ಲೋಕ ಕಲ್ಯಾಣಾರ್ಥ ಹರಿವ ನೀರಿನಲ್ಲಿ ಕಾವಿಧಾರಿಯ ತಪಸ್ಸು- ಈ ವಿಚಿತ್ರ ನೋಡಲು ಹರಿದು ಬರುತ್ತಿರುವ ಭಕ್ತರು.

ಹರಿವ ನೀರಿನಲ್ಲಿ ಕಠಿಣ ತಪಸ್ಸು

ಗುಹೆಯಲ್ಲಿ ತಪಸ್ಸು ಮಾಡುವ ಕಾವಿಧಾರಿಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬರು ಸ್ವಾಮೀಜಿ ಲೋಕಕಲ್ಯಾಣಾರ್ಥ ಹರಿವ ನೀರಿನಲ್ಲಿ ಕಳೆದ ಮೂರು ದಿನಗಳಿಂದ ತಪಸ್ಸಿನಲ್ಲಿ ನಿರತರಾಗಿದ್ದಾರೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿರುವ ಹೊಸಕೆರೆಯಲ್ಲಿ ಕಳೆದ ಮೂರು ದಿನಗಳಿಂದ ಸ್ವಾಮೀಜಿ ತಪಸ್ಸಿನಲ್ಲಿ ನಿರತರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಮಹಾಸಿದ್ದೇಶ್ವರ ಮಠದ ಸುರೇಶ್​​ ಮಹಾರಾಜರು ಹೀಗೆ ಕಠಿಣ ತಪಸ್ಸಿನಲ್ಲಿ ನಿರತರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಹರಿವ ನೀರಿನ ಮಧ್ಯದಲ್ಲಿ ಸ್ವಾಮೀಜಿ ಕೇವಲ ತಲೆ ಮಾತ್ರ ಕಾಣಿಸುವಂತೆ ಸ್ವಾಮೀಜಿ ಧ್ಯಾನಸ್ಥರಾಗಿದ್ದಾರೆ.

ಈ ಕಠಿಣ ತಪಸ್ಸು ನೋಡಲು ಪ್ರತಿನಿತ್ಯ ಸಾವಿರಾರು ಭಕ್ತರು ಕೆರೆ ದಂಡೆಗೆ ಹರಿದು ಬರುತ್ತಿದ್ದು, ಭಕ್ತರು ಮನವಿ ಮಾಡಿದರು ಸ್ವಾಮೀಜಿ ತಪಸ್ಸು ನಿಲ್ಲಿಸಿ ಮೇಲಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಭಕ್ತರ ಆತಂಕ ಹೆಚ್ಚಿದೆ.

Avail Great Discounts on Amazon Today click here