ಕೆಲಸಗಳೆಲ್ಲ ಹಾಗೇ ಉಳಿದಿದೆ.. ನಮ್ಮ ಚುನಾಯಿತ ಪ್ರತಿನಿಧಿಗಳೆಲ್ಲಿ ಅಂತ ಕೇಳ್ತಿದ್ದಾರೆ ಬಾದಾಮಿ ಜನತೆ..

  • ಸಿದ್ಧರಾಮಯ್ಯ ಕೇಂದ್ರಿಕೃತ ರಾಜಕೀಯ ಕಚ್ಚಾಟದಲ್ಲಿ ರಾಜ್ಯ ನಾಯಕರು.
  • ಇತ್ತ ಕ್ಷೇತ್ರದಿಂದ ಆರಿಸಿ ಕಳುಹಿಸಿದ ದೊರೆಯ ಭೇಟಿಗೆ ಎಲ್ಲಿಗೆ ಹೋಗಬೇಕು ಎನ್ನುತ್ತಿರುವ ಕ್ಷೇತ್ರದ ಜನರು.
  • ಮಾಜಿ ಸಿಎಂ ಸಿದ್ಧರಾಮಯ್ಯನವರನ್ನ ಗೆಲ್ಲಿಸಿದ ಕ್ಷೇತ್ರ ಬಾದಾಮಿ ಕಡೆ ಮತ್ತೆ ಯಾವಾಗ ಬರ್ತಾರೆ ಸಾಹುಬ್ರು ಅಂತಿದ್ದಾರೆ ಜನರು.
  • ಬಾದಾಮಿಯನ್ನ ಸಮಗ್ರವಾಗಿ ಅಭಿವೃದ್ಧಿ ಮಾಡ್ತೇವೆ ಎಂದು ಹೇಳಿದ ಮಾಜಿ ಸಿಎಂ ಸಿದ್ಧರಾಮಯ್ಯ ಕ್ಷೇತ್ರದಲ್ಲಿ ಸಿಗುವುದು ಇನ್ಮುಂದೇ ಅಪರೂಪ?ಹೀಗೊಂದು ಅನುಮಾನ ಕಾಡುತ್ತಿದೆ ಜನರಲ್ಲಿ.
  • ಇನ್ನಾದ್ರೂ ಬದಲಾಗುತ್ತಾ ಬಾದಾಮಿಯ ಹಣೆಬರಹ?ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನಗಳಿಸಿರುವ ಚಾಲುಕ್ಯರ ನಾಡಿನಲ್ಲಿ ಪ್ರವಾಸೋದ್ಯಮ ಮಣ್ಣುಪಾಲು.
  • ಅಭಿವೃದ್ಧಿ ಯಾವಾಗ?ಜನರ ಪ್ರಶ್ನೆ.?
  • ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದು ಆಟ ನಡೆಯಲ್ಲ..!?ಹಾಗಾದ್ರೆ ಅಭಿವೃದ್ಧಿ ಹೆಂಗೆ?
  • ಮಾಜಿ ಸಿಎಂ ಸಿದ್ಧು ಕ್ಷೇತ್ರದಲ್ಲಿ ಬೆಂಬಲಿಗರಲ್ಲಿ ಹಲವರು ತಾವೇ ಶಾಸಕರಂತೆ ನಡೆದುಕೊಳ್ಳುತ್ತಿದ್ದಾರಂತೆ.

ಒಂದು ಕಡೆ ಸಮ್ಮಿಶ್ರ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಅಧಿಕಾರಕ್ಕಾಗಿ  ಕಿತ್ತಾಟ ಜೋರಾಗುತ್ತಿದೆ.ಇನ್ನೊಂದು ಕಡೆ ಮಾಜಿ ಸಿಎಂ ಸಿದ್ಧರಾಮಯ್ಯ ಕೇಂದ್ರಿಕೃತ ರಾಜಕೀಯ ಕಚ್ಚಾಟಗಳು ಹೆಚ್ಚಾಗುತ್ತಿವೆ.ಸಿದ್ಧರಾಮಯ್ಯನವರು ರಾಜಕೀಯ ತಂತ್ರ ಪ್ರತಿತಂತ್ರ ಹೆಣೆಯುತ್ತ ಕುಳಿತಿದ್ರೆ, ಇತ್ತ ಬಾದಾಮಿಯಿಂದ ಆರಿಸಿ ಕಳುಹಿಸಿದ ಜನರು ಮಾತ್ರ ದೊರೆ ಎಲ್ಲಿ ಎಂದು ಕೇಳ್ತಾ ಇದ್ದಾರಂತೆ. ಕಾರಣ ಬಾದಾಮಿ ಅಭಿವೃದ್ಧಿ ಕನಸು ಹೊತ್ತಿರುವ ಜನರು ಅಭಿವೃದ್ಧಿ ಯಾವಾಗ ಅಂತಿದ್ದಾರಂತೆ?ಈ ಕುರಿತ ವರದಿ.

