ಎಲೆಕ್ಷನ್​ ಬಳಿಕ ತೆರೆಗೆ ಬರ್ತಿದ್ದಾನೆ ಅಯೋಗ್ಯ!

ಸ್ಯಾಂಡಲ್​​ವುಡ್​​ನ ಅಂಜದ ಗಂಡು ಸತೀಶ್​ ನೀನಾಸಂ ಟೈಗರ್ ಗಲ್ಲಿ ಸಿನಿಮಾ ನಂತರ ಅಭಿನಯಿಸ್ತಿರೋ ಹೊಸ ಚಿತ್ರ ಅಯೋಗ್ಯ.. ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನ ಕಾಮಿಡಿ ಕಥೆ ಇರೋ ಈ ಸಿನಿಮಾದ ಶೂಟಿಂಗ್​​​​​ ಕಂಪ್ಲೀಟ್ ಆಗಿದೆ. ಈ ಅಯೋಗ್ಯನ ಸಾಂಗ್​​ ಶೂಟಿಂಗ್ ಭರ್ಜರಿಯಾಗಿ ನಡೆದಿದ್ದು, ಹಾಡಿನ ಚಿತ್ರೀಕರಣದ ಮೇಕಿಂಗ್​​​​ ಸಿಕ್ಕಿದೆ.. ಕನ್ನಡ ಸಿನಿ ಪ್ರೇಕ್ಷಕರಿಗೆ ಕಾಮಿಡಿ ಎಂಟರ್​ಟೈನ್ಮ್ ಮಾಡೋದಕ್ಕೆ ಹೊಸ ಸಿನಿಮಾ ಒಂದು ಸಜ್ಜಾಗ್ತಿದೆ.

ad


ಅದೇ ಅಯೋಗ್ಯ.. ನೀನಾಸಂ ಸತೀಸ್​​​, ರಚಿತಾರಾಮ್ ಕಾಂಬಿನೇಷನ್​ನಲ್ಲಿ ಮೂಡಿ ಬರ್ತಿರೋ ಸ್ಪೆಷಲ್​ ಸಿನಿಮಾ ಇದು. ಈಗ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಿನಿಮಾದ ಹಾಡಿನ ಮೇಕಿಂಗ್​​ ಬಿಟಿವಿಗೆ ಸಿಕ್ಕಿದೆ. ಅಯೋಗ್ಯ.. ಹೆಸರಲ್ಲೇ ಪ್ರೇಕ್ಷಕನಿಗೆ ಮಜಾ ಕೊಡ್ತಿರೋ ಚಿತ್ರ.. ನೀನಾಸಂ ಸತೀಶ್​​ ನಟಿಸ್ತಿರೋ ಅಪ್ಪಟ ಹಳ್ಳಿ ಸೊಗಡು, ಸೊಗಬಿಗೋ ಸಿನಿಮಾ. ರಚಿತಾರಮ್​​​​​ ಗ್ಲಾಮರ್​ ತುಂಬಿರೋ ಕಲರ್​ಫುಲ್​ ಸಿನಿಮಾ.. ಈ ಸಿನಿಮಾದ ಟೀಸರ್​ ಈ ಹಿಂದೆ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ನವ ನಿರ್ದೇಶಕ ಎಸ್​​. ಮಹೇಶ್​​​​​​​​​ ಅದ್ಭುತ ಕಾಮಿಡಿ ಸಿನಿಮಾ ಮಾಡಿದ್ದಾರೆ ಅಂತ ಟೀಸರ್​ ನೋಡಿದವ್ರೆಲ್ಲಾ ಹೇಳಿದ್ರು.. ಅಯೋಗ್ಯ ಟೀಸರ್​​ನಿಂದ ರಚಿತಾ ರಾಮ್​ ಹಾಗು ಸತೀಶ್​​ ಫ್ಯಾನ್ಸ್​​​ಗಳಿಗೆ ನಿರೀಕ್ಷೆ ಹುಟ್ಟಿಸಿದೆ. ಇದೀಗ ಸಿನಿಮಾ ಹಾಡೊಂದರ ಕಲರ್ ಫುಲ್​ ಮೇಕಿಂಗ್ ರಿವಿಲ್ ಆಗಿದೆ. ಸತೀಸ್​​ ಇಂಟ್ರಡಕ್ಷನ್ ಸಾಂಗ್ ಇದಾಗಿದ್ದು. ಗ್ರಾಮಪಂಚಾಯ್ತಿ ಸದಸ್ಯ ಸತೀಸ್​ ಕಲರ್​ಫುಲ್​​ ಡ್ರೆಸ್​​ನಲ್ಲಿ ಸಿಕ್ಕಾಪಟ್ಟೆ ಸ್ಟೆಪ್ಸ್​ ಹಾಕಿದ್ದಾರೆ..

