ತಡರಾತ್ರಿ ಅಟೋ ಚಾಲಕನಾದ ನವರಸನಾಯಕ ಜಗ್ಗೇಶ್​! ಅಟೋ ಓಡಿಸುವಂತಹದ್ದೇನಾಯ್ತು? ಇಲ್ಲಿದೆ ಡಿಟೇಲ್ಸ್ !!

ನವರಸ ನಾಯಕ ಜಗ್ಗೇಶ್​ ತಮ್ಮ ನಟನೆಯಷ್ಟೇ ನಿಜ ಬದುಕಿನಲ್ಲೂ ಪ್ರಯೋಗಶೀಲರು. ಸದಾಒಂದಿಲ್ಲೊಂದು ಹೊಸ ಹೊಸ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆ ಮೊಮ್ಮಗನ ಜೊತೆ ಬುಲೆಟ್​ ಸವಾರಿ ನಡೆಸಿದ್ದ ನಟ ಜಗ್ಗೇಶ್​, ನಿನ್ನೆ ತಡರಾತ್ರಿ ತಮ್ಮ ಇನ್ನೊಂದು ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅದೇನೂ ಅಂದ್ರಾ ನಿನ್ನೆ ತಡರಾತ್ರಿ ಜಗ್ಗೇಶ್​ ಅಟೋ ಚಾಲಕರಾಗಿ ರಸ್ತೆಗಿಳಿದಿದ್ದರು.

ad

ಹೌದು ಚಿಕ್ಕಂದಿನಿಂದಲೂ ಜಗ್ಗೇಶ್​ ಅವರಿಗೆ ಅಟೋ ಓಡಿಸಬೇಕೆಂಬ ಆಸೆ ಇತ್ತಂತೆ. ನಿನ್ನೆ ಜಗ್ಗೇಶ್, ಚಿಕ್ಕವಯಸ್ಸಿನ ಆಸೆಯನ್ನ ಈಡೇರಿಸಿಕೊಂಡಿದ್ದಾರೆ. ತಮ್ಮ ಅಟೋ ಓಡಿಸಿದ ಅನುಭವವನ್ನು ಪೇಸ್​ಬುಕ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಗ್ಗೇಶ್, ತಂದೆ ತಮಗೆ ಚಿಕ್ಕವಯಸ್ಸಿನಲ್ಲಿ ಹಾಕಿದ ಸವಾಲನ್ನು ನೆನಪಿಸಿಕೊಂಡಿದ್ದಾರೆ.


“ಇಂದು ರಾತ್ರಿ ನಾನು #ಆಟೋರಾಜ ಆದಾಗ..
1979/80 ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು ಆಗ ಬದುಕಿನ ಅರ್ಥ ನಿನಗಾಗುವುದು ಎಂದಾಗ ಅಂದು ನನಗೆ #ಮೈಯೂರ ಚಿತ್ರದ #interval ದೃಶ್ಯದ ರಾಜಣ್ಣ ನಂತೆ ಶಪಥಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ.!
ಆಗ ನನಗೆ ಇದ್ದ ಆಸೆ ಒಂದೆ ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು ದಿನ 100ರೂ ದುಡಿಯುವ ಮನುಷ್ಯನಾಗಿ ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂದು!ಬದುಕಿಗೆ ಬುದ್ಧಿ ಹೇಳುವ #ಅಪ್ಪ ಅಂದು ಶತೃವಂತೆ ಕಂಡ.!
ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ!ಅಪ್ಪ ಹಾಗು ನನ್ನ ಮನಸ್ಥಾಪದ ದಿನಗಳು ನೆನಪಾಗಿ #ಅಪ್ಪ ಎಂಥ ಶ್ರೇಷ್ಟ.. ಮಗ ನಾನು ಎಂಥ ಅಧಮ.!ವ್ಯೆತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು..!
ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ರಕ್ತ ಬಿಸಿಯಿದ್ದಾಗ..! ಅದರೆ ಈಗ? ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕುಹಾಕಿದಾಗ ಅಪ್ಪ ಎಂಥ ಶ್ರೇಷ್ಟಮನುಜ ನೀನು ಅನ್ನಿಸಿತು..!ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ..!
ಕ್ಷಮೆಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು..!ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾಗ ದೇಹ ನಿನ್ನಲ್ಲಿಗೆ ಬರುವೆ!ಆಗಲಾದರು ಕ್ಷಮಿಸು.!ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ..!
ಒಂದಂತು ನಿನಗೆ ಸಮಾಧಾನ ಆಗುತ್ತದೆ!ಅಪ್ಪ ನಾನು ಶ್ರಮಿಸಿ ನಿನ್ನ ವಂಶದ ಹೆಸರು ಉಳಿಸಿರುವೆ!
ನೀನು ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆಕಂಡು..!love you pa..ever loving son..ನಿಮ್ಮ ಈಶ..ಎನ್ನಬೇಕು ಅನ್ನಿಸಿತು ಜನ್ಮ..
ತಂದೆತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ!
ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು…
ಶುಭರಾತ್ರಿ ……….””

ಹೀಗೆಂದು ಜಗ್ಗೇಶ್ ತಮ್ಮ ಅನುಭವವನ್ನು ಹಾಗೂ ಹಳೆಯ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.ಇನ್ನು ಜಗ್ಗೇಶ್​ ಅಟೋ ಓಡಿಸಿದ ವಿಡಿಯೋ ಫುಲ್​ ವೈರಲ್​ ಆಗಿದ್ದು, ಅಭಿಮಾನಿಗಳು ಖುಷಿಯಿಂದ ಶೇರ್​ ಮಾಡಿಕೊಳ್ತಿದ್ದಾರೆ.