ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆಶಿಕಾ! ‘ಬೋಲ್ಡ್’ ಫೋಟೋಶೂಟ್ ನಲ್ಲಿ ಮಿಂಚಿದ ಚೆಲುವೆ!!

ಸ್ಯಾಂಡಲ್ ವುಡ್ ನಟಿಮಣಿಯರು ಫೋಟೋ ಶೂಟ್ ಮಾಡಿಸುವುದು ಕಾಮನ್​​​ . ಹೊಸ ಸಿನಿಮಾಗಾಗಿ ಅಥವಾ ಹೊಸ ಲುಕ್ ನಲ್ಲಿ ಹೇಗೆ ಕಾಣುತ್ತಾರೆ ಎಂದು ನೋಡಲು ನಟಿಯರು ಫೋಟೋ ಶೂಟ್ ಮೊರೆ ಹೋಗುತ್ತಾರೆ. ಆದೇ ಲಿಸ್ಟ್ ಗೆ ಈಗ ಚೆಂದುಳಿ-ಚಲುವೆ ಆಶಿಕಾ ರಂಗನಾಥ್ ಸಹ  ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

ad

ಹೌದು ಸ್ಟೈಲಿಶ್ ಉಡುಗೆಯ ಜೊತೆಗೆ ಸಾಂಪ್ರದಾಯಿಕ ಉಡುಗೆಗಳಲ್ಲಿ ಅವರ ಫೋಟೋ ಶೂಟ್ ನೋಡಬಹುದಾಗಿದೆ. ಆದರೆ, ಅವರ ಇತ್ತೀಚಿಗಿನ ಒಂದು ಫೋಟೋ ಶೂಟ್ ಅಭಿಮಾನಿಗಳ ‘ಹಾಟ್’ ಫೇವರೇಟ್ ಆಗಿದೆ.ಇಷ್ಟು ದಿನ ಮುದ್ದು ಮುದ್ದಾಗಿ ಕ್ಯೂಟ್ ಲುಕ್ ನಲ್ಲಿ ಕಾಣುತ್ತಿದ್ದ ಆಶಿಕಾ ಈ ಫೋಟೋದಲ್ಲಿ ಕೊಂಚ ಬೋಲ್ಡ್ ಮತ್ತು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ

 

ಆಶಿಕಾ ರಂಗನಾಥ್ ಸಿನಿಮಾಗಳಲ್ಲಿ ಹೆಚ್ಚು ಕ್ಯೂಟ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹಾಟ್, ಗ್ಲಾಮರ್ ಈ ರೀತಿಯ ಪಾತ್ರಗಳಲ್ಲಿ ಆಶಿಕಾ ಇನ್ನು ಅಭಿನಯಿಸಿಲ್ಲ. ಈ ಹಿಂದೆ ಯಾವ ಫೋಟೋ ಶೂಟ್ ನಲ್ಲಿಯೂ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿರಲಿಲ್ಲ ಹಾಗಾಗಿ ಈ ಹೊಸ ಫೋಟೋ ಮೇಲೆ ಎಲ್ಲರ ಕಣ್ಣಿ ಬಿದ್ದಿದೆ.