಗೆ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಗೆ ಚಿಂತಿಸಲಾಗಿದೆ. ಮೀಟರ್ ಬಡ್ಡಿ ವ್ಯವಹಾರಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕಿದೆ. ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ರೆ ,ಇಡೀ ದೇಶದಲ್ಲೇ ರಾಜ್ಯವನ್ನು ನಂಬರ್ ಒನ್ ರಾಜ್ಯ ಮಾಡ್ತೀನಿ” ಎಂದರು.”37 ಸೀಟ್ ಪಡೆದು ಮುಖ್ಯಮಂತ್ರಿಯಾಗಿದ್ದೇನೆ. ನಾನು ಅದೃಷ್ಟವಂತ ಅಲ್ಲದೇ ಮತ್ತೆನೋ? ನಾನು ಕಾಲೇಜಿನಲ್ಲಿ ಸರಿಯಾಗಿ ಓದುತ್ತಿರಲಿಲ್ಲ. ಸರಿಯಾಗಿ ಓದಿದ್ರೆ, ಒಂದು ಸರ್ಕಾರಿ ಕೆಲಸಕ್ಕೆ ಸೇರಿಕೊಂಡುಬಿಡ್ತಿದ್ದೆ. ಈಗ ಮುಖ್ಯ ಮಂತ್ರಿಯಾಗಿದ್ದೇನೆ. ನಾನು ಸರಿಯಾಗಿ ಓದದೇ ಇದ್ದಿದ್ದೇ, ನನಗೆ ಒಳ್ಳೆಯದಾಯ್ತು ಅನ್ಸುತ್ತೆ” ಎಂದು ಕುಮಾರಸ್ವಾಮಿ ಹೇಳಿದರು.