ಟ್ರಾಫಿಕ್​ ಪೊಲೀಸರು ಫೈನ್​ ಹಾಕಿದ್ದನ್ನೇ ಪ್ರಶ್ನಿಸಿದ ಆಟೋ ಚಾಲಕ ಇದೀಗ ಜೈಲೂಟ ತಿನ್ನುವಂತಾಗಿದೆ. ತುಮಕೂರಿನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ನೋ ಪಾರ್ಕಿಂಗ್​​ನಲ್ಲಿ ಆಟೋ ನಿಲ್ಲಿಸಿದ ಕಾರಣಕ್ಕೆ ತುಮಕೂರು ಠ್ರಾಫಿಕ್ ಪೊಲೀಸ್ರು ನವೀನ್​ ಎಂಬಾತನಿಗೆ 600 ರೂ ಫೈನ್ ಹಾಕಿದ್ರು. ಇದನ್ನು ಪ್ರಶ್ನಿಸಿ ಖಾಸಗಿ ಬಸ್ ನಿಲ್ದಾಣದ ಮುಂದೆ ವಾಹನ ತಡೆದು ನವೀನ್​​​​ ಸಿಟ್ಟು ವ್ಯಕ್ತ ಪಡಿಸಿದ್ದ. ಇದ್ರಿಂದ ಸುಮಾರು ನಾಲ್ಕು ಕಿಲೋ ಮೀಟರ್​ ದೂರ ಟ್ರಾಫಿಕ್​ ಜಾಮ್​ ಆಗಿತ್ತು. ನವೀನ್​​ಗೆ ಅಲ್ಲಿದ್ದ ಕೆಲ ಆಟೋ ಚಾಲಕರು ಸಾಥ್ ನೀಡಿದ್ರು. ಸುಮಾರು 1 ಗಂಟೆಗಳ ಕಾಲ ಟ್ರಾಫಿಕ್​​​ ಜಾಮ್ ಆಗಿತ್ತು. ಆಶೋಕ ರಸ್ತೆಗೆ ಪೊಲೀಸರು ಬಂದು ಸಮಾಧಾನ ಮಾಡಿದ್ರು. ಕೂಡ್ಲೇ ನವೀನ್​​ನನ್ನು ಅರೆಸ್ಟ್ ಮಾಡಿದ ಪೊಲೀಸ್ರು ಜೈಲಿಗೆ ಕಳುಹಿಸಿದ್ದಾರೆ.
======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here