ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಈಗಾಗಲೇ ಚಿತ್ರದುರ್ಗದಲ್ಲಿ ಮಾತ್ನಾಡಿ, ತಿವಾರಿ ಸಾವಿನ ತನಿಖೆ ನಡೆಸುವಂತೆ ಒತ್ತಡ ಹೇರುತ್ತೇವೆ ಅಂದಿದ್ದಾರೆ.

ಕರ್ನಾಟಕದ IAS ಅಧಿಕಾರಿ ಅನುರಾಗ್​​ ತಿವಾರಿ ನಿಗೂಡ ಸಾವು ಪ್ರಕರಣಕ್ಕೆ ಮೇಜರ್​​ ಟ್ವಿಸ್ಟ್​ ಸಿಕ್ಕಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಅಕ್ರಮ ತಡೆಗೆ ಹೊರಟಿದ್ದೇ ಅನುರಾಗ್​​ ತಿವಾರಿ ಸಾವಿಗೆ ಕಾರಣ ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಯುಪಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಆಹಾರ ಇಲಾಖೆ ಅಧಿಕಾರಿಗಳು ಮಾರುಕಟ್ಟೆ ದರಕ್ಕಿಂತ ಡಬ್ಬಲ್​ ರೇಟ್ ಕೊಟ್ಟು ಪಡಿತರ ಧಾನ್ಯ ಖರೀದಿ ಮಾಡುತ್ತಿದ್ದರು. ಇನ್ನು ವಿತರಣೆ ಹಂತದಲ್ಲಿ ಅನ್ನಭಾಗ್ಯ ಪಡಿತರ ಅಂಗಡಿಗಳ ಏಜೆಂಟರು ಅಕ್ಕಿಯನ್ನು ಮಾರಾಟ ಮಾಡಿಕೊಳ್ತಿದ್ದರು. ಇದೆಲ್ಲಾ ಅಕ್ರಮ ಪತ್ತೆ ಹಚ್ಚಿ 2000 ಕೋಟಿ ರೂಪಾಯಿ ಹಗರಣವನ್ನ ತಿವಾರಿ ಬಯಲಿಗೆ ಎಳೆದಿದ್ದರು. ಆದರೆ ಅಕ್ರಮ ಖರೀದಿಗೆ ಅನುಮತಿ ನೀಡಲು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತಿವಾರಿಗೆ ಒತ್ತಡ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಅನುರಾಗ್ ತಿವಾರಿ ತೀವ್ರ ಒತ್ತಡಕ್ಕೊಳಗಾಗಿದ್ದರು. ಅಲ್ದೆ ಹಗರಣದ ಸಮಗ್ರ ದಾಖಲೆಗಳನ್ನು ಅನುರಾಗ್ ತಿವಾರಿ ರಹಸ್ಯವಾಗಿ ಸಿಬಿಐ ಕಚೇರಿಗೆ ಕಳಿಸಿದ್ದರು ಅನ್ನೋದು ಗೊತ್ತಾಗಿದೆ. ಕೊನೆಗೆ ಸುದೀರ್ಘ ರಜೆ ಮೇಲೆ ಹೋಗಿದ್ದ ತಿವಾರಿ ಲಖನೌನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ರು. ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸುವಂತೆ ಕರ್ನಾಟಕದ ಕೆಲ ಸಂಸದರೂ ಒತ್ತಡ ಹೇರುತ್ತಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್​ಗೆ ಪತ್ರ ಬರೆದು ಸಿಬಿಐ ತನಿಖೆಗೆ ಆಗ್ರಹ ಮಾಡಲು ಮುಂದಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here