 

ವಿಶ್ವಪಾರಂಪರಿಕ ಪಟ್ಟಯಲ್ಲಿ ತನ್ನದೇ ಮಹತ್ವದ ಸ್ಥಾನ ಹೊಂದಿರುವ ಚಾಲುಕ್ಯರ ನಾಡು.ಇಂದಿಗೂ ದೇಶ ವಿದೇಶದ ಜನರನ್ನ ತನ್ನತ್ತ ಸೆಳೆಯುವ ಶಿಲ್ಪಕಲೆಗಳು ಗುಹಾಂತರ ದೇವಾಲಯಗಳು.ಹೌದು ಈ ದೃಶ್ಯಾವಳಿಗಳಿಗೆ ಸಾಕ್ಷಿಯಾಗೊದು ವಿಶ್ವ ವಿಖ್ಯಾತ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ.ಹೌದು ಐತಿಹಾಸಿಕ ಇತಿಹಾಸ ಹೊಂದಿರುವ ಚಾಲುಕ್ಯರ ನಾಡು ಬಾದಾಮಿಯಲ್ಲಿ ಈ ಹಿಂದಿನಿಂದಲೂ ಅಭಿವೃದ್ಧಿ ಮರಿಚೀಕೆ.ಆದ್ರೆ ಈಗ ಸ್ವತಃ ಮಾಜಿ ಸಿಎಂ ಸಿದ್ಧರಾಮಯ್ಯನವರನ್ನ ಈ ಕ್ಷೇತ್ರದ ಜನರು ತಮ್ಮವರೆಂದು ಅಪ್ಪಿಕೊಂಡು ಗೆಲ್ಲಿಸಿ ಶಾಸಕರನ್ನಾಗಿ ಮಾಡಿ ವಿಧಾನಸೌಧಕ್ಕೆ ಆರಿಸಿ ಕಳುಹಿಸಿದ್ದಾರೆ.ಚುನಾವಣೆ ಪ್ರಚಾರಕ್ಕೆ ಒಂದು ಬಾರಿ ಬಂದು ,ಗೆದ್ದ ಬಳಿಕ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿ ಒಂದು ವಾರ ಇದ್ದು ಹೋದ ಸಿದ್ಧರಾಮಯ್ಯ ಬಾದಾಮಿಯನ್ನ ಸಂಪೂರ್ಣವಾಗಿ ಅಭಿವೃದ್ಧಿ ಂಆಡುವ ಭರವಸೆ ನೀಡಿ ಹೋಗಿದ್ದಾರೆ.ಜನರು ಕೂಡ ಅನಿಭವಿ ರಾಜಕಾರಣಿ,ಮಾಜಿ ಮುಖ್ಯಮಂತ್ರಿಗಳಿಂದ ಬಾದಾಮಿ ಬದಲಾಗುತ್ತೆ ಅಭಿವೃದ್ಧಿ ಕಾಣುತ್ತೆ ಅಂತ ಕನಸು ಹೊತ್ತು ಕುಳಿತಿದ್ದಾರೆ.ಆದ್ರೆ ತಮ್ಮ ನಿತ್ಯದ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಶಾಸಕರು ಮಾತ್ರ ಕ್ಷೇತ್ರದಲ್ಲಿ ಸಿಗದೇ ಇರೋದು ಕ್ಷೇತ್ರದ ಜನರಿಗೆ ಬಹಳ ತೊಂದರೆಯುಂಟು ಮಾಡುತ್ತಿದೆಯಂತೆ.ಇತ್ತ ಮಾಜಿ ಸಿಎಂ ಸಿದ್ಧರಾಮಯ್ಯನವರ ಕೆಲವು ಬೆಂಗಲಿಗರಂತೂ ತಾವೇ ಶಾಸಕರಂತೆ ವರ್ತಿಸುತ್ತಿದ್ದಾರಂತೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ.ಇದರಿಂದ ದೊರೆ ಯಾವಾಗ ಕೈಗೆ ಸಿಗ್ತಾರೆ ಅಂತ ಜನರು ಕಾಯ್ತಾ ಇದ್ದಾರೆ.

