ರವಿ ಬೆಳೆಗೆರೆ ಬಂಧನ ಪ್ರಕರಣ – ಇಲ್ಲಿವರೆಗೆ ಏನೇನಾಯ್ತು?

ತನ್ನ ಸಹೋದ್ಯೋಗಿಯ ಹತ್ಯೆಗೆ ಸುಫಾರಿ ನೀಡಿದ ಆರೋಪದ ಮೇರೆಗೆ ಖ್ಯಾತ ಪತ್ರಕರ್ತ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಕರೆ ತಂದಿದ್ದಾರೆ. ತನ್ನ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್​ ಹೆಗ್ಗರವಳ್ಳಿ ಹತ್ಯೆಗೆ ರವಿ ಬೆಳಗೆರೆ ಭೀಮಾತೀರದ ಹಂತಕರಿಗೆ ಸುಫಾರಿ ಕೊಟ್ಟಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪದ್ಮನಾಭ ನಗರದಲ್ಲಿರುವ ಪತ್ರಕರ್ತ ರವಿ ಬೆಳಗೆರೆ ನಿವಾಸಕ್ಕೆ ತೆರಳಿದ್ದ ಸಿಸಿಬಿ ಪೊಲೀಸರು ರವಿ ಬೆಳಗೆರೆ ವಿಚಾರಣೆ ನಡೆಸಿದ್ದರು. ಅಲ್ಲದೇ ರವಿ ಬೆಳಗೆರೆ ಮನೆಯ ಪರಿಶೀಲನೆ ನಡೆಸಿದ್ದರು. ಮನೆ ಪರಿಶೀಲನೆ ವೇಳೆ ಒಂದು ರಿಲ್ವಾವರ್​, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡುಗಳು, ಒಂದು ಡಬ್ಬಲ್ ಬ್ಯಾರೆಲ್​ ಗನ್​, ಆಮೆಚರ್ಮ, ಜಿಂಕೆ ಚರ್ಮ ವಶಪಡಿಸಿಕೊಳ್ಳಲಾಗಿದೆ.ಬಳಿಕ  ರವಿ ಬೆಳಗರೆಯನ್ನು ವಶಕ್ಕೆ ಪಡೆದ ಪೊಲೀಸರು, ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 307, 34, ಆರ್ಮ್ಸ್​ ಕಾಯಿದೆ 1958 ರಿತ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಕಚೇರಿಗೆ ರವಿ ಬೆಳಗರೆಯನ್ನು ವಿಚಾರಣೆಗೆ ಕರೆತರಲಾಗಿದ್ದು, ಎಸಿಪಿ ಸುಬ್ರಹ್ಮಣ್ಯಸ್ವಾಮಿ ಹಾಗೂ ಡಿಸಿಪಿ  ವಿಚಾರಣೆ ನಡೆಸಲಿದ್ದಾರೆ. ರವಿಬೆಳಗೆರೆ ಪುತ್ರಿ ಚೇತನಾ ಬೆಳಗೆರೆ ರವಿ ಬೆಳಗೆರೆ ಜೊತೆ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ಇನ್ನು ಸುನೀಲ್ ಹೆಗ್ಗರವಳ್ಳಿಯನ್ನು ಹೇಳಿಕೆ ಪಡೆಯುವುದಕ್ಕಾಗಿ ಸಿಐಡಿ ಕಚೇರಿಯಿಂದ ಸಿಸಿಬಿ ಕಚೇರಿಗೆ ಕರೆತರಲಾಗಿದೆ.  ರವಿ ಬೆಳಗೆರೆ ಮತ್ತು  ಸುನೀಲ್ ಹೆಗ್ಗರವಳ್ಳಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆ ಇದೆ.

1 ಕಾಮೆಂಟ್

  1. […] ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಫಾರಿ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆಯನ್ನು ನಾಲ್ಕು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ. ನಿನ್ನೆ ಸಿಸಿಬಿ ಕಚೇರಿಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಗ ಕರೆದೊಯ್ದ ಪೊಲೀಸರು ಬಳಿಕ ಕೋರಮಂಗಲ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಿಸಿಬಿ ಪೊಲೀಸರ ಮನವಿ ಮನ್ನಿಸಿ ರವಿ ಬೆಳಗೆರೆಯನ್ನು ನಾಲ್ಕು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದ್ದರು. […]

Comments are closed.