ಹಿಂದಿ ಬಿಗ್ ಬಾಸ್ ಅಜಾಸ್ ಖಾನ್ ಮತ್ತು ಎಂಇಪಿ ಬಿಗ್ ಬಾಸ್ ನೌಹೀರಾ ಶೇಖ್ ಮೇಲೆ ದಾಳಿ !! ಬೆಂಗಳೂರು ರಾತ್ರಿಯಾಯ್ತು ಚುನಾವಣಾ ರಣಕಣ !!

ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ ನೌಹೀರಾ ಶೇಖ್  ರೋಡ್ ಶೋ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ರೋಡ್ ಶೋನಲ್ಲಿ ಹಿಂದಿ ಬಿಗ್ ಬಾಸ್ ಖ್ಯಾತಿಯ ಅಜಾಸ್ ಖಾನ್ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ad

ಮಹಿಳಾ ಎಂಪವರ್ಮೆಂಟ್ ಪಾರ್ಟಿ ರಾಜ್ಯಾಧ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಂಗಳೂರಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಎಂಇಪಿ ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆ ನಡೆಸುತ್ತಿದ್ದಾರೆ. ಇಂದು ಡಾ ನೌಹೀರಾ ಶೇಖ್ ಮತ್ತು ಸ್ಟಾರ್ ನಟರು ಬೆಂಗಳೂರು ನಗರದಲ್ಲಿ ರೋಡ್ ಶೋ ನಡೆಸಿದರು.

ಎಂಇಪಿ ರೋಡ್ ಶೋಗೆ ಮತದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ರಸ್ತೆಯಲ್ಲಿ ಕಿಕ್ಕಿರಿದು ಸೇರಿದ ವಾಹನ ಮತ್ತು ಮತದಾರರನ್ನು ಕಂಡ ಇನ್ನಿತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ರೋಡ್ ಶೋ ಮೇಲೆ ದಾಳಿ ನಡೆಸಿದ್ದಾರೆ.

 

ದುಷ್ಕರ್ಮಿಗಳು ದಾಳಿ ನಡೆಸುವ ವೇಳೆ ಕಾರ್ಯಕರ್ತರ ಮಧ್ಯೆ ಕೈ ಕೈ ಮಿಲಾಯಿಸುವ ಸಂಘರ್ಷ ಉಂಟಾಗಿದೆ. ಎಂಇಪಿಯ ಒಬ್ಬ ಕಾರ್ಯಕರ್ತನಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ದಾಳಿ ಬಳಿಕ ಮಾತನಾಡಿದ ಎಂಇಪಿ ಅಭ್ಯರ್ಥಿ ನರ್ಸ್ ಜಯಲಕ್ಷ್ಮಿ, ಎಂಇಪಿ ಏಳಿಗೆಯನ್ನು ಸಹಿಸದೇ ಈ ರೀತಿ ಮಾಡಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಿಗೆ ದೈರ್ಯವಿದ್ದರೆ ನಮ್ಮನ್ನು ಚುನಾವಣೆ ಮೂಲಕ ಎದುರಿಸಬೇಕು. ನಮ್ಮಿಂದಾಗಿ ಓಟ್ ಡಿವೈಡ್ ಆಗುತ್ತೆ ಎನ್ನುವುದು ಇತರ ರಾಜಕೀಯ ಪಕ್ಷಗಳ ಆರೋಪ. ನಾವೂ ಕೂಡಾ ರಾಜಕೀಯ ಮಾಡುತ್ತಿದ್ದು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಶಾಂತಿಯಿಂದ ನಿರ್ವಹಿಸುವಂತೆ ಸೂಚಿಸಿದ್ದಾರೆ ಎಂದರು.

 

ಇದು ಎಂಇಪಿ ಮೇಲಿನ ದುಷ್ಕರ್ಮಿಗಳ ದಾಳಿಯಾಗಿದ್ದು, ಇದರಿಂದಾಗಿ ಎಂಇಪಿ ಎದೆಗುಂದುವುದಿಲ್ಲ. ಹತಾಶ ರಾಜಕೀಯ ಪಕ್ಷಗಳು ಮಾತ್ರ ದಾಳಿ ಮಾಡಲು ಸಾಧ್ಯ. ನಾವು ಎಲ್ಲದಕ್ಕೂ ಕಾನೂನು ಮತ್ತು ಚುನಾವಣೆಯ ಮೂಲಕ ಉತ್ತರ ಕೊಡುತ್ತೇವೆ ಎಂದು ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ ನೌಹೀರಾ ಶೇಖ್ ಹೇಳಿದ್ದಾರೆ.