ಇನ್ನು ಬಾದಾಮಿಯ ಗುಹಾಂತರ ದೇವಾಲಯಗಳು,ಶಿಲ್ಪಕಲೆಗಳು ತನ್ನತ್ತ ಇಡೀ ಜಗತ್ತಿನ ಜನರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿವೆ.ನಿತ್ಯ ದೇಶ-ವಿದೇಶಗಳಿಂದ ಪ್ರವಾಸಿಗರು ಬರ್ತಾರೆ.ಆದ್ರೆ ಬಂದ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳಿಲ್ಲದೇ ಇರೋದು ಪ್ರವಾಸಿಗರನ್ನ ತೊಂದರೆಗೀಡುಮಾಡುತ್ತೆ. ಯಾವುದೇ ಮಾಹಿತಿ ಕೇಂದ್ರಗಳಿಲ್ಲದೇ ಇರೋದು,ಸರ್ಕಾರದ ವತಿಯಿಂದ ವಸತಿ ವ್ಯವಸ್ಥೆಗಳಿಲ್ಲದೇ ಇರೋದು ಪ್ರವಾಸಿರಿಗೆ ಕಿರಿಕಿರಿಯುಂಟು ಮಾಡುತ್ತಿವೆ.ಈ ಹಿಂದೆ ಸಿದ್ಧರಾಮಯ್ಯನವರು ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿದ್ರು.ಆದ್ರೆ ಸಮೀತಿ ಮಾತ್ರ ಇನ್ನೂ ರಚನೆ ಯಾಗಿಲ್ಲ.ಅದರ ಕಾರ್ಯವ್ಯಾಪ್ತಿ ಏನು ಎನ್ನೋದು ಯಾರಿಗೂ ಗೊತ್ತಿಲ್ಲ.ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಹೊಂದಿರುವ ಮಾಜಿ ಸಿಎಂ ಸಿದ್ಧರಾಯ್ಯನವರು ಈ ಸಮ್ಮಿಶ್ರ ಸರ್ಕಾರದ ಬಜೆಟನಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಗೊಳಿಸಲಿ ಎನ್ನೋದು ಜನರ ನಿರೀಕ್ಷೆ ಇದೆ.ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರನ್ನ ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿ ಬರ್ತಿರೋದ್ರಿಂದ ಕ್ಷೇತ್ರಕ್ಕೆ ಸೂಕ್ತ ನ್ಯಾಯ ಸಿಗುತ್ತಾ ಎನ್ನುವ ಅನುಮಾನಗಳು ಕೂಡ ಕಾಡುತ್ತಿವೆ.ಅನುಭವಿ ರಾಜಕಾರಣಿ ಕ್ಷೇತ್ರದ ಶಾಸಕರಾಗಿರೋದು ಜನರಲ್ಲಿ ಸಂತಸ ಉಂಟು ಮಾಡಿದ್ರೂ ಅಭಿವೃದ್ಧೀಯಾವಾಗ ಎನ್ನುವಂತಾಗಿದೆ.,ಇನ್ನು ಕೇಂದ್ರ ಸರ್ಕಾರದ ಅಮೃತ್,ಹೃದಯ ಯೋಜನೆಗಳು ಕೂಡ ಸರಿಯಾಗಿ ನಡಿಯದೇ ಇರೋದು ಪ್ರವಾಸಿಗರಲ್ಲಿ ಬೇಸರವನ್ನುಂಟು ಮಾಡಿದೆ.

ಒಟ್ಟಾರೆ ನಾಡಿನ ಮಾಜಿ ದೊರೆಯೊಬ್ಬರು ಬಾದಾಮಿಯ ಶಾಸಕರಾಗಿರೋದು ಅಭಿವೃದ್ಧಿಯ ಬಗ್ಗೆ ಜನರಲ್ಲಿ ಸಾಕಷ್ಟು  ಹುಮ್ಮಸ್ಸು ಮೂಡಿಸಿದೆ.ರಾಜಕೀಯ ತಿಕ್ಕಾಟದಲ್ಲೇ ಕಾಲ ಕಳೆಯದೇ ಅಭಿವೃದ್ಧಿಯತ್ತ ಗಮನ ಹರಿಸಿಲಿ ಎನ್ನೋದು ಜನರ ಆಶಯ.