‘ಅಯೋಗ್ಯ’ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನ ರೋಚಕ ಸ್ಟೋರಿಯ ಸಿನಿಮಾ. ಸತೀಸ್​ ಸಿನಿಮಾದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಾಗಿರೋದ್ರಿಂದ ಸತೀಶ್​ರನ್ನ ಇಂಟ್ರಡ್ಯೂಸ್​ ಮಾಡೋ ಹಾಡಿನಲ್ಲೂ ಅಂತದ್ದೇ ಲಿರಿಕ್ಸ್​​​ ಇದೆ. ಮಂಡ್ಯದಲ್ಲಿ ನಡೆಯೋ ಕತೆ ಆಗಿರೋದ್ರಿಂದ ಮಂಡ್ಯದ ಹಳ್ಳಿಗೆಲ್ಲಾ ಇವನೇ ಒಳ್ಳೆ ಲೀಡರ್​ ಅನ್ನೋ ಲಿರಿಕ್ಸ್​​ನಿಂದ ಸತೀಶ್​​ರ ಕ್ಯಾರೆಕ್ಟರ್ ವರ್ಣನೆ ಮಾಡಿದ್ದಾರೆ.
ಸತೀಶ್​​ರ ಈ ಸ್ಪೆಷಲ್​ ಸಿನಿಮಾದ ಈ ಹಾಡನ್ನ ನಿರ್ದೇಶಕ ಮಹೇಶ್​ ಸುಮಾರು 35 ಲಕ್ಷ ಖರ್ಚು ಮಾಡಿ ಶೂಟಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎರಡು ಬೇರೆ ಬೇರೆ ಸೆಟ್​​ಗಳನ್ನ ಹಾಕಿ 90 ಜನ ಡಾನ್ಸರ್ಸ್​ಗಳನ್ನ ಬಳಸಿಕೊಂಡು ಅಯೋಗ್ಯನ ಇಂಟ್ರಡಕ್ಷನ್ ಸಾಂಗ್ ಶೂಟಿಂಗ್ ನಡೆದಿದೆ.ಈ ಹಾಡಿಗೆ ಚೇತನ್​ ಲಿರಿಕ್ಸ್ ಬರೆದಿದ್ದು, ಹರಿಕೃಷ್ಣ ಮ್ಯೂಸಿಕ್ ಮಾಡಿದ್ದಾರೆ. ಸತೀಶ್​​ ಜೊತೆ ಚಿಕ್ಕಣ್ಣ , ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆ.ಆರ್‌. ಪೇಟೆ, ರಂಗಾಯಣ ರಘು, ರವಿಶಂಕರ್ ಸೇರಿದಂತೆ ದೊಡ್ಡ ತಾರಾಬಳಗ ಇದೆ.
ಅಯೋಗ್ಯ ಸಿನಿಮಾ ಕ್ರಿಸ್ಟಲ್ ಪಾರ್ಟ್​ ಸಿನಿಮಾಸ್ ಬ್ಯಾನರ್​​ನಲ್ಲಿ ಟಿ.ಆರ್​ ಚಂದ್ರಶೇಖರ್​​ ನಿರ್ಮಾಣ ಮಾಡಿದ್ದಾರೆ. ಸಧ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್​ ನಡೀತಿರೋ ಅಯೋಗ್ಯ ಎಲೆಕ್ಷನ್ ಮುಗಿತಿದ್ದ ಹಾಗೆ ತೆರೆಗೆ ಬರ್ತಾನೆ..