ಪುತ್ರನ ಪರ ಬಿಎಸ್​ವೈ ಭರ್ಜರಿ ಪ್ರಚಾರ! ಹೆಲಿಕ್ಯಾಪ್ಟರ್​ ಶೋಧ ನಡೆಸಿ ಶಾಕ್​ ನೀಡಿದ ಅಧಿಕಾರಿಗಳು!!

ರಾಜ್ಯದಲ್ಲಿ ಏಪ್ರಿಲ್​​​​ 23ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಪ್ರಚಾರದ ಭರಾಟೆ ಬಹಳ ಜೋರಾಗಿ ಸಾಗುತ್ತಿದ್ದು ,  ಅಖಾಡದಲ್ಲಿರುವ ಹುರಿಯಾಳುಗಳ ಪರ ದಿಗ್ಗಜರೇ ಪ್ರಚಾರ ನಡೆಸುತ್ತಿದ್ದಾರೆ. ಶಿವಮೊಗ್ಗದ ಶಿಕಾರಿಪುರದಲ್ಲಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ ರಾಘವೇಂದ್ರ ಪರ ಪ್ರಚಾರ ನಡೆಸಿದ್ದಾರೆ.

ad

ಶಿಕಾರಿಪುರ ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮೈತ್ರಿ ನಾಯಕರ ವಿರುದ್ಧ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಗುಡುಗಿದ್ದಾರೆ.ಇನ್ನೂ ಶಿವಮೊಗ್ಗದಲ್ಲಿ ,ಮಾತನಾಡಿದ ಬಿ ಎಸ್ ಯಡಿಯೂರಪ್ಪ ರಾಜ್ಯದ ಎಲ್ಲ ಭಾಗಗಳಲ್ಲೀ  ಪ್ರಚಾರ ಕಾರ್ಯಗಳನ್ನು ನಡೆಸಿದ್ದೇವೆ. BJP ಪಕ್ಷ 12 ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ. ಶಿವಮೊಗ್ಗ ಕ್ಷೇತ್ರದಲ್ಲಿ B.Y ರಾಘವೇಂದ್ರ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಹಾಗೂ ಮಂಡ್ಯದಲ್ಲಿ BJP ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವು ಸಾಧಿಸಲಿದ್ದಾರೆ. ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮಗನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ  ಬಿ.ಎಸ್.ಯಡಿಯೂರಪ್ಪನವರಿಗೆ ಚುನಾವಣಾ ಅಧಿಕಾರಿಗಳು ಶಾಕ್ ನೀಡಿದ್ದು, ಪ್ರಚಾರಕ್ಕೆ ಆಗಮಿಸಿದ್ದ  ಬಿಎಸ್​ವೈ ಹೆಲಿಕ್ಯಾಪ್ಟರ್​ನ್ನು  ಶೋಧಿಸಿದ್ದಾರೆ. ಸಂಪೂರ್ಣ ಹೆಲಿಕ್ಯಾಪ್ಟರ್​ ಶೋಧ ನಡೆಸಿದ ಬಳಿಕ  ಹಾರಾಟಕ್ಕೆ ಅನುಮತಿ ನೀಡಿತು. ಒಟ್ಟಿನಲ್ಲಿ ಎರಡನೇ ಹಂತದ ಚುನಾವಣೆ ಪ್ರಚಾರ ಜೋರಾಗಿದೆ.