ತಹಶೀಲ್ದಾರ್​ಗೆ ಧಮಕಿ ಹಾಕಿದ ನಗರಸಭೆ ಸದಸ್ಯ ಅರೆಸ್ಟ್​​.!!

ತಹಶೀಲ್ದಾರಗೆ ಬೆದರಿಕೆ ಹಾಕಿದ ನಗರಸಭೆ ಸದಸ್ಯನೊರ್ವ ಪೊಲೀಸರ ಅತಿಥಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ನಡೆದಿದೆ.

ತಹಶೀಲ್ದಾರ ಕಚೇರಿಗೆ ಬಂದಿದ್ದ ನಗರಸಭೆ ಸದಸ್ಯ ಶಿವಮೂರ್ತಿಗೆ ತಹಶೀಲ್ದಾರ ಕಾಂತರಾಜ್​ ಕಚೇರಿಯಿಂದ ಹೊರಕ್ಕೆ ತೆರಳುವಂತೆ ಸೂಚಿಸಿದ್ದರು. ಇದರಿಂದ ಕೆರಳಿದ ಶಿವಮೂರ್ತಿ ತಹಶೀಲ್ದಾರಗೆ ಪೋನ್ ಮಾಡಿ ಧಮಕಿ ಹಾಕಿದ್ದಾನೆ. 15 ದಿನಗಳಲ್ಲಿ ನೀರಿಲ್ಲದ ಊರಿಗೆ ಎತ್ತಂಗಡಿ ಮಾಡಿಸೋದಾಗಿ ಶಿವಮೂರ್ತಿ ಧಮಕಿ ಹಾಕಿದ್ದಾನೆ.

ಶಿವಮೂರ್ತಿ ತಹಶೀಲ್ದಾರಗೆ ಪೋನ್ ಮಾಡಿ ಧಮಕಿ ಹಾಕಿದ ಆಡಿಯೋ ವೈರಲ್​ ಆಗಿದ್ದು, ಸಾರ್ವಜನಿಕರು ರೌಡಿಶೀಟರ್​ ಆಗಿರೋ ಬಿಜೆಪಿ ಪಕ್ಷದ ನಗರದ ಸದಸ್ಯ ಶಿವಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಿಟಿವಿನ್ಯೂಸ್​ನಲ್ಲಿ ಶಿವಮೂರ್ತಿ ಆಡಿಯೋ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಶಿವಮೂರ್ತಿಯನ್ನು ಬಂಧಿಸಿದ್ದಾರೆ. ತಹಶೀಲ್ದಾರ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಮೂರ್ತಿ ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.