ಇದು ಪೋಲೀಸರ ಮೇಲೆ ಕಳ್ಳರು ದಾಳಿ ಮಾಡಿದ ಕಥೆ.. ಈ ಕಥೆ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತ

ಪೊಲೀಸರ ಮೇಲೆ ಅಟ್ಯಾಕ್… ಓಡಿ ಹೋದ ಪೊಲೀಸರು.. ಪೊಲೀಸರ ವಾಹನ ಜಖಂ… ಪೊಲೀಸರ ಮೇಲೇ ಹಲ್ಲೆ ಮಾಡಿದವರಿಗಾಗಿ‌‌ ಶೋಧ ಕಾರ್ಯ..

ad


ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತ ಆರೋಪಿಗಳನ್ನ ಸ್ಥಳ ಪರಿಶೀಲನೆಗೆಂದು ಕರೆ ತಂದಾಗ ಅವರ ಸಂಬಂಧಿಗಳು ಪೊಲೀಸ್ ವಾಹನ ಮೇಲೆ‌ ಕಲ್ಲು ತೂರಾಟ ನಡೆಸಿ, ಇನ್ಸಪೆಕ್ಟರ್  ಮೇಲೆ ಹಲ್ಲೆಗೆ ಮಾಡಿರೋ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಪೊಲೀಸರು ಕಳ್ಳತನದ ಆರೋಪದ‌ ಮೇಲೆ ಸೆಂಟ್ಲಮೆಂಟ್ ನಿವಾಸಿಗಳಾದ ನಾಲ್ವರನ್ನ ಬಂಧಿಸಿದ್ದರು. ಬಂಧಿತ ಆರೋಪಿಗಳನ್ನ ಸ್ಥಳ‌ ಪರಿಶೀಲನೆಗೆಂದು ನಿನ್ನೆ ರಾತ್ರಿ ಹುಬ್ಬಳ್ಳಿಯ ಸೆಂಟ್ಲಮೆಂಟ್‌ ಪ್ರದೇಶಕ್ಕೆ ತಡರಾತ್ರಿ ಕರೆದು ತಂದಿದ್ದರು. ಈ ವೇಳೆ ಪೊಲೀಸ್ ವಾಹನದ ಮೇಲೆ ಆರೋಪಿಗಳ ಸಂಬಂಧಿಕರು ಹಾಗೂ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ‌.

 

ಘಟನೆಯಲ್ಲಿ ಪೊಲೀಸ್ ವಾಹನದ ಗಾಜು ಜಖಂ ಗೊಂಡಿದ್ದು ,ಇನ್ಸ್ ಪೆಕ್ಟರ್  ಬಸವರಾಜ್, ಪಿಎಸ್‍ಐ ಜಯಪ್ಪ ನಾಯಕ್ ಸೇರಿದಂತೆ ನಾಲ್ವರು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿರಾಳಕೊಪ್ಪ ಪೊಲೀಸರು ಹುಬ್ಬಳ್ಳಿಯ ಪೊಲೀಸರಿಗೆ ಮಾಹಿತಿ ನೀಡದೇ ಸೆಂಟ್ಲಮೆಂಟ್ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಆರೋಪಿಗಳ ಸಂಬಂಧಿಕರು ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ.

 

ಶಿರಾಳಕೊಪ್ಪ ಪೊಲೀಸರು ಬೆಂಡಿಗೇರಿ ಪೊಲೀಸ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಹಾಗೂ ವಾಹನ ಜಖಂ ಮಾಡಿರೋ‌ ಕುರಿತು ಪ್ರಕರಣ ದಾಖಲಿಸಿದ್ದಾರೆ. ಆಗ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಲಕ್ಷ್ಮಣ ಗಡಾದ್ ಎನ್ನುವಾತನನ್ನು ಬಂಧಿಸಿದ್ದಾರೆ ಇನ್ನೂ ಹಲ್ಲೆ ಮಾಡಿ ಪರಾರಿಯಾದ 14 ಜನ ದುಷ್ಕರ್ಮಿಗಳಿಗಾಗಿ ಬೆಂಡಿಗೇರಿ ಠಾಣೆ ಪೊಲೀಸರಿಂದ ಶೋಧ ನಡೆಸಿದ್ದಾರೆ..

